ಊಟಕ್ಕಿಂತ ಅಪ್ಪನ ಮೂಗೇ ರುಚಿ; ಯಥರ್ವ್‌ ಯಶ್‌ ವಿಡಿಯೋ ವೈರಲ್!

Published : Aug 07, 2021, 01:25 PM ISTUpdated : Aug 07, 2021, 01:29 PM IST
ಊಟಕ್ಕಿಂತ ಅಪ್ಪನ ಮೂಗೇ ರುಚಿ; ಯಥರ್ವ್‌ ಯಶ್‌ ವಿಡಿಯೋ ವೈರಲ್!

ಸಾರಾಂಶ

ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ತುಂಟ ಯಥರ್ವ್‌ಗೆ ಅಪ್ಪನ ಮೂಗೇ ಬೇಕಂತೆ. 

ರಾಕಿಂಗ್ ಸ್ಡಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಶೇರ್ ಮಾಡುವ ಫ್ಯಾಮಿಲಿ ಫೋಟೋ ಹಾಗೂ ಮಕ್ಕಳ ತುಂಟಾಟದ ವಿಡಿಯೋ ನೋಡಲು ಒಂದು ರೀತಿಯ ಖುಷಿ ಕೊಡುತ್ತೆ. ಅದರಲ್ಲಿಯೂ ಈ ಜೋಡಿಯ ಫ್ಯಾನ್ಸ್ ಇಂಥ ವೀಡಿಯೋಗಳಿಗಾಗಿ ಡಿಮ್ಯಾಂಡ್ ಮಾಡುತ್ತಿರುತ್ತಾರೆ. ಅದರಲ್ಲೂ ಈಗಾಗಲೇ ಸ್ಟಾರ್ ಕಿಡ್ ಪಟ್ಟಿ ಸೇರಿರುವ ಐರಾ ಮತ್ತು ಯಥರ್ವ್‌ಗೆ ಸಾಕಷ್ಟು ಫ್ಯಾನ್‌ ಪೇಜ್‌ಗಳಿವೆ.

ಕೆಲವು ದಿನಗಳ ಹಿಂದೆ ಯಥರ್ವ್ ನಗುತ್ತಿರುವ ಫೋಟೋ ಹಂಚಿಕೊಂಡ ರಾಧಿಕಾ, ಈ ನಾಟಿ ಲುಕ್‌ಗೆ ಕಾರಣವಿದೆ. ಶೀಘ್ರದಲ್ಲಿಯೇ ವಿಡಿಯೋ ಹಂಚಿಕೊಳ್ಳುವೆ ಎಂದು ಹೇಳಿದ್ದರು. ಇದೀಗ ಪತಿ ಯಶ್ ಹಾಗೂ ಮಗನ ಯಥರ್ವ್ ವಿಡಿಯೋ ಹಂಚಿಕೊಂಡಿದ್ದಾರೆ. 'ಊಟಕ್ಕಿಂತ ಯಥರ್ವನಿಗೆ ಅಪ್ಪನ ಮೂಗೇ ರುಚಿ,' ಎಂದು ಬರೆದುಕೊಂಡಿದ್ದಾರೆ. ತಂದೆಯ ಮೇಲೆ ಕುಳಿತುಕೊಂಡ ಯಥರ್ವ್ ಮೂಗು ಕಚ್ಚುವ ಪ್ರಯತ್ನ ಮಾಡುತ್ತಿದ್ದಾನೆ. ನೀವು Zoombieನಾ? ಹೀಗೆ ಯಾಕೆ ಮಾಡುತ್ತಿದ್ಯಾ, ಅಬ್ಬು ಆಗುತ್ತೆ ಅಂತ ಯಶ್ ಹೇಳಿದರೂ ಕೇಳದೆ, ಮತ್ತೆ ಮೂಗು ಕಚ್ಚಲು ಮಗ ಮುಂದಾಗುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. 

ಯಥರ್ವ್ ಯಶ್ ತುಂಟ ನಗುವಿನ ಪೋಟೋ ಹಿಂದಿದೆ ರಹಸ್ಯ...

ಯಥರ್ವ್ ಯಶ್ ತುಂಟಾಟ ಮಾಡುತ್ತಿದ್ದರೆ, ಪಕ್ಕದಲ್ಲಿ ಐರಾ ತನ್ನ ಪಾಡಿಗೆ ತಾನು ಯಾವುದೋ ಹಾಡು ಹೇಳುತ್ತಿದ್ದಾಳೆ. 'ಐರಾ ಯಾವ ಹಾಡು ಹೇಳುತ್ತಿದ್ದಾಳೆ', 'ಯಥರ್ವ್ ಯಾಕೆ ಭಾಷೆ ಮಾತನಾಡುವುದು?', 'ನಿಮ್ಮ ಮನೆಯ ವಿಡಿಯೋ ಹಂಚಿಕೊಳ್ಳಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪುತ್ರಿ ಐರಾ ಜೊತೆ ಸೆಲ್ಫಿ ಶೇರ್ ಮಾಡಿಕೊಂಡಿದ್ದರು, ಮನೆಯ ತುದಿಯಲ್ಲಿ ನಿಂತು ಕಾಮನ ಬಿಲ್ಲು ನೋಡುತ್ತಿರುವ ಫೋಟೋವದು. ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಂ ಮೂಲಕ ಸ್ಯಾಂಡಲ್‌ವುಡ್ ಸಿಂಡ್ರೆಲಾ ಸದಾ ಸಂಪರ್ಕದಲ್ಲಿರುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂದಕ್ಕೆ ಕಡಿಮೆಯೇ ಇಲ್ಲ, ಆದರೆ ಅವಕಾಶಗಳೇ ಇಲ್ಲವೇ? ಮುಂಗಾರು ಮಳೆ ಸುಂದರಿ ನೇಹಾ ಶೆಟ್ಟಿಗೆ ಏನಾಯ್ತು?
'ಯಶ್ ಜೊತೆ ಫ್ರೆಂಡ್‌ಶಿಪ್ ಮಾಡ್ಬೇಡಿ, ಅವ್ರು ಕ್ಲಾಶ್ ಮಾಡ್ತಾರೆ' ಅಂದಿದ್ರಾ ರಣವೀರ್ ಸಿಂಗ್? ಇದಕ್ಕೆ ಯಶ್ ಹೇಳಿದ್ದೇನು? ಇಲ್ಲೊಂದು ಟ್ವಿಸ್ಟ್ ಇದೆ!!