ಅಪರೂಪದ ಸಿನಿಮಾಗಳಲ್ಲಿ ಒಂದು Totapuri: ಜಗ್ಗೇಶ್‌

By Kannadaprabha News  |  First Published Sep 8, 2022, 9:48 AM IST

ನವರಸ ನಾಯಕ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.


‘ನನ್ನ ಸಿನಿ ಬದುಕಿನಲ್ಲಿ ತೋತಾಪುರಿ ಸಿನಿಮಾ ಒಂದು ಅದ್ಭುತ ಜರ್ನಿ. ಇದು ಸಿನಿಮಾಗಿಂತ ಹೆಚ್ಚಾಗಿ ನೆನಪಲ್ಲಿ ಉಳಿಯುವ ಒಂದು ಕಾದಂಬರಿ. ಅದೆಷ್ಟೋ ಸಿನಿಮಾಗಳು ಬರುತ್ತವೆ, ಹೋಗುತ್ತವೆ. ಕೆಲವು ಮಾತ್ರ ಅಪರೂಪದ ಸಿನಿಮಾ ಆಗಿ ಉಳಿಯುತ್ತವೆ. ಅಂಥದ್ದೊಂದು ಅಪರೂಪದ ಸಿನಿಮಾ ಇದು. ವಿಜಯಪ್ರಸಾದ್‌ ಬಯಸಿದರೂ ಮತ್ತೊಮ್ಮೆ ಇಂಥಾ ಸಿನಿಮಾ ಮಾಡೋಕೆ ಆಗುವುದಿಲ್ಲ. ರಾಷ್ಟ್ರಮಟ್ಟದ ಮೆಸೇಜ್‌ ಕೊಟ್ಟಿದ್ದಾರೆ. ಈ ಅಪರೂಪದ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವುದು ನನಗೆ ದೊಡ್ಡ ಸಮಾಧಾನ’.

- ಈ ಮಾತುಗಳನ್ನು ಹೇಳಿದ್ದು ಜಗ್ಗೇಶ್‌. ಅವರು ನಟಿಸಿರುವ ‘ತೋತಾಪುರಿ’ ಸಿನಿಮಾ ಸೆ.30ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಿನಿಮಾದ ನಿರ್ಮಾಪಕ ಸುರೇಶ್‌ ಬಹಳ ತಾಳ್ಮೆಯಿಂದ ಸಿನಿಮಾ ಮಾಡಿದ್ದಾರೆ. ಅವರಿಗೇನಾದರೂ ತೊಂದರೆ ಆದರೆ ನಾನು ವೃತ್ತಿಯೇ ಬಿಟ್ಟುಬಿಡುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಈ ಸಿನಿಮಾ ಗೆಲ್ಲಬೇಕು’ ಎಂದರು.

Tap to resize

Latest Videos

ನಿರ್ದೇಶಕ ವಿಜಯ ಪ್ರಸಾದ್‌, ‘ಈ ಸಿನಿಮಾದಲ್ಲಿ ಎಲ್ಲರೂ ಮನುಷ್ಯರಂತೆ ಜೊತೆ ನಿಂತಿದ್ದಾರೆ. ಮನುಷ್ಯ ಮನುಷ್ಯರು ಒಬ್ಬರನ್ನೊಬ್ಬರು ಪ್ರೀತಿಯಿಂದ ತಬ್ಬಿಕೊಂಡರೆ ಎಲ್ಲವೂ ಚೆನ್ನಾಗಿರುತ್ತದೆ. ಆ ಅರಿವು ಮೂಡಿಸುವ ಸಿನಿಮಾ ಈ ತೋತಾಪುರಿ’ ಎಂದರು.

ನಿರ್ಮಾಪಕ ಸುರೇಶ್‌, ‘ಈ ಸ್ಕಿ್ರಪ್‌್ಟಕೇಳಿದ ಮರುಕ್ಷಣವೇ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಇದೊಂದು ದೇಶ ಮೆಚ್ಚುವ ಸ್ಕಿ್ರಪ್‌್ಟ. ಈ ಸಿನಿಮಾದಿಂದ ಜಗ್ಗೇಶ್‌ ನನಗೆ ದೇವರ ಸಮಾನ ಆಗಿಬಿಟ್ಟರು. ಅಷ್ಟುಸಪೋರ್ಚ್‌ ಮಾಡಿದ್ದಾರೆ’ ಎಂದರು.

ತೋತಾಪುರಿ ವೇದಿಕೆಯಲ್ಲೇ ಅದಿತಿಗೆ ಜಗ್ಗೇಶ್ ಕ್ವಾಟ್ಲೆ ವಿಡಿಯೋ ವೈರಲ್..!

ಅದಿತಿ ಪ್ರಭುದೇವ, ವಿಜಯಪ್ರಸಾದ್‌ ಅವರಿಗೆ ಪೋಲಿ ಅಲ್ಲ ತುಂಟ ನಿರ್ದೇಶಕು ಎಂದು ಬಿರುದು ಕೊಟ್ಟು, ‘ಈ ಸಿನಿಮಾದಲ್ಲಿರುವ ಮೌಲ್ಯಗಳ ಮುಂದೆ ಚೇಷ್ಟೆಮನಸ್ಸಲ್ಲಿ ನಿಲ್ಲಲ್ಲ’ ಎಂದು ಹೇಳಿದರು.

