'ಡಾಕ್ಟರ್ ಅಲ್ಲ, ಡ್ಯಾನ್ಸರ್': ಡಾಲಿ ಧನಂಜಯ ಪತ್ನಿಯ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಖುಷ್

Published : Sep 06, 2026, 04:25 PM IST
Daali Dhananjaya

ಸಾರಾಂಶ

‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ಹಾಡಿಗೆ ಡಾಲಿ ಧನಂಜಯ ಪತ್ನಿ ಧನ್ಯತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಧನ್ಯತಾ ಡ್ಯಾನ್ಸ್ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದು, ‘ಡಾಕ್ಟರ್ ಅಲ್ಲ, ಡ್ಯಾನ್ಸರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಸದ್ಯ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಹೊಸ ಹಾಡು ‘ಪುಟ್ಟಮಲ್ಲಿ’ ಬಿಡುಗಡೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು, ಇದೀಗ ಈ ಹಾಡಿಗೆ ಧನಂಜಯ ಅವರ ಪತ್ನಿ ಧನ್ಯತಾ ಹಾಕಿರುವ ಸ್ಟೆಪ್ಸ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.

ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ‘ಪುಟ್ಟಮಲ್ಲಿ’ ಹಾಡಿಗೆ ಈಗಾಗಲೇ ರೀಲ್ಸ್‌ಗಳ ಅಬ್ಬರ ಶುರುವಾಗಿದೆ. ಹಾಡಿನ ಟ್ಯೂನ್‌ಗೆ ಮನಸೋತಿರುವ ರೀಲ್ಸ್ ಪ್ರಿಯರು ತಮ್ಮದೇ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಧನ್ಯತಾ ಕೂಡ ಮೊದಲ ಬಾರಿಗೆ ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ.

ಡ್ಯಾನ್ಸ್‌ಗೆ ಫಿದಾ

ಪತಿ ಡಾಲಿ ಧನಂಜಯ ಅವರಿಗೆ ಸಪೋರ್ಟ್ ನೀಡುವ ಉದ್ದೇಶದಿಂದ ಧನ್ಯತಾ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಆನಂದ್ ಆಡಿಯೊ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿದ ಅಭಿಮಾನಿಗಳು ಧನ್ಯತಾ ಅವರ ಡ್ಯಾನ್ಸ್‌ಗೆ ಫಿದಾ ಆಗಿದ್ದು, ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಡಾಕ್ಟರ್ ಅಲ್ಲ, ಡ್ಯಾನ್ಸರ್’ ಎಂದು ಅಭಿಮಾನಿಗಳು ಧನ್ಯತಾ ಅವರನ್ನು ಕೊಂಡಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು, ಧನ್ಯತಾ ಅವರ ಸಿಂಪಲ್ ಹಾಗೂ ಎನರ್ಜಿಟಿಕ್ ಡ್ಯಾನ್ಸ್‌ಗೆ ಫ್ಯಾನ್ಸ್‌ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಡಿಸೆಂಬರ್ 24ರಂದು ತೆರೆಗೆ

ಇನ್ನು ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಡಿಸೆಂಬರ್ 24ರಂದು ತೆರೆಗೆ ಬರಲು ಸಜ್ಜಾಗಿದೆ. ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೇನರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೂಸ್ ಮಾದ ಯೋಗಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಐರಾ ಫಿಲ್ಮ್ಸ್ ಹಾಗೂ ರಾಯಲ್ ಸ್ಟುಡಿಯೊಸ್ ಜಂಟಿ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ. ಅಜಯ್ ಸಂಕಲನ ಹಾಗೂ ಗುಣ ಕಲಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ‘ಪುಟ್ಟಮಲ್ಲಿ’ ಹಾಡು ಈಗಾಗಲೇ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಡಾಲಿ ಧನಂಜಯ ಅವರ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಮತ್ತಷ್ಟು ಹೆಚ್ಚಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಮೆ ಪಕ್ಕಕ್ಕೆ ಇಡಮ್ಮಾ, ಬ್ಯೂಟಿ ಸಿಕ್ರೇಟ್​ ರಿವೀಲ್​ ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್​
ಕಾಲಿಗೆ ಬಿದ್ದರೂ ದರ್ಶನ್ ಫ್ಯಾನ್ಸ್ ಕ್ಷಮಿಸದ ರಮ್ಯಾ.. 'ಕೇಸ್ ವಾಪಸ್ ಪಡೆಯಲ್ಲ' ಎಂದು ಖಡಕ್ ಸಂದೇಶ ಕೊಟ್ಟ ನಟಿ!