ಕೊನೆಗಾಲದಲ್ಲಿ 'ಗಂಧದ ಗುಡಿ' ಖ್ಯಾತಿ ಎಂಪಿ ಶಂಕರ್ ಭಾರಿ ಸಂಕಟ ಅನುಭವಿಸಲು ಕಾರಣವೇನು?

By Shriram Bhat  |  First Published Aug 29, 2024, 7:35 PM IST

ಕನ್ನಡದ ನಟ ಹಾಗು ನಿರ್ಮಾಪಕರಾಗಿದ್ದ ಎಂಪಿ ಶಂಕರ್ ಅವರು, ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ನಟನೆಯ 'ಗಂಧದ ಗುಡಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಒಂದು ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಜೊತೆಗೆ, ಭೂತಯ್ಯನ ಮಗ ಅಯ್ಯು..


ಕನ್ನಡ ಚಿತ್ರರಂಗದಲ್ಲಿ ಎಂಪಿ ಶಂಕರ್ (MP Shankar) ಅವರದು ಮರೆಯಲಾಗದ ಹೆಸರು. 70-80ರ ದಶಕದಲ್ಲಿ ಅವರ ಹೆಸರನ್ನು ಕೇಳದ ಕನ್ನಡಿಗರಿಲ್ಲ. ಗಂಧದ ಗುಡಿ (Gandhada Gudi) ಚಿತ್ರದ ಸಮಯದಲ್ಲಂತೂ ಎಂಪಿ ಶಂಕರ್ ಅವರ ಹೆಸರು ಹೆಚ್ಚು ಪ್ರಚಾರ ಪಡೆದಿತ್ತು. ಅವರು ತಮ್ಮ ಕೊನೆಯ ದಿನಗಳನ್ನು ತುಂಬಾ ನೋವಿನಲ್ಲಿ ಕಳೆಯಬೇಕಾಗಿ ಬಂತು. ಅದು ಯಾಕೆ ಹಾಗಾಯ್ತು? ಎಂಪಿ ಶಂಕರ್ ಅವರೇನಾದ್ರೂ ಯಾರೂ ಮಾಡದ, ಮಾಡಬಾರದ ತಪ್ಪನ್ನೇನಾದ್ರೂ ಮಾಡಿದ್ರಾ? 

ಇಲ್ಲ, ಛೇ ಅಂಥದ್ದೇನೂ ನಡೆದಿಲ್ಲ. ಆದರೆ ಎಂಪಿ ಶಂಕರ್ ಅವರು ತಮ್ಮ ಮಗ ವಿರೂಪಾಕ್ಷ ಅವರನ್ನು ಹೀರೋ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರ ಮಗ ವಿರೂಪಾಕ್ಷ ತಾವು ಹೀರೋ ಆಗಬೇಕೆಂದು ವಿಪರೀತ ಕನಸು ಕಂಡಿದ್ದರು. ಆದರೆ ಅದು ಸಾಧ್ಯವಾಗದಿದ್ದಾಗ ಅವರು ಖಿನ್ನತೆಗೆ ಜಾರಿ, ಅದೇ ಕೊರಗಿನಲ್ಲಿ ಪ್ರಾಣತ್ಯಾಗ ಮಾಡಿದರು. 

Latest Videos

undefined

'ಕಣಂಜಾರು' ಪ್ರೇಮ ಶೃಂಗಾರಕ್ಕೆ ಮನಸೋತ ಫ್ಯಾನ್ಸ್, ಬಾಲಚಂದ್ರಗೆ ಅಪೂರ್ವ ಸಾಥ್!

ಮಗನ ಸಾವಿನಿಂದ ಎಂಪಿ ಶಂಕರ್ ಅವರ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಅದೇ ದುಃಖದಲ್ಲಿ ಎಂಪಿ ಶಂಕರ್ ಅವರು ದಿನಗಳನ್ನು ಕಷ್ಟದಿಂದ ಕಳೆಯುತ್ತಿದ್ದರು. ತಮ್ಮ ಸಿನಿಮಾಗಳ ರೈಟ್ಸ್‌ಗಳನ್ನು ತುಂಬಾ ಕಡಿಮೆ ಬೆಲೆಗೆ ಮಾರಿಕೊಂಡರು. ಕೊನೆಗೆ, ಆರ್ಥಿಕ ಸಂಕಷ್ಟ ತಾಳಲಾರದೇ ತಮ್ಮಲ್ಲಿದ್ದ ಸಿನಿಮಾ ಸಾಮಗ್ರಿಗಳನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡಿ ಜೀವನ ನಿರ್ವಹಿಸಿದರು. 

ಕೊನೆಗೆ ತಮ್ಮಲ್ಲಿದ್ದ ಎಲ್ಲಾ ಅಸ್ತಿಯನ್ನೂ ಮಾರಿಕೊಂಡು ಬಂದ ಹಣದಲ್ಲಿ ಒಂದು ಸ್ವಂತ ಮನೆಯನ್ನು ಮಾಡಿಕೊಂಡರು. ಆದರೆ, ಸಾಯುವವರೆಗೂ ತಮ್ಮ ಮಗನ ಅಗಲಿಕೆ ನೋವನ್ನು ತುಂಬಾನೇ ಅನುಭವಿಸುತ್ತಿದ್ದರು. ಅದನ್ನು ಸಿಕ್ಕಸಿಕ್ಕವರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಒಂದು ಕಾಲದಲ್ಲಿ ಸಿಂಹದಂತೆ ಘರ್ಜಿಸಿ ಮೆರೆದಿದ್ದ ಎಂಪಿ ಶಂಕರ್ ಅವರು ಕೊನೆಗಾಲದಲ್ಲಿ ಅದೆಷ್ಟು ನೋವು, ಸಂಕಟ ಪಡುತ್ತಿದ್ದರು ಎಂದರೆ ಅದನ್ನು ನೋಡಿದವರು ಕಣ್ಣೀರು ಹಾಕಿದ್ದರಂತೆ.

ಸಾಯಿಕುಮಾರ್ ಡ್ಯೂಪ್ ಆಗಿದ್ರು ಶಿವರಾಜ್‌ಕುಮಾರ್, ಯಾವ ಸಿನಿಮಾ & ಯಾಕೆ ಆಗಿದ್ದು ಗೊತ್ತಾ? 

ಅಂದಹಾಗೆ, ಕನ್ನಡದ ನಟ ಹಾಗು ನಿರ್ಮಾಪಕರಾಗಿದ್ದ ಎಂಪಿ ಶಂಕರ್ ಅವರು, ಡಾ ರಾಜ್‌ಕುಮಾರ್ (Dr Rajkumar), ವಿಷ್ಣುವರ್ಧನ್ (Vishnuvardhan) ನಟನೆಯ 'ಗಂಧದ ಗುಡಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಒಂದು ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಜೊತೆಗೆ, ಭೂತಯ್ಯನ ಮಗ ಅಯ್ಯು, ನಾಗರಹಾವು ಹಾಗು ಸತ್ಯ ಹರಿಶ್ಚಂದ್ರ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. 72ನೇ ವಯಸ್ಸಿನಲ್ಲಿ, 2008ರಲ್ಲಿ ಅವರು ಇಹಲೋಕ ತ್ಯಜಿಸಿದರು. 

click me!