ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟ ಭುವನ್ ಪೊನ್ನಣ್ಣ ಹಿರಿಯ ನಟ ಅಮರನಾಥ್ ಆರಾಧ್ಯ ಅವರಿಗೆ ಸಹಾಯ ಮಾಡಿದ್ದಾರೆ.
ಇದೆಂಥ ಪರಿಸ್ಥಿತಿ? ಕೊರೋನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ತರಬೇಕು ಎಂದು ಸರ್ಕಾರ ಮಾಡಿದ ಲಾಕ್‌ಡೌನ್ ಒಳ್ಳೆಯದೇ ಆದರೂ, ಅನೇಕ ಕುಟುಂಬಗಳು ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ತೊಂದರೆ ಒಂದು ವರ್ಗಕ್ಕೆ ಸೀಮಿತವಲ್ಲ. ಅದರಲ್ಲೂ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಕಲಾವಿದರು, ತಂತ್ರಜ್ಞರಿಗೂ ತೊಂದರೆ ಆಗಿದೆ. ಈ ಸಮಯದಲ್ಲಿ ಅನೇಕ ನಟ-ನಟಿಯರು ತಮ್ಮ ಶ್ರಮಕ್ಕೂ ಮೀರಿದ ಸಹಾಯ ಮಾಡಲು ಮುಂದಾಗಿದ್ದಾರೆ. ಹಸಿದವರಿಗೆ ದಿನಸಿ ನೀಡುತ್ತಾರೆ, ಔಷಧಿ ಖರೀದಿಸಲು ಆಗದವರ ಮನೆ ಬಾಗಿಲಿಗೆ ತೆರಳಿ ಔಷಧಿ ನೀಡುತ್ತಿದ್ದಾರೆ.
ಬಸ್‌ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಿದ ನಟ ಭುವನ್, ನಟಿ ಹರ್ಷಿಕಾ!
undefined
ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಎರಡು ಆಕ್ಸಿಜನ್ ವ್ಯವಸ್ಥೆ ಇರುವ ಬಸ್ ನೀಡಿದ ನಟ ಭುವನ್ ಪೊನ್ನಣ್ಣ ಇದೀಗ ಹಿರಿಯ ನಟ ಅಮರನಾಥ್‌ಗೆ ನೆರವಾಗಿ ನಿಂತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ಅಮರನಾಥ್ ಮಾತನಾಡಿದ್ದಾರೆ. ಭುವನ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
'ನಾನು ನಿಮ್ಮ ನೆಚ್ಚಿನ ಹಿರಿಯ ನಟ ಅಮರನಾಥ್ ಆರಾಧ್ಯ ಮಾತನಾಡುತ್ತಿರುವುದು. ಈ ಕೋವಿಡ್ ಸಮಯದಲ್ಲಿ ನಮ್ಮಂಥ ಹಿರಿಯ ನಟರು ಬಹಳಷ್ಟು ತೊಂದರೆಗೆ ಸಿಲುಕಿಕೊಂಡಿದ್ದೀವಿ. ಶೂಟಿಂಗ್ ಇಲ್ಲದೆ, ಕೆಲಸ ನಿಂತು ಹೋಗಿರುವ ಸಮಯದಲ್ಲಿ ಕೊಡುಗೈ ದಾನಿಗಳು, ಸಹಾಯ ಮಾಡುವಂತವರು ತುಂಬಾನೇ ಕಡಿಮೆ. ನಾನು 48 ವರ್ಷ ಸರ್ವಿಸ್ ಮಾಡಿದ್ದಿನಿ. ನಮ್ಮ ಕನ್ನಡ ಚಲನಚಿತ್ರದಲ್ಲಿ ಕೊಡುಗೈ ದಾನಿ ಅಂತ ಹೆಸರು ಮಾಡಿರುವವರು ಅಂಬರೀಶ್ ಒಬ್ಬರನ್ನು ನೋಡಿದ್ದೆ. ಅವರನ್ನ ಬಿಟ್ಟರೆ ಮುಂದಿನ ಬಿಗ್ ಬಾಸ್ ಭುವನ್. ಇವರಿಗೆ ನನ್ನ ಒಂದು ಕೋರಿಕೆ ಹೇಳಿದ್ದೆ. ಈ ತರ ಒಂದು ತೊಂದರೆ ಆಗಿದೆ ದಯವಿಟ್ಟು ಸಹಾಯ ಮಾಡಬೇಕು ಎಂದು. ಅವರು ಏನೂ ಹೇಳಲಿಲ್ಲ. ನಿಮಗೆ ಏನು ಬೇಕು ಹೇಳಿ ನಾನು ಕಳುಹಿಸಿಕೊಡುತ್ತೇನೆ ಎಂದರು. ಮೆಡಿಸಿನ್ ಕಿಟ್, ಫುಡ್ ಕಿಡ್ ಅಥವಾ ಯಾವುದೇ ಸಹಾಯ ಬೇಕಾ ಅಂತ ಮನಪೂರ್ವಕವಾಗಿ ಕೇಳಿದಾಗ, ನನಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಕಣ್ಣಲ್ಲಿ ನೀರು ಬಂತು. ಭುವನ್ ನಿಜಕ್ಕೂ ಬಿಗ್ ಬಾಸ್. ಭುವನ್ ಅಂತ ಹುಡುಗರು ಹುಡುಕಿದರೂ ಸಿಗುವುದಿಲ್ಲ,' ಎಂದು ಅಮರನಾಥ್ ಮಾತನಾಡಿದ್ದಾರೆ.