ರಮೇಶ್‌ ಮಗಳು ಮದುವೆ ಸಂಭ್ರಮ;ಪ್ರೀತಿಸಿದ ಹುಡುಗ ಅಕ್ಷಯ್‌ ಕೈ ಹಿಡಿಯುತ್ತಿರುವ ನಿಹಾರಿಕಾ

Kannadaprabha News   | Asianet News
Published : Dec 25, 2020, 04:50 PM IST
ರಮೇಶ್‌ ಮಗಳು ಮದುವೆ ಸಂಭ್ರಮ;ಪ್ರೀತಿಸಿದ ಹುಡುಗ ಅಕ್ಷಯ್‌ ಕೈ ಹಿಡಿಯುತ್ತಿರುವ ನಿಹಾರಿಕಾ

ಸಾರಾಂಶ

ರಮೇಶ್‌ ಅರವಿಂದ್‌ ಅಂದಾಕ್ಷಣ ನೆನಪಾಗುವುದು ವಧೂವರರನ್ನು ಮುಂದೆ ಕೂರಿಸಿಕೊಂಡು ಹಾಡಿದ ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ.. ಹಾಡು. ಅವರ ಚಿತ್ರಗಳನ್ನು ನೆನಪಿಸಿಕೊಂಡರೆ ಕಣ್ಮುಂದೆ ಬರುವುದು ಅನುರಾಗ ಸಂಗಮ, ಪಂಚಮವೇದ, ನಮ್ಮೂರ ಮಂದಾರ ಹೂವೆ, ಚಂದ್ರಮುಖಿ ಪ್ರಾಣಸಖಿ, ಸಂಭ್ರಮ, ಸುಂದರಸ್ವಪ್ನಗಳು ಮತ್ತು ಮದುವೆ.

ಮಧ್ಯಮವರ್ಗ ಡಾರ್ಲಿಂಗ್‌ ಆಗಿದ್ದ, ಇದ್ದರೆ ಇಂಥ ಒಬ್ಬ ಗೆಳೆಯನಿರಬೇಕು ಅಂತ ಹುಡುಗಿಯೂ ಅಳಿಯನಿರಬೇಕು ಅಂತ ಕನ್ಯಾಪಿತನೂ ಆಶೆಪಡುತ್ತಿದ್ದ ಚೆಂದದ ಹುಡುಗ ರಮೇಶ್‌ ಈಗ ಮಾವ ಆಗುತ್ತಿದ್ದಾರೆ.

ನಟ ಎನ್ನುವುದು ಬ್ಯೂಟಿಫುಲ್‌ ರೋಲ್‌; ರಮೇಶ್‌ ಅರವಿಂದ್‌ ಸ್ಫೂರ್ತಿ ಕಥೆ! 

ಹೌದು. ರಮೇಶ್‌ ಮಗಳು ನಿಹಾರಿಕಾ ಮದುವೆ ಇದೇ ಡಿಸೆಂಬರ್‌ 28ರ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆಯಲಿದೆ. ರಮೇಶ್‌ ಅಳಿಯನಾಗುತ್ತಿರುವವರ ಹೆಸರು ಅಕ್ಷಯ್‌. ನಿಹಾರಿಕಾ ಮತ್ತು ಅಕ್ಷಯ್‌ ಕೆಲವು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿ ಪರಸ್ಪರರು ಮೆಚ್ಚಿಕೊಂಡು ಹಿರಿಯರಿಗೆ ವಿಷಯ ತಿಳಿಸಿ ಈಗ ಅವರ ಪ್ರೇಮವು ವಿವಾಹ ಮಂಟಪದ ತನಕ ಬಂದಿದೆ.

‘ಮಗಳ ಮದುವೆಯ ಸಂಭ್ರಮವೇ ಬೇರೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಅದೊಂದು ಸಂತೋಷದ ಸಂಗತಿ. ಮದುವೆಯ ಸಂಭ್ರಮಕ್ಕೆ ಎರಡೂ ಕುಟುಂಬದವರು ಮಾತ್ರ ಇರುತ್ತೇವೆ. ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಇಟ್ಟುಕೊಂಡಾಗ ಚಿತ್ರೋದ್ಯಮದ ಗೆಳೆಯರನ್ನೂ ಇತರ ಮಿತ್ರರನ್ನೂ ಕರೆಯಲು ತೀರ್ಮಾನಿಸಿದ್ದೇನೆ. ಡಿಸೆಂಬರ್‌ 28 ರ ಬೆಳಗ್ಗೆ 10:50ಕ್ಕೆ ಮುಹೂರ್ತ. ಐಯಾಮ್‌ ಎಕ್ಸೈಟೆಡ್‌’ ಅಂದರು ರಮೇಶ್‌ ಅರವಿಂದ್‌.

`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್‌

ಅಕ್ಷಯ್‌ ಖಾಸಗಿ ಸಂಸ್ಥೆಯೊಂದರಲ್ಲಿ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌ ಡಿಸೈನರ್‌ ಆಗಿದ್ದಾರೆ. ಮಗಳು ಪ್ರಾಡಕ್ಟ್ ಮ್ಯಾನೇಜರ್‌ ಆಗಿ ವೃತ್ತಿ ಮಾಡುತ್ತಿದ್ದಾರೆ. ರಮೇಶ್‌ ಅರವಿಂದ್‌ ಮತ್ತು ಅರ್ಚನಾ ದಂಪತಿಗಳ ಬಹುದೊಡ್ಡ ಬಳಗದ ಸಂಭ್ರಮವೂ ಆಗಲಿರುವ ಈ ಮದುವೆಗೂ ಆರತಕ್ಷತೆಗೂ ಎರಡು ವಾರಗಳ ಅಂತರ ಇಟ್ಟುಕೊಂಡಿರುವುದು ಕೂಡ ರಮೇಶ್‌ ಅವರ ಮುಂದಾಲೋಚನೆಗೆ ಸಾಕ್ಷಿ. ಕ್ವಾರಂಟೈನ್‌ ಅವಧಿಯ ನಂತರ ಮತ್ತೊಂದು ಕಾರ್ಯಕ್ರಮ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?