ನಟ ಡಾಲಿ ಧನಂಜಯ್ ಇತ್ತೀಚೆಗೆ ಕೋಟಿ ಸಿನಿಮಾದ ಮೂಲಕ ಸಿನಿಪ್ರೇಕ್ಷಕರ ಎದುರು ಬಂದಿದ್ದರು. ಆದರೆ ಕೋಟಿ ಸಿನಿಮಾ ನಿರೀಕ್ಷಿಸಿದ್ದ ಮಟ್ಟಕ್ಕೆ ರೀಚ್ ಆಗಿಲ್ಲ. ಹಾಗಂತ, ನಟ ಧನಂಜಯ್ ಕೈ ಖಾಲಿ ಆಗಿಲ್ಲ, ಸಹಿ ಹಾಕಿರುವ ಸಿನಿಮಾಗಳು ಸಾಕಷ್ಟಿವೆ....
ಕನ್ನಡದ ನಟ, ಡಾಲಿ ಖ್ಯಾತಿಯ ಧನಂಜಯ್ (Dolly Dhananjay) ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಕಾರಣ, ಅವರು ಹುಟ್ಟುಹಬ್ಬ. ಹೌದು, ನಟ ಡಾಲಿ ಧನಂಜಯ್ ಅವರು ತಮ್ಮ ಹುಟ್ಟುಹಬ್ಬವನ್ನು ಆಗಸ್ಟ್ 23ರಂದು ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಆದರೆ, ಯಾವುದೋ ಕಾರಣಕ್ಕೆ ಈ ವರ್ಷ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಅದಕ್ಕಾಗಿ ಅವರು ಪತ್ರ ಬರೆದು ಸೋಷಿಯಲ್ ಮೀಡಿಯಾ ಮೂಪಕ ಪೋಸ್ಟ್ ಮಾಡಿ ಕ್ಷಮೆ ಕೋರಿದ್ದಾರೆ.
ಹಾಗಿದ್ದರೆ ನಟ ಡಾಲಿ ಧನಂಜಯ್ ಏನಂತ ಪತ್ರ ಬರೆದಿದ್ದಾರೆ. 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಆಗಸ್ಟ್ 23, ಪ್ರತಿವರ್ಷದಂತೆ ನಿಮ್ಮೊಡನೆ ಹುಟ್ಟುಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರೂ ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ, ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಿಸಿ, ಹಾರೈಸಿ.. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆಯ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ. ಇಂತಿ ನಿಮ್ಮ ಪ್ರೀತಿಯ, ಡಾಲಿ ಧನಂಜಯ್' ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಡಯಟ್ ಸೀಕ್ರೆಟ್ ಬಯಲಾಯ್ತು, ನಟಿ ಏನೇನೆಲ್ಲ ತಿಂತಾರೆ ನೋಡಿ!
ನಟ ಡಾಲಿ ಧನಂಜಯ್ ಇತ್ತೀಚೆಗೆ ಕೋಟಿ ಸಿನಿಮಾದ ಮೂಲಕ ಸಿನಿಪ್ರೇಕ್ಷಕರ ಎದುರು ಬಂದಿದ್ದರು. ಆದರೆ ಕೋಟಿ ಸಿನಿಮಾ ನಿರೀಕ್ಷಿಸಿದ್ದ ಮಟ್ಟಕ್ಕೆ ರೀಚ್ ಆಗಿಲ್ಲ. ಹಾಗಂತ, ನಟ ಧನಂಜಯ್ ಕೈ ಖಾಲಿ ಆಗಿಲ್ಲ, ಸಹಿ ಹಾಕಿರುವ ಸಿನಿಮಾಗಳು ಸಾಕಷ್ಟಿವೆ. ಈಗಾಗಲೇ ಶೂಟಿಂಗ್ ಹಂತದಲ್ಲಿ ಕೆಲವು ಸಿನಿಮಾಗಳು ಇದ್ದರೆ ಇನ್ನೂ ಹಲವು ಸಿನಿಮಾಗಳ ಶೂಟಿಂಗ್ ಇನ್ನಷ್ಟೇ ಶುರುವಾಗಬೇಕಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೂಡ ನಟ ಧನಂಜಯ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟ ಧನಂಜಯ್ ಅವರು ಕನ್ನಡ ಸೇರಿದಂತೆ, ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ವಿಲನ್ ಹಾಗೂ ಮುಖ್ಯ ಪೋಷಕ ಪಾತ್ರಗಳಲ್ಲಿ ಬೇರೆ ಭಾಷೆಗಳಲ್ಲಿ ನಟಿಸುತ್ತಿರುವ ನಟ ಧನಂಜಯ್, ಕನ್ನಡದಲ್ಲಿ ನಾಯಕರಾಗಿಯೂ, ಪೋಷಕನಟರಾಗಿಯೂ ಅಭಿನಯಿಸುತ್ತ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ನಿಭಾಯಿಸುತ್ತಿದ್ದಾರೆ. ವಿಭಿನ್ನ ಚಿತ್ರಗಳಲ್ಲಿ ನಟಿಸುತ್ತ, ಯಾವುದೋ ಒಂದೇ ರೀತಿಯ ಸೀಮಿತ ಪಾತ್ರಕ್ಕೆ ಬ್ರಾಂಡ್ ಆಗದೇ ಬ್ಯಾಲೆನ್ಸ್ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ, ಕನ್ನಡದ ನಟ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ.
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!