ಹಲವು ವರ್ಷಗಳ ನಂತರ ಬ್ರೇಕಪ್ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ಚಿಕ್ಕಣ್ಣ. ತಾಯಿ ಪ್ರೀತಿ ಮುಂದೆ ಏನೂ ಇಲ್ಲ.....
ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಚಿಕ್ಕ ಬೆಳವಣಿಗೆ ಕಂಡು ಸಾಕಷ್ಟು ಮಂದಿ ಖುಷಿ ಪಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದ ದುಡಿಯುತ್ತಿರುವ ಚಿಕ್ಕಣ್ಣ ತಾಯಿ ಕೆಲಸ ಬಿಡಬೇಕು ಎಂದು ನಿರ್ಧಾರ ಮಾಡಿದ್ದು ಯಾಕೆ?
'ನಾನು ಪಿಯುಸಿ ಓಡುವಾಗಲೇ ನನ್ನ ತಾಯಿಯನ್ನು ಕೆಲಸದಿಂದ ಬಿಡಿಸಿ ನಾನು ದುಡಿದು ಸಾಕಬೇಕು ಅನ್ನೋ ಕನಸು ಶುರುವಾಗಿತ್ತು ಹಾಗೆ ಮಾಡಲು ಶುರು ಮಾಡಿದೆ. ನನ್ನ ಮೊದಲ ಸಂಬಳದಲ್ಲಿ ನಾನು ಅಮ್ಮನಿಗೆ ಸೀರೆ ಕೊಡಿಸಿರುವೆ. ನಾನು ಮೊದಲು ಖರೀದಿ ಮಾಡಿರುವ ಸ್ವಿಫ್ಟ್ ಕಾರನ್ನು ಮಾರಿಲ್ಲ ಈಗಲೂ ಅಮ್ಮ ಬಳಸುವುದಕ್ಕೆ ಬಿಟ್ಟಿರುವೆ. ಊರಿನಲ್ಲಿ ಚಿಕ್ಕದಾಗಿ ಮನೆ ಕೆಟ್ಟಿಕೊಟ್ಟಿರುವೆ. ನನಗೆ ಗೊತ್ತಿರುವ ಹಾಗೆ ತಕ್ಕ ಮಟ್ಟಕ್ಕೆ ಚೆನ್ನಾಗಿ ನೋಡಿಕೊಳ್ಳುತ್ತಿರುವೆ. ನನ್ನ ಯೋಗ್ಯತೆ ಮೀರಿ ಅಲ್ಲ ನನ್ನ ಯೋಗ್ಯತೆಗೆ ತಕ್ಕ ಹಾಗೆ ನೋಡಿಕೊಳ್ಳುತ್ತಿರುವೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚಿಕ್ಕಣ್ಣ ಮಾತನಾಡಿದ್ದಾರೆ.
ದಯವಿಟ್ಟು ಕಣ್ಣೀರಾಕಿ ಕಾಲ್ ಮಾಡ್ಬೇಡಿ: ಹೆಂಡತಿ ಒಡವೆ ಅಡವಿಟ್ಟ ನಟ ಹರೀಶ್ ರಾಜ್
' ನನ್ನ ತಾಯಿ ಟಿವಿ ಮತ್ತು ನನ್ನ ಸಿನಿಮಾ ಕಾರ್ಯಕ್ರಮಗಳಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಮೊದಲು ಟಿವಿ ಮುಂದೆ ಬಂದಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅದಾದ ಮೇಲೆ ನಾನು ನಾಯಕನಾಗಿ ನಟಿಸುತ್ತಿರುವ ಅಧ್ಯಕ್ಷ ಸಿನಿಮಾದ ಮೊದಲ ಕ್ಲಾಪ್ ಅಮ್ಮ ಮಾಡಿದ್ದು ದೊಡ್ಡ ಸಾಧನೆ ಅನಿಸಿತ್ತು. ಅಮ್ಮ ಖುಷಿಯಾಗಿದ್ದಾರೆ. ನನ್ನ ಬೆಳವಣಿಗೆ ಬಗ್ಗೆ ಅಮ್ಮ ಇದುವರೆಗೂ ಏನೂ ಹೇಳಿಲ್ಲ ಏಕೆಂದರೆ ಬಾಲ್ಯದಿಂದ ನಾವು ಹಾಗೆ ಬೆಳೆದಿಲ್ಲ ಏನೂ ಎದುರಿಗೆ ಮಾತನಾಡುವುದಿಲ್ಲ ಏನೂ ಎಕ್ಸಪ್ರೆಸ್ ಮಾಡಿಕೊಳ್ಳುವುದಿಲ್ಲ. ಪೋನ್‌ನಲ್ಲಿ ಮಾತನಾಡಿದ್ದರೂ ಕೇವಲ ಒಂದೆರಡು ನಿಮಿಷ ಅಷ್ಟೆ. ಶೂಟಿಂಗ್ ಸಮಯದಿಂದ ಬಿಡುವು ಸಿಕ್ಕಾಗ ಮೈಸೂರಿಗೆ ಹೋಗಿ ಅಮ್ಮನನ್ನು ಮಾತನಾಡಿಸಿಕೊಂಡು ಬರುತ್ತೀನಿ. ಅಮ್ಮ ಮಾಡುವ ಬಸ್ಸಾರು ಮತ್ತು ಮಟನ್ ಸಾರು ತುಂಬಾನೇ ಇಷ್ಟ ಆಗುತ್ತದೆ' ಎಂದು ಚಿಕ್ಕಣ್ಣ ಹೇಳಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮಜಾ ಭಾರತ' ಜಗಪ್ಪ- ಸುಶ್ಮಿತಾ!
' ನಾನು ಒಬ್ಬರನ್ನು ಪ್ರೀತಿಸುತ್ತಿದ್ದೆ ಆದರೆ ಸಣ್ಣ ಪುಟ್ಟ ಮನಸ್ಥಾಪಗಳಿಂದ ಬೇಡ ಬಿಡು ತುಂಬಾ ಕೆಲಸಗಳು ಇದೆ ಅಂತ ಸುಮ್ಮನಾದೆ ದೂರ ಆದೆ. ಯೋಚನೆ ಮಾಡಿಕೊಂಡು ತೂಕರೆ ನಾನು ಕರೆಕ್ಟಾ ಅಥವಾ ತಪ್ಪಾ ಅನಿಸುತ್ತದೆ ಒಮ್ಮೆ ನಾನು ಸರಿ ಅವ್ರು ತಪ್ಪು ಅನಿಸುತ್ತದೆ ...ಆ ಟೈಮ್‌ಗೆ ಏನೋ ಆಗಿ ಕಟ್ ಆಯ್ತು' ಎಂದಿದ್ದಾರೆ ಚಿಕ್ಕಣ್ಣ.