
ಕಿರುತೆರೆ ರಿಯಾಲಿಟಿ ಶೋ ಹಾಗೂ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿರುವ ನಟಿ ನಯನಾ ಪುಟ್ಟಸ್ವಾಮಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಗಂಡು ಮಗುವಿನ ಕೈ ಬೆರಳ ಫೋಟೋ ಹಂಚಿಕೊಂಡಿದ್ದಾರೆ.
'Its a boy. ಹೆಲೋ ವರ್ಲ್ಡ್' ಎಂದು ನಯನಾ ಬರೆದುಕೊಂಡಿದ್ದಾರೆ. ಗಾಯಕ ಅಲೋಕ್, ನಟ ಪ್ರವೀಣ್ ಮತ್ತು ಶಶಿ ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗದ್ದಾರೆ ಎಂದು ತಿಳಿದು ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಯನಾ ಪುಟ್ಟಸ್ವಾಮಿ ಕೆಲವು ದಿನಗಳ ಹಿಂದೆ ಪತಿ ಚರಣ್ ಮತ್ತು ಸ್ನೇಹಿತರು ಆಯೋಜಿಸಿದ ಬೇಬಿ ಶವರ್ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗಲೇ ಯಾವ ಮಗು ಎಂದು ತಿಳಿದಿತ್ತು. ಆದರೆ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಗೆಸ್ ಮಾಡಿ ಕಾಮೆಂಟ್ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದರು.
ವಿದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಪಡೆದ ಕನ್ನಡದ ನಟಿ ನಯನಾ ಪುಟ್ಟಸ್ವಾಮಿ!
ಪತಿ ಚರಣ್ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕಾರಣ ಕೆಲವು ವರ್ಷಗಳ ಕಾಲ ಅಲ್ಲಿಯೇ ನಯನಾ ಸಿನಿಮಾಗೆ ಸಂಬಂಧಪಟ್ಟ ವಿಚಾರಗಳಲ್ಲಿ ಪ್ರಾವಿಣ್ಯತೆ ಪಡೆದು, ಆನಂತರ ಮತ್ತೆ ಕರ್ನಾಟಕಕ್ಕೆ ಬಂದು ಚಿತ್ರರಗದಲ್ಲಿ ಕೆಲಸ ಮಾಡುವುದಾಗಿ ಈ ಹಿಂದೆ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.