ಕಣ್ಣೆದುರೇ ನರಳುವುದನ್ನು ನೋಡೋದು ಕಷ್ಟ; ನಟಿ ದಿಶಾ ಮದನ್ ಕೊರೋನಾ ಗೆದ್ದ ಕತೆ!

By Suvarna NewsFirst Published May 13, 2021, 11:23 AM IST
Highlights

ಸೋಷಿಯಲ್ ಮೀಡಿಯಾ ಸ್ಟಾರ್, ನಟಿ ದಿಶಾ ಮದನ್ ಕುಟುಂಬ ಕೊರೋನಾ ಗೆದ್ದ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರಿಗೆ ಧೈರ್ಯ ತುಂಬಿದ್ದಾರೆ. 

ಸೋಷಿಯಲ್ ಮೀಡಿಯಾ ಸ್ಟಾರ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತೆ, ಫ್ರೆಂಜ್ ಬಿರಿಯಾನಿ ನಟಿ ದಿಶಾ ಮದನ್ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇಡೀ ಕುಟುಂಬವೇ ಕೊರೋನಾ ಎದುರಿಸಿದ್ದು ಹೇಗೆ, ಏನೆಲ್ಲಾ ಮನೆ ಮದ್ದು ಪ್ರಯೋಗ ಮಾಡಿದರು ಹಾಗೂ ಕರ್ನಾಟಕದಲ್ಲಿ ಆಸ್ಪತ್ರೆ  ವ್ಯವಸ್ಥೆ ಹೇಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಡೀ ಕುಟುಂಬಕ್ಕೆ ಜ್ವರ:
'ಒಂದು ಶನಿವಾರ ರಾತ್ರಿ, ನನ್ನ ತಾಯಿಯಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಜ್ವರ, ಮೈ-ಕೈ ನೋವು ಮತ್ತು ತಲೆ ನೋವು ಹೆಚ್ಚಿತ್ತು. ಕೂರುವ ಸ್ಥಿತಿಯಲ್ಲೂ ಆಕೆ ಇರಲಿಲ್ಲ. ಮಾರನೇ ದಿನ, ನನಗೆ ಹಾಗೂ ನನ್ನ ಪುತ್ರನಿಗೆ ಹೈ ಫೀವರ್ ಬಂತು. ಆನಂತರ ನನ್ನ ತಂದೆಗೂ ಹೈ ಫೀವರ್ ಹಾಗೂ ಮೈ-ಕೈ ನೋವು ಶುರುವಾಯ್ತು. ತಕ್ಷಣವೇ  ಮಾರನೇ ದಿನ ಬೆಳಗ್ಗೆ ಮನೆಯಲ್ಲಿ ಕೊರೋನಾ ಟೆಸ್ಟ್ ಮಾಡಿಸಿದೆವು. ನನ್ನ ತಂದೆ ತಾಯಿಗೆ ನಗೆಟಿವ್ ಬಂತು, ನನ್ನ ಪತಿ, ಪುತ್ರ ಮತ್ತು ನನಗೆ ಪಾಸಿಟಿವ್ ಎಂದು ತಿಳಿದು ಬಂತು' 

