BBK 12: ಚಿಕ್ಕ ವಯಸ್ಸಿಗೆ ಮದುವೆ, ಮಗು ಆದ್ಮೇಲೆ ಸಿನಿಮಾ; ವಿಚ್ಛೇದನ ಯಾಕಾಯ್ತು? ಅಶ್ವಿನಿ ಗೌಡ ಏನಂತಾರೆ?

Published : Jan 22, 2023, 01:22 PM IST
Bigg boss ashwini gowda

ಸಾರಾಂಶ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಮನೆಗೆ ಬಂದಿರೋ ನಟಿ ಅಶ್ವಿನಿ ಗೌಡ ಅವರು ಈ ಹಿಂದೆಯೇ ಡಿವೋರ್ಸ್‌ ಬಗ್ಗೆ ಮಾತನಾಡಿದ್ದರು. ಕನ್ನಡ ಪರ ಹೋರಾಟಗಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. 

ಸೂಪರ್ ಡೂಪರ್ ಕನ್ನಡ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ಅಶ್ವಿನಿ ಗೌಡ ಈಗ ಕನ್ನಡ ಪರ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಶ್ವಿನಿ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತದೆ. ಉತ್ತರ ಕೊಡುವ ಮೂಲಕ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ.....

ವಿನೋದ್‌ ರಾಜ್‌ ಜತೆ ಮದುವೆ?

ವಿನೋದ್ ರಾಜ್‌ ಹೆಂಡತಿ ಯಾರು? ನಿಜವಾಗಿಯೂ ಮದುವೆ ಆಗಿದ್ಯಾ? ಅಂತ ಯೂಟ್ಯೂಬ್ ಚಾನೆಲ್‌ವೊಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ನಮ್ಮ 'ಯಾರದು' ಸಿನಿಮಾದ ಹಾಡಿನ ಸ್ಟಿಲ್‌ನಲ್ಲಿ ಸೇರಿಸಿ ಸುದ್ದಿ ಮಾಡಿದ್ದಾರೆ. ಸುದ್ದಿ ಓದುತ್ತಾ ಓದುತ್ತಾ ಜನರಿಗೆ ತಿಳಿದಿದೆ ಇದು ಚಿತ್ರದ ಫೋಟೋ ಎಂದು. ನಾವು ಏನೇ ಮಾಡದೇ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಾರೆ. ಕ್ರಿಯೇಟ್ ಮಾಡಿ ಎಲ್ಲರಿಗೂ ಪಬ್ಲಿ ಸಿಟಿ ಬೇಕು ಪ್ರತಿಯೊಬ್ಬರಿಗೂ ರೀಚ್ ಆಗಬೇಕು ಅನ್ನೋದು ಇದೆ ಆದರೆ ಮತ್ತೊಬ್ಬರ ಲೈಫ್‌ನ ಟಾರ್ಗೇಟ್ ಮಾಡಿ ಪಬ್ಲಿಸಿಟಿ ತೆಗೆದುಕೊಳ್ಳಬೇಡಿ ಎಂದು ರಘುರಾಮ್‌ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

 

ಬೋಲ್ಡ್‌ ಸೀನ್?

ಮೂರನೇ ಕ್ಲಾಸ್ ಮಂಜ ಸಿನಿಮಾದಲ್ಲಿ ತುಂಬಾ ಬೋಲ್ಡ್‌ ಸೀನ್‌ ಮಾಡಿದ್ದಕ್ಕೆ ಫ್ಯಾಮಿಲಿ ಸಪೋರ್ಟ್‌ ಇದೆ. ಫ್ಯಾಮಿಲಿ ಸಪೋರ್ಟ್‌ ಇಲ್ಲದೆ ಚಿತ್ರರಂಗಕ್ಕೆ ಬರಲು ಆಗುವುದಿಲ್ಲ. ಈ ಫೀಲ್ಡ್‌ ಅಂದ್ಮೇಲೆ ಕಾಂಟ್ರವರ್ಸಿ ಬರುತ್ತಿ ