ಗಣ್ಯರ ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್!

Published : Nov 11, 2019, 03:46 PM ISTUpdated : Nov 11, 2019, 04:50 PM IST
ಗಣ್ಯರ ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್!

ಸಾರಾಂಶ

  ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಮೇಲೆ ನವರಸ ನಾಯಕ ಗರಂ ಆಗಿದ್ದಾರೆ.

ರಾತ್ರೋರಾತ್ರಿ 'ಒರ್ ಆಡಾರ್ ಲವ್' ಚಿತ್ರದಲ್ಲಿ ಕಣ್ ಸನ್ನೇ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಸೆನ್ಸೇಷನ್‌ ಆದ ಪ್ರಿಯಾ ಪ್ರಕಾಶ್ ವಾರಿಯರ್ ನಿರ್ದೇಶಕ ಕೆ.ಮಂಜು ಪುತ್ರ ಅಭಿನಯದ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದಾರೆ.

ಸಕ್ಕರೆ ಕಾಯಿಲೆ ರೋಗಿಗಳಿಗೆ ಪರಿಮಳಾ ಜಗ್ಗೇಶ್ ನೆರವು, ಸೋ ಸ್ವೀಟ್!

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರೊಂದಿಗೆ ಕೆ.ಮಂಜು, ಪುತ್ರ ಹಾಗೂ ಪ್ರಿಯಾ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಕೇವಲ ಕಣ್ ಸನ್ನೆ ಮೂಲಕ ಫೇಮಸ್‌ ಆದ ನಟಿ ವೇದಿಕೆ ಮೇಲೆ ಕೂರಲು ಅರ್ಹಳಾ? ಎಂಬುವುದು ನಟ ಜಗ್ಗೇಶ್ ಪ್ರಶ್ನೆಯಾಗಿದೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು! .

'ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕ ವಿಸ್ಮಿತನಾದೆ. ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲ! ಬರಹಗಾರ್ತಿಯಲ್ಲ.!ಸ್ವತಂತ್ರ ಹೋರಾಟಗಾರ್ತಿಯಂತೂ ಅಲ್ಲವೇ ಅಲ್ಲ! ಹೋಗಲಿ ನೂರು ಸಿನಿಮಾ ನಟಿಯೂ ಅಲ್ಲ! ಸಾಹಿತಿ ಅಲ್ಲ.!ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ. ಆಧುನಿಕ ಮದರ್ ತೆರೆಸಾ ಅಲ್ಲ! ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ! ಕಾದಂಬರಿ ಬರೆದ ತ್ರಿವೇಣಿ ಅಲ್ಲ!ಜಾನ್ಸಿ ಅಲ್ಲ!ಅಬ್ಬಕ್ಕನಲ್ಲ!ಕಿತ್ತೂರು ಚನ್ನಮ್ಮನಲ್ಲ! ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲ! ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣು ಮಗು! ಆಕೆ ಹೆಸರು ವಾರಿಯರ್ ಕೇರಳದ ಮಗು! ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಮಂಜು.

 

ಅದು ಒಕ್ಕಲಿಗರಿಗೆ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ. ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್ ವಿದ್ಯಾದಾನಿ ಶ್ರೀ ನಿರ್ಮಲಾನಂದ ಶ್ರೀಗಳು. ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವೀಡಿಯೋ ನಟಿ ಇಂದು ದೇವರಂತೆ ಕಂಡಳು ಯುವಸಮಾಜಕ್ಕೆ! ಎಂಥ ಶಿಕ್ಷೆ!ಹೋದರೆ ಸಹಿಸಲಾಗದ ಹಿಂಸೆ! ಹೋಗದಿದ್ದರೆ ದುರಾಹಂಕಾರ ಪಟ್ಟ! ಎಂಥ ಶಿಕ್ಷೆ! ಬದುಕು ಜೀವನ ದೇಶ ಸಂಸ್ಕೃತಿ ತಾಯಿತಂದೆ ಶಿಕ್ಷಣ ಶಿಕ್ಷಕರು ಸಮಾಜ ಕಲಿಸುವ ಸಾಧಕರಿಗಿಂತ ಇಂದು ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ ಸಂಸ್ಕೃತಿ ತಂದೆತಾಯಿ ಭಾವನೆ ಉಳಿಸುವ ಯುವ ಸಮುದಾಯವೇ?

ಈ ಪ್ರಶ್ನೆ ನನ್ನ ಕಾಡಿ ಹುಚ್ಚನಂತೆ ಚಿಂತಿಸಿ ಮರಳಿದೆ! ದೇಶದ ಬೆನ್ನೆಲುಬು ಯುವಸಮಾಜ? ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ...! ಶುಭರಾತ್ರಿ..' ಎಂದು ಬರೆದಿದ್ದಾರೆ.

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