ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ; ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ

By Shruiti G Krishna  |  First Published Jul 23, 2022, 2:11 PM IST

ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ಧ್ರುವ ಸರ್ಜಾ ಅಜ್ಜಿ, ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ.


ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ಧ್ರುವ ಸರ್ಜಾ ಅಜ್ಜಿ, ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಇಂದು (ಜುಲೈ 23) ಮಾಧ್ಯಾಹ್ನ 12 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎನ್ನು ಮಾಹಿತಿ ಲಭ್ಯವಾಗಿದೆ. ಲಕ್ಷ್ಮೀದೇವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಕಳೆದ 22 ದಿಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀದೇವಿ ಇಹಲೋಕ ತ್ಯಜಿಸಿದ್ದಾರೆ.    

ತಾಯಿಯ ಅನಾರೋಗ್ಯದ ಹಿನ್ನಲ್ಲೇ ಅರ್ಜುನ್ ಸರ್ಜಾ ಬೆಂಗಳೂರಿನಲ್ಲೇ ಇದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದ ಚಿಕ್ರೀಕರಣ ನಿಮಿತ್ತ ಹೈದರಾಬಾದ್ ನಲ್ಲಿ ಇದ್ದರು. ಅಲ್ಲಿಂದ ಈಗಾಗಲೇ ಹೊರಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿತ್ತು. ಚಿರಂಜೀವಿ ಅಗಲಿಕೆಯ ನೋವು ಮಾಸುವ ಮುನ್ನವೆ ಮತ್ತೊಂದು ಆಘಾತ ಬರಸಿಡಿಲಿನಂತೆ ಬಡಿದಿದೆ.

Tap to resize

Latest Videos

ಲಕ್ಷ್ಮೀದೇವಿ ಖ್ಯಾತ ನಟ ಶಕ್ತಿ ಪ್ರಸಾದ್ ಜೊತೆ ವಿವಾಹ ಆಗಿದ್ದರು. ಲಕ್ಷ್ಮಿದೇವಿ ಮತ್ತು ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು. ಒಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಧ್ರುವ ಸರ್ಜಾ ಮತ್ತು ಚಿರಿ ಸರ್ಜಾ ತಾಯಿ  ಅಮ್ಮಾಜಿ, ಅರ್ಜುನ್ ಸರ್ಜಾ ಮತ್ತು ಕಿಶೋರ್ ಸರ್ಜಾ. ಕಿಶೋರ್ ಸರ್ಜಾ 2009ರಲ್ಲೇ ಇಹಲೋಕ ತ್ಯಜಿಸಿದರು.   

click me!