ಡಾಲಿ ಧನಂಜಯ್‌, ‘ಈ ಸಿನಿಮಾದಲ್ಲಿ ಬೇರೆ ಥರ ಪಾತ್ರ ಇದೆ. ನಿರ್ದೇಶಕರು ಇದೊಂದು ಬೋಲ್ಡ್‌ ಪಾತ್ರ, ಮಾಡ್ತೀರಾ ಎಂದು ಕೇಳಿದರು. ನಾನು ಕತೆ ಕೇಳಿದೆ. ಥ್ರಿಲ್‌ ಆಗಿ ಒಪ್ಪಿಕೊಂಡೆ. ಇಷ್ಟವಾದ ಕತೆ ಸಿನಿಮಾದಲ್ಲಿದೆ. ಈ ಸಿನಿಮಾ ಅನೇಕ ಒಳ್ಳೆಯ ನೆನಪುಗಳನ್ನು ಕೊಟ್ಟಿದೆ’ ಎಂದರು. ಸುಮನ್‌ ರಂಗನಾಥ್‌ ಅವರು ವಿಜಯಪ್ರಸಾದ್‌ರನ್ನು ಬಾಯಿ ತುಂಬಾ ಹೊಗಳಿದರು. ವೀಣಾ ಸುಂದರ್‌ ತಾನು ಇದುವರೆಗೂ ಇಂಥಾ ಬೋಲ್ಡ್‌ ಪಾತ್ರದಲ್ಲಿ ನಟಿಸಿಲ್ಲ ಎಂದು ಹೇಳಿಕೊಂಡರು. ಹೇಮಾ ದತ್‌ ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸಿದ ಸಾರ್ಥಕತೆ ಹಂಚಿಕೊಂಡರು. ಶ್ರೀಕಾಂತ್‌ ಹೆಬ್ಳೀಕರ್‌, ರಾಜೇಶ್‌, ಅನುಷಾ, ರಾಜೇಶ್ವರಿ, ವಿನಯ್‌ ಇದ್ದರು.

5ಮಿಲಿಯನ್‌ಗೂ ಹೆಚ್ಚು ಮನಗಳ ಗೆದ್ದ ಟ್ರೇಲರ್

ಇದೀಗ ಆರಂಭದಿಂದಲೂ ಸೆನ್ಸೇಶನ್ ಕ್ರಿಯೇಟ್ ಮಾಡಿಕೊಂಡು ಬಂದ ‘ತೋತಾಪುರಿ’ ಬಿಡುಗಡೆ ಸನಿಹಕ್ಕೆ ಬಂದು ನಿಂತಿದೆ. ತೋತಾಪುರಿ ಅಂತ ಯಾಕಿಟ್ರು, ಏನ್ ಹೇಳೋಕೆ ಹೊರಟಿದ್ದಾರೆ ಅನ್ನೋದನ್ನ ತಿಳಿದುಕೊಳ್ಳೋಕು ಹೆಚ್ಚು ದಿನ ಇಲ್ಲ.ಹೌದು, ಸೆನ್ಸೇಷನಲ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಚಿತ್ರಮಂದಿರಕ್ಕೆ ಕಾಲಿಡ್ತೀವಿ ಅನ್ನೋ ಸುಳಿವನ್ನು ಚಿತ್ರತಂಡ ನೀಡಿದೆ. ಡೇಟ್ ಅನೌನ್ಸ್ ಆಗಬೇಕಿದೆಯಷ್ಟೇ. ಟ್ರೇಲರ್ ಬಿಡುಗಡೆ ಆಗಿದ್ದೇ ಆಗಿದ್ದು ತೋತಾಪುರಿ ಹವಾ ಮತ್ತಷ್ಟು ಜೋರಾಗಿದೆ. ಸಿನಿಮಾದಲ್ಲೇನೋ ವಿಶೇಷ ಅಂಶ ಇದೆ ಅನ್ನೋದನ್ನು ಅದೇ ಟ್ರೇಲರ್ ಹೇಳುತ್ತಿದೆ. ಸಾಮರಸ್ಯ, ಕರ್ಮ, ಧರ್ಮ, ಜಾತಿ, ನಂಬಿಕೆ ಹೀಗೆ ನಾನಾ ವಿಚಾರಗಳು ಟ್ರೇಲರ್ ಝಲಕ್ ನಲ್ಲಿವೆ ಇವೆಲ್ಲವೂ ತೋತಾಪುರಿ ಬಗೆಗಿದ್ದ ಮೊದಲಿನ ಇಮ್ಯಾಜಿನೇಶನ್ ನನ್ನು ಬೇರೆ ಲೆವೆಲ್ಗೆ ಕೊಂಡೊಯ್ದಿದೆ. ಅಲ್ಲಿಗೆ ಕಾಮಿಡಿ ಜೊತೆಗೆ ಒಂದೊಳ್ಳೆ ವಿಚಾರವನ್ನು ಚಿತ್ರ ಸಾರುತ್ತೆ ಅನ್ನೋದು ಕನ್ಫರ್ಮ್ ಅದೇನು ಎತ್ತ ಅನ್ನೋದಕ್ಕೆ ಸಿನಿಮಾ ಬಿಡುಗಡೆಯಾಗಬೇಕು. ಸದ್ಯಕ್ಕಂತೂ ಮಿಲಿಯನ್ಗೂ ಹೆಚ್ಚಿನ ವೀಕ್ಷಣೆ ಪಡೆದು ಬಿಡುಗಡೆಯಾದ ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ.

 

click me!