ಭಾವ ಒಂದು ಭಾಷೆ ಬೇರೆ: ಮರಳಿ ರಂಗಭೂಮಿಗೆ ನಟ ಪ್ರಕಾಶ್ ರಾಜ್‌

By Kannadaprabha News  |  First Published Aug 7, 2024, 5:48 PM IST

ಒಮ್ಮೆ ಚಿತ್ರರಂಗಕ್ಕೆ ಹೋದವರಿಗೆ, ಮರಳಿ ರಂಗಭೂಮಿಗೆ ಬರುವುದಕ್ಕೆ ಸಮಯ ಇರುವುದಿಲ್ಲ. ಪ್ರಕಾಶ್ ರೈ, ತನ್ನ ಬಿಡುವಿಲ್ಲದ ಚಿತ್ರೀಕರಣದ ನಡುವೆ ರಂಗಭೂಮಿಗೆ ಮರಳಲು ನಿರ್ಧರಿಸಿದ್ದಾರೆ. 
 


ಶ್ರೀರಂಗಪಟ್ಟಣದ ಬಳಿ ನಿರ್ದಿಗಂತ ನಿರ್ಮಿಸಿ, ರಂಗತಂಡಗಳಿಗೆ ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತಿರುವ ಪ್ರಕಾಶ್ ರೈ, ಮೂಲತಃ ರಂಗಭೂಮಿಯಿಂದ ಸಿನಿಮಾರಂಗಕ್ಕೆ ಹೋದವರು. ಒಮ್ಮೆ ಚಿತ್ರರಂಗಕ್ಕೆ ಹೋದವರಿಗೆ, ಮರಳಿ ರಂಗಭೂಮಿಗೆ ಬರುವುದಕ್ಕೆ ಸಮಯ ಇರುವುದಿಲ್ಲ. ಪ್ರಕಾಶ್ ರೈ, ತನ್ನ ಬಿಡುವಿಲ್ಲದ ಚಿತ್ರೀಕರಣದ ನಡುವೆ ರಂಗಭೂಮಿಗೆ ಮರಳಲು ನಿರ್ಧರಿಸಿದ್ದಾರೆ. 

ಭಾವ ಒಂದು ಭಾಷೆ ಬೇರೆ ಎಂಬ ವಿಶಿಷ್ಟ ರಂಗಪ್ರದರ್ಶನದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಕವಿತೆಗಳನ್ನು ಇಟ್ಟುಕೊಂಡು ನಿರ್ದೇಶಕ ಶ್ರೀಪಾದ ಭಟ್ ವಿನ್ಯಾಸಗೊಳಿಸಿದ ಭಾಷೆ ಬೇರೆಯಾದರೂ ಭಾವ ಒಂದೇ ಎಂಬ ಐವತ್ತು ನಿಮಿಷಗಳ ರಂಗ ಪ್ರದರ್ಶನವನ್ನು ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ನೀಡುತ್ತಿದ್ದಾರೆ. ನಿರ್ದಿಗಂತ ಬ್ಯಾಂಡ್ ಸಂಗೀತ ಸಂಯೋಜನೆಯಲ್ಲಿ ಈ ಕಾವ್ಯರಂಗಪ್ರಯೋಗ ಮೂಡಿಬರಲಿದೆ.

Tap to resize

Latest Videos

ಸಿನಿಮಾಗಿಂತ ಪ್ರೇಕ್ಷಕರೇ ಪ್ಯಾನ್‌ ಇಂಡಿಯಾ ಆಗಿದ್ದಾರೆ: ಪ್ರಕಾಶ್‌ ರಾಜ್‌

ಕವಿತೆಗಳ ಮೂಲಕ ಭಾಷೆ ಯಾವುದೇ ಆದರೂ ಅದರ ಹಿಂದಿರುವ ಭಾವ ಒಂದೇ ಅನ್ನುವುದನ್ನು ಹೇಳಲು ಹೊರಟಿದ್ದೇನೆ. ಮತ್ತೆ ರಂಗಭೂಮಿಗೆ ವಾಪಸ್ಸು ಬರುವ ಸಂತೋಷ, ರಂಗಭೂಮಿ ನನ್ನನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಪ್ರಶ್ನೆ ಎರಡನ್ನೂ ಮುಂದಿಟ್ಟುಕೊಂಡು ಹೊರಟಿದ್ದೇನೆ. ಇಂಥ ಪ್ರಯೋಗಗಳು ನನಗೆ ಸಂತೋಷ ಕೊಡುತ್ತವೆ ಎನ್ನುತ್ತಾರೆ ಪ್ರಕಾಶ್ ರೈ.