ಪೋಷಕರ ಆರೋಗ್ಯ:
'ತಂದೆ-ತಾಯಿಗೆ ನೆಗೆಟಿವ್ ಬಂದರೂ ಲಕ್ಷಣಗಳು ಇದ್ದವು. ತಾಯಿಯ ಆಕ್ಸಿಜನ್ 95 ಇತ್ತು. ಆದರೆ ತಂದೆಯದ್ದು ಮಾತ್ರ 80-85 ನಡುವೆ ಇತ್ತು. ಒಂದು ಕ್ಷಣವೂ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಹೋದೆವು. RT-PCR ತಪ್ಪು ತೋರಿಸುತ್ತದೆ HRCT ಸ್ಕ್ಯಾನ್ ಮಾಡಿ ಎಂದು ವೈದ್ಯರು ಹೇಳಿದ್ದರು. ಆಸ್ಪತ್ರೆಯಲ್ಲಿ ಒಂದು ಹಾಸಿಗೆ ಸಿಗುವುದು ಕಷ್ಟ ಆಗಿತ್ತು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನನ್ನ ಪತಿ ಬೆಡ್ ಹುಡುಕಾಡಿದರು. ಆದರೆ ರಾತ್ರಿ 9.30ಕ್ಕೆ ನಾವು ಸ್ಕ್ಯಾನ್ ಮಾಡಿಸಿದ ಆಸ್ಪತ್ರೆಯಲ್ಲಿ ಎರಡು ಬೆಡ್‌ ಸಿಕ್ಕಿತ್ತು. ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ತಂದೆಗೆ ದಿನಕ್ಕೆ ಕೆಲವು ಗಂಟೆಗಳ ಕಾಲ ಮಾತ್ರ ಆಕ್ಸಿಜನ್ ನೀಡಿದ್ದರು.  ಅವರಿಗೆ ರೆಮ್‌ಡೆಸಿವಿರ್‌ ನೀಡಲಾಗಿತ್ತು. ಕೊನೆ ಡೋಸ್‌ ಸಿಗದ ಕಾರಣ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಲಿ, ಎಂದರು. ಇಬ್ಬರೂ ಗುಣಮುಖರಾಗುತ್ತಿದ್ದ ಕಾರಣ ಕೊನೆಯ ಡೋಸ್ ಬಿಟ್ಟರೂ ತೊಂದರೆ ಇಲ್ಲ ಎಂದರು. ಮನೆಯಲ್ಲಿ ಕಂಸ್ಟ್ರಕ್ಷನ್ ಕೆಲಸ ನಡೆಯುತ್ತಿರುವ ಕಾರಣ ತಂದೆ ತಾಯಿ ಇಬ್ಬರೂ ನಮ್ಮ ಮನೆಯಲ್ಲಿಯೇ ಇದ್ದಾರೆ. ಕಣ್ಣೆದುರು ಅವರು ನರಳುವುದುನ್ನು ನೋಡುವುದಕ್ಕೆ ಕಷ್ಟ ಆಗಿತ್ತು. ನೋವು ಹೇಳಿಕೊಂಡು ಅಳುತ್ತಿದ್ದರು. ನಾವೂ ಅಳುತ್ತಿದೆವು, ಬೇರೆ ಏನೂ ಮಾಡಲು ಆಗುತ್ತಿರಲಿಲ್ಲ.

ಪುತ್ರನ ಆರೋಗ್ಯ:
ಆಸ್ಪತ್ರೆಯಲ್ಲಿ ತಂದೆ,ತಾಯಿ ಚಿಕಿತ್ಸೆ ಪಡೆಯುತ್ತಿದ್ದರೆ, ಮನೆಯಲ್ಲಿ ನನ್ನ ಮಗನಿಗೆ ವೈರಲ್ ಫೀವರ್ ಆಗಿತ್ತು. ಏನೂ ತಿನ್ನುತ್ತಿರಲಿಲ್ಲ. ಬೆಳಗ್ಗೆ ನಿದ್ದೆ ಮಾಡುತ್ತಿದ್ದ ರಾತ್ರಿ ಎಲ್ಲಾ ಎದ್ದು ಕೂರುತ್ತಿದ್ದ. ನನ್ನ ಗಂಡನಿಗೆ ಕೊರೋನಾ ಪಾಸಿಟಿವ್. ಆದರೆ ಯಾವ ಲಕ್ಷಣ ಇಲ್ಲದ ಕಾರಣ ಪುತ್ರನ ಸಂಪೂರ್ಣ ಆರೈಕೆ ಅವರೇ ನೋಡಿಕೊಂಡರು. ವೈದ್ಯರು ನೀಡಿದ ಔಷಧಿಯಿಂದ ಮೂರು-ನಾಲ್ಕು ದಿನಕ್ಕೆ ಗುಣವಾದ. ಈ ಕಷ್ಟ ಪರಿಸ್ಥಿತಿಯಲ್ಲೂ ನಾವು ಬೇಗ ಗುಣಮುಖರಾಗಲು ವಿಹಾನ್ ನಗುವೇ ಕಾರಣ,' ಎಂದಿದ್ದಾರೆ. 

