
ಸ್ಯಾಂಡಲ್‌ವುಡ್ 'ಬುದ್ಧೀವಂತ' ಹಾಗೂ ರಿಯಲ್ ಸ್ಟಾರ್ ಉಪೇಂದ್ರ ದುಬಾರಿ ಕಾರು ಖರೀದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳು ವೈರಲ್ ಆಗುತ್ತಿದ್ದು ಅಭಿಮಾನಿಗಳು 'ಸರ್ ನಿಮ್ಮ ಗ್ಯಾರೇಜ್‌ನಲ್ಲಿ ಎಷ್ಟು ಕಾರುಗಳಿವೆ' ಎಂದು ಪ್ರಶ್ನಸಿದ್ದಾರೆ.
ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಎಂಟ್ರಿ ಕೊಡಬೇಕೆಂದು ಪ್ಲ್ಯಾನ್ ಮಾಡಿಕೊಂಡಿರುವ ಉಪ್ಪಿ, ತಮ್ಮ ಹುಟ್ಟುಹಬ್ಬದ ದಿನ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ಹೊಸ ಕಾರನ್ನೂ ಕೂಡ ಬರ ಮಾಡಿಕೊಂಡಿದ್ದಾರೆ.
33ರಿಂದ 43 ಲಕ್ಷ ರೂಪಾಯಿ ಬೆಲೆಯ ಕಿಯಾ ಕಾರ್ನಿವಲ್ ಕಾರು ಖರೀದಿಸಿದ್ದಾರೆ. ತಾಯಿಯೊಟ್ಟಿಗೆ ಕಾರನ್ನು ಅನಾವರಣ ಮಾಡುತ್ತಿರುವ ಉಪ್ಪಿ ಫೋಟೋ ಇದು. ಈ ಹಿಂದೆ ಸುಮಾರು 1.35 ಕೋಟಿ ಬೆಲೆಯ ಜಾಗ್ವಾರ್ ಹಾಗೂ ಪಜೇರೋ ಸ್ಪೋರ್ಟ್ ಎಸ್‌ಯುವಿ ಕಾರ ಜೊತೆಗೆ ಸೂಪರ್ ಬೈಕ್ ಕೂಡ ಖರೀದಿಸಿದ್ದರು. ಉಪ್ಪಿ ಆಟೋಮೊಬೈಲ್ ಕ್ರೇಜ್‌ಗೆ ಅಭಿಮಾನಿಗಳು ಥ್ರಿಲ್ ಆಗುತ್ತಿದ್ದಾರೆ.
ಹುಟ್ಟುಹಬ್ಬಕ್ಕೆ ಸೂಪರ್ ಗಿಫ್ಟ್ ಕೊಟ್ಟ ಉಪ್ಪಿ; ನಿಖಿಲ್ ಪತ್ನಿ ಕುಕ್ಕಿಂಗ್ ವಿಡಿಯೋ ನೋಡಿ!
ಇನ್ನು 'ಐ ಲವ್ ಯು' ಚಿತ್ರದ ನಂತರ ಮತ್ತೆ ಆರ್ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ರಿಯಲ್ ಸ್ಟಾರ್. ಈ ಸಿನಿಮಾ ಸುಮಾರು 8 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.