ನಾನೇ ಫಾದರ್ ಆಫ್ ದಿ ನೇಷನ್: ಡೈರೆಕ್ಟರ್ ಆರ್ ಚಂದ್ರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದು ಗೊತ್ತೇ ಇದೆ. ಈಗ ಚಂದ್ರು ಗುರಿ ಇಟ್ಟಿರೋದು ಒಟ್ಟಿಗೆ ಐದು ಸಿನಿಮಾಗಳನ್ನ ನಿರ್ಮಾಣ ಮಾಡೋದು. ಈಗ ಚಂದ್ರು ಮೊದಲ ಹೆಜ್ಜೆಯಾಗಿ ಫಾದರ್ ಸಿನಿಮಾ ಶುರುವಾಗಿದೆ. ಅಪ್ಪ, ಮಗನ ಬಾಂಧವ್ಯದ ಕಥೆ ಹೇಳೋ ಫಾದರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನಟ ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗರ್​ ಭಾಗವಹಿಸಿದ್ದಾರೆ. ಫಾದರ್ ಟೈಟಲ್ಲೇ ಹೇಳುವಂತೆ ಇದು ತಂದೆ ಮಗನ ರಿಲೇಷನ್​​ಶಿಪ್​​​​​ ಜೊತೆ ಮನ ಮುಟ್ಟುವ ಕಥೆ ಇದೆಯಂತೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್​ ತಂದೆಯಾದ್ರೆ ಮಗನ ರೋಲ್​ನಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. 

ಮಿಡಲ್ ಕ್ಲಾಸ್ ಕುಟುಂಬದ ಸಿನಿಮಾ ಫಾದರ್ ಬಗ್ಗೆ ಮಾತನಾಡುತ್ತಾ ಪ್ರಕಾಶ್ ರಾಜ್​​​, ಮಹತ್ಮಾ ಗಾಂಧಿ ಬಿಟ್ಟರೇ ನಾನೇ ಫಾದರ್ ಆಫ್​ ದಿ ನೇಷನ್ ಅಂದ್ರು. ಯಾಕಂದ್ರೆ ಪ್ರಕಾಶ್ ರಾಜ್​ ಬಹುಭಾಷಾ ನಟ. ಎಲ್ಲಾ ಚಿತ್ರರಂಗದ ಸಿನಿಮಾಗಳಲ್ಲೂ ಪ್ರಕಾಶ್ ರಾಜ್ ತಂದೆಯ ರೋಲ್ ಮಾಡಿದ್ದಾರೆ. ಆ ಎಲ್ಲಾ ತಂದೆಯ ಪಾತ್ರಗಳಿಗಿಂತ ಈ ಫಾದರ್ ಡಿಫ್ರೆಂಟ್ ಅಂದ್ರು. ನಟ ದರ್ಶನ್ ಕೊಲೆ ಕೇಸ್​ನಲ್ಲಿ ಅಂದರ್ ಆಗಿ ತಿಂಗಳಾಗಿದೆ. ದರ್ಶನ್​ ಬಗ್ಗೆ ಕೆಲ ಕಲಾವಿಧರು ಅವರಿಗನ್ನಿಸಿದ್ದನ್ನ ಹೇಳುತ್ತಿದ್ದಾರೆ. ಆದ್ರೆ ಫಾದರ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಸಿಕ್ಕ ಪ್ರಕಾಶ್ ರಾಜ್ ಮಾತ್ರ ದರ್ಶನ್ ಬಗ್ಗೆ ಮಾತನಾಡೋ ಮನಸ್ಸು ಮಾಡಲಿಲ್ಲ. 

ಭೀಮ ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವ ಕತೆ: 3 ಮಿಲಿಯನ್‌ ವೀಕ್ಷಣೆ ಕಂಡ ಟ್ರೈಲರ್‌

ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ,  ಸ್ಟಾರ್ ಡಮ್ ಸಂಭಾಳಿಸುವ ಬಗ್ಗೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡ್ರು. ಆರ್​ ಸಿ ಸ್ಟುಡಿಯೋಸ್ ಬ್ಯಾನರ್​ನಲ್ಲಿ ನಿರ್ಮಾಣ ಆಗುತ್ತಿರೋ ಫಾದರ್ ಸಿನಿಮಾವನ್ನ ರಾಜ್ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಎರಡನೇ ಭಾರಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗು ಅಮೃತಾ ಅಯ್ಯಂಗರ್ ಜೊತೆಯಾಗಿದ್ದಾರೆ. ಈ ಹಿಂದೆ ಲವ್ ಮಾಕ್ಟೆಲ್​ ಮಾಡಿ ಎಲ್ಲರ ಮನ ಗೆದ್ದಿದ್ರು ಈ ಜೋಡಿ. ಲವ್ ಮಾಕ್ಟೆಲ್​ನಲ್ಲಿ ಲವರ್ಸ್​ ಆಗಿದ್ದ ಕೃಷ್ಣ ಅಮೃತಾ ಫಾದರ್​ನಲ್ಲಿ ಗಂಡ ಹೆಂಡತಿಯಾಗಿದ್ದಾರೆ.

click me!