ಪತಿಗೆ 2 ಮಕ್ಕಳು ಬೇಕು, ಪತ್ನಿಗೆ 5 ಮಕ್ಕಳು ಬೇಕು; ನಟಿ ದಿಶಾ ಮದನ್ ವಿಡಿಯೋ ವೈರಲ್! 

ನನ್ನ ಆರೋಗ್ಯ:
ನಾನು 5 ದಿನಗಳ ಕಾಲ ಹಾಸಿಗೆ ಮೇಲೆಯೇ ಇದ್ದೆ. ಟಾಯ್ಲೆಟ್‌ಗೆ ಎದ್ದು ಹೋಗುವುದೂ ಕಷ್ಟವಾಗುತ್ತಿತು. ನನ್ನ ಸ್ನೇಹಿತರೊಬ್ಬರ ಮನೆಯಿಂದ ಅಡುಗೆ ಮಾಡಿ ಕೊಡುತ್ತಿದ್ದರು. ಯಾವುದೇ ರುಚಿ ಸಿಗದಿದ್ದರೂ ಶಕ್ತಿ ಬೇಕೆಂದು ತಿನ್ನುತ್ತಿದೆ. ದಿನಕ್ಕೆ ಎರಡು ಸತಿ ಆದರೂ ಅಳುತ್ತಿದ್ದೆ. ಈ ಸಮಯದಲ್ಲಿ ಮಾನಸಿಕ ಶಕ್ತಿ ತುಂಬಾ ಮುಖ್ಯ. 

20 ದಿನಗಳ ನಂತರ ಮತ್ತೆ ಕೊರೋನಾ ಟೆಸ್ಟ್ ಮಾಡಿಸಿದೆವು. ನನ್ನನ್ನು ಹೊರತು ಪಡಿಸಿ ಎಲ್ಲರಿಗೂ ನೆಗೆಟಿವ್ ಬಂದಿದೆ. 5 ದಿನಗಳ ನಂತರ ನನಗೂ ನೆಗೆಟಿವ್ ಬಂತು. ಮನೆಯಲ್ಲಿದ್ದರೂ ಮಾಸ್ಕ್ ಹಾಕಿಕೊಳ್ಳಿ, ಮನೆಯಲ್ಲಿ ತಪ್ಪದೇ ಆಕ್ಸಿಮೀಟರ್ ಇರಲಿ. ದಿನಕ್ಕೆ ಮೂರು ಸಲ ಚೆಕ್ ಮಾಡಿಸಿಕೊಳ್ಳಿ. ವೈದ್ಯರು ನೀಡುವ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಿ. ಪದೆ ಪದೇ ಕೈ ತೊಳೆದುಕೊಂಡು ಸ್ವಚ್ಛೆತೆಯಿಂದ ಇರಿ. ಎಲ್ಲದರ ನಡುವೆ ಯೋಗ, ಧ್ಯಾನ ಮಾಡಿ ಮಾನಸಿ ಆರೋಗ್ಯದ ಬಗ್ಗೆ ಗಮನ ನೀಡಿ ಎಂದು ದಿಶಾ ಮದನ್ ಎಲ್ಲರಲ್ಲಿಯೂ ಕೇಳಿಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

 
 
 
 
 
 
 
 
 
 
 
 
 
 
 

A post shared by Disha Madan (@disha.madan)

click me!