
ಸ್ಯಾಂಡಲ್‌ವುಡ್ ನಟಿ ಕಾವ್ಯಾ ಶೆಟ್ಟಿ (Kavya Shetty) ಹಲವು ವರ್ಷಗಳ ಗ್ಯಾಪ್ನ ಬಳಿಕ ಮತ್ತೆ ಕಾಲಿವುಡ್‌ಗೆ (Kollywood) ಮರಳಿದ್ದಾರೆ. ನಟ ಆರ್ಯ (Arya) ಜೊತೆಗೆ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟಿಟಿಯಲ್ಲಿಯೇ ಎರಡು ಹಿಟ್ ಸಿನಿಮಾ ನೀಡಿದ ನಟ ಆರ್ಯ ನಟಿಸುತ್ತಿರುವ ಹೊಸ ಚಿತ್ರಕ್ಕೆ ಕಾವ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ಟಿಕ್ ಟಿಕ್ ಟಿಕ್' ಮತ್ತು ಇತ್ತೀಚೆಗೆ ಬಿಡುಗಡೆ ಆಗಿದ್ದ 'ಟೆಡ್ಡಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ಶಕ್ತಿ ಸೌಂದರ್ ರಾಜನ್ (Shakti Soundar Rajan) ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವೂ ಸಹ ನಿರ್ದೇಶಕರ ಹಿಂದಿನ ಸಿನಿಮಾಗಳನ್ನೇ ಹೋಲುವ ಸೈನ್ಸ್ ಫಿಕ್ಷನ್ (Science Fiction) ಶೈಲಿಯಲ್ಲಿ ಇರಲಿದೆಯಂತೆ. ಸಿನಿಮಾದ ಹೆಸರು ಇನ್ನಷ್ಟೇ ಫೈನಲ್ ಆಗಬೇಕಿದೆ.
ಸದ್ಯ ಶೂಟಿಂಗ್ ಆರಂಭವಾಗಿದ್ದು, ಚಿತ್ರೀಕರಣದಲ್ಲಿ ಕಾವ್ಯಾ ಭಾಗಿಯಾಗಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಆಗಿದ್ದು, ಕಾವ್ಯಾ ಆ್ಯಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆರ್ಯ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಕಾವ್ಯಾ, ಅವರ ಇತ್ತೀಚಿನ 'ಸರಪಟ್ಟ ಪರಂಬರೈ' ಮತ್ತು 'ಟೆಡ್ಡಿ' ಚಿತ್ರಗಳನ್ನು ವೀಕ್ಷಿಸಿದ್ದೇನೆ. ಅವರೊಂದಿಗೆ ನಟಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಈ ಸಿನಿಮಾದಲ್ಲಿ ನನಗೆ ಆಕ್ಷನ್ ಅವತಾರ ಇರುವುದರಿಂದ, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದೇನೆ. ಜೀವರಕ್ಷಕ ಕಲೆಯ ಮೊರೆ ಹೋಗಿದ್ದೇನೆ ಎಂದು ತಿಳಿಸಿದರು.
ಮೋಹನ್‌ಲಾಲ್ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ: ಕಾವ್ಯ ಶೆಟ್ಟಿ
ಜೊತೆಗೆ 2015ರಲ್ಲಿ ತೆರೆಕಂಡ 'ಇದು ಎನ್ನ ಮಾಯಂ' ಎಂಬ ತಮಿಳು ಚಿತ್ರದಲ್ಲಿ ಮೊದಲೇ ನಟಿಸಿದ್ದೇನೆ. ಅದಾದ ಬಳಿಕ ಒಳ್ಳೆಯ ಅವಕಾಶಕ್ಕೆ ಕಾದಿದ್ದೆ. ಇದೀಗ ಅದು ಈ ಚಿತ್ರದ ಮೂಲಕ ಸಿಕ್ಕಿದೆ ಎನ್ನುತ್ತಾರೆ ಕಾವ್ಯಾ ಶೆಟ್ಟಿ. ಇನ್ನು ಕಾವ್ಯಾಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕನ್ನಡದ 'ರವಿ ಬೋಪಣ್ಣ' (Ravi Bopanna) ಮತ್ತು 'ಕಾಡಾ' (Kaada) ಸಿನಿಮಾ ಕೆಲಸ ಮುಗಿಸಿರುವ ಕಾವ್ಯಾ, ತೆಲುಗಿನಲ್ಲಿ 'ಗುರ್ತಂದಾ ಸೀತಾಕಲಂ'ನಲ್ಲೂ ನಟಿಸಿದ್ದಾರೆ. ಮಲಯಾಳಂನ 'ಬ್ರೋ ಡ್ಯಾಡಿ' ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಇನ್ನು ಕಾವ್ಯಾ ಶೆಟ್ಟಿ, ಕಾರ್ತಿಕ್ ಜಯರಾಮ್( ಜೆಕೆ ) ಅಭಿನಯದ 'ಕಾಡಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. 'ಕಾಡ' ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ. 'ಮಂಜರಿ' ನಿರ್ದೇಶಕ ವಿಶ್ರುತ್ ನಾಯಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾ. ಅಚ್ಯುತ ಕುಮಾರ್ ಮತ್ತು ಉಗ್ರಂ ಮಂಜು ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಪ್ಲೆಂಡಿಡ್ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಂದು ಸಂಗೀತ ಸಂಯೋಜನೆ ಮತ್ತು ಅರುಣ್ ಸುರೇಶ್ ಅವರ ಛಾಯಾಗ್ರಹಣವಿದೆ.
ಕ್ರೇಜಿಸ್ಟಾರ್ ಜತೆ ಕಾವ್ಯ ಶೆಟ್ಟಿ; 'ರವಿಬೋಪಣ್ಣ' ಚಿತ್ರದ ಗ್ಲಾಮರ್ ಟೀಸರ್ ಬಿಡುಗಡೆ!
ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ನಟ ಲೂಸ್ ಮಾದ ಯೋಗಿ ಅಭಿನಯದ 'ಲಂಕೆ' (Lanke) ಚಿತ್ರದಲ್ಲಿ ಕಾವ್ಯಾ ಶೆಟ್ಟಿ ನೆಗೆಟಿವ್ ರೋಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕೃಷಿ ತಾಪಂಡ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ವಾಣಿಶ್ರೀ ಹಾಗೂ ಇನ್ನಿತರ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿತ್ತು ರಾಮ್ ಪ್ರಸಾದ್ ನಿರ್ದೇಶನ ಈ ಚಿತ್ರಕ್ಕಿದ್ದು, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ, ರಮೇಶ್ ಬಾಬು ಕ್ಯಾಮೆರಾ ಕೈಚಳಕವಿತ್ತು. ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ (Sanchari Vijay) ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.