ವಿಕ್ರಮ್‌ ಚಿತ್ರದ ಯಶಸ್ಸಿಗೆ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿದ ಕಮಲ್‌ಹಾಸನ್‌

By Suvarna News  |  First Published Jun 9, 2022, 8:53 AM IST

'ನಮ್ಮ ವಿಕ್ರಮ್‌ ಚಿತ್ರಕ್ಕೆ ನಿಮ್ಮ ಬೆಂಬಲ ಅತೀವ ಸಂತೋಷ ತಂದುಕೊಟ್ಟಿದೆ’ ಎಂದು ಕಮಲ್‌ಹಾಸನ್‌ ಹೇಳಿದ್ದಾರೆ.


‘ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು, ಒಳ್ಳೆಯ ನಟರನ್ನು ಯಾವತ್ತೂ ಬೆಂಬಲಿಸುತ್ತಾ ಬಂದಿದ್ದಾರೆ. ನಮ್ಮ ವಿಕ್ರಮ್‌ ಚಿತ್ರಕ್ಕೆ ನಿಮ್ಮ ಬೆಂಬಲ ಅತೀವ ಸಂತೋಷ ತಂದುಕೊಟ್ಟಿದೆ’ ಎಂದು ಕಮಲ್‌ಹಾಸನ್‌ ಹೇಳಿದ್ದಾರೆ.

‘ವಿಕ್ರಮ್‌’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿದರು. ‘ಅಮೋಘ ನಟರ ಅಭಿನಯವೇ ಈ ವಿಜಯಕ್ಕೆ ಮುಖ್ಯ ಕಾರಣ. ನಿರ್ದೇಶಕ ಲೋಕೇಶ್‌ ಅವರಿಗೆ ಸಿನಿಮಾ ಬಗ್ಗೆ, ನನ್ನ ಬಗ್ಗೆ ಇರುವ ಪ್ರೀತಿ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣಿಸುತ್ತಿತ್ತು. ಅದೇ ರೀತಿ ಅಭಿಮಾನಿಗಳ ಪ್ರೀತಿಯೂ ಅಗಾಧವಾಗಿದೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿ ಹೀಗೇ ಇರಲೆಂದು ಆಶಿಸುವ ರಾಜ್‌ ಕಮಲ್‌ ಫಿಲಂಸ್‌ ಇಂಟರ್‌ನ್ಯಾಶನಲ್‌ನ ಕಾರ್ಮಿಕ ನಿಮ್ಮವನೇ ಆದ ನಾನು..’ ಎಂದು 2 ನಿಮಿಷಗಳ ವೀಡಿಯೋದಲ್ಲಿ ಕಮಲಹಾಸನ್‌ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

Tap to resize

Latest Videos

ಈ ಚಿತ್ರ ಈಗಾಗಲೇ 200 ಕೋಟಿ ರು. ಕ್ಲಬ್‌ ಸೇರಿದೆ. ಈ ಖುಷಿಯಲ್ಲಿ ಕಮಲ್‌ಹಾಸನ್‌ ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರಿಗೆ ದುಬಾರಿ ಲೆಕ್ಸಸ್‌ ಕಾರು ಗಿಫ್‌್ಟನೀಡಿದರೆ, ಸಹ ನಿರ್ದೇಶಕರಿಗೆ ಬೈಕ್‌ ಉಡುಗೊರೆಯಾಗಿ ನೀಡಿದ್ದಾರೆ. ನಟ ಸೂರ್ಯ ಅವರಿಗೆ ರೊಲೆಕ್ಸ್‌ ವಾಚ್‌ ಗಿಫ್‌್ಟಮಾಡಿದ್ದಾರೆ.

ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್

ವಿಕ್ರಮ್ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ವಿಕ್ರಮ್ ಈಗಾಗಲೇ ನಾಲ್ಕು ದಿನಗಳಲ್ಲಿ 175 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದಹಾಗೆ ಸಿನಿಮಾ ರಿಲೀಸ್ ಆಗಿ 2ನೇ ದಿನಕ್ಕೆ ವಿಕ್ರಮ್ 100 ಕೋಟಿ ಕ್ಲಬ್ ಸೇರುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೇ ಖುಷಿಯಲ್ಲಿ ಕಮಲ್ ಹಾಸನ್ ನಿರ್ದೇಶಕರಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. 

ಅಂದಹಾಗೆ ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಲೆಕ್ಸಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಕಾರ್ ಗಿಫ್ಟ್ ಮಾಡುವ ಜೊತೆಗೆ ಲೋಕೇಶ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕಮಲ್ ಹಾಸನ್ ಬರೆದ ಪತ್ರವನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎರಡು ಪುಟಗಳ ಪತ್ರವನ್ನು ಕಮಲ್ ನಿರ್ದೇಶಕರಿಗೆ ಬರೆದಿದ್ದಾರೆ.  ಈ ಪತ್ರಕ್ಕೆ ಲೋಕೇಶ್ ಲೈಫ್ ಟೈಮ್ ಸೆಟಲ್‌ಮೆಂಟ್ ಪತ್ರ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಪತ್ರ ಓದಿ ನಾನು ಎಷ್ಟು ಭಾವುಕನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಈ ಪತ್ರಕ್ಕೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಕ್ರಮ್ ತಮಿಳು ನಾಡಿನಲ್ಲಿ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಮೂರನೇ ಸಿನಿಮಾ ಇದಾಗಿದೆ. ಮಲಿಮೈ ಮತ್ತು ಬೀಸ್ಟ್ ಸಿನಿಮಾ ಬಳಿಕ ವಿಕ್ರಮ್ ಹೆಚ್ಚು ಗಳಿಕೆ ಮಾಡಿದೆ.ಇನ್ನು ವಿಶೇಷ ಎಂದರೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ 3ನೇ ಸಿನಿಮಾ ಇದಾಗಿದೆ. ದಶಾವತಾರಮ್ ಮತ್ತು ವಿಶ್ವರೂಪಮ್ ಸಿನಿಮಾ ಬಳಿಕ ವಿಕ್ರಮ್ ಸಿನಿಮಾ ಅತೀ ಹೆಚ್ಚು ಗಳಿಕೆ ಮಾಡಿದೆ. ವಿದೇಶದಲ್ಲೂ ವಿಕ್ರಮ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯುಎಸ್‌ಎನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

"

click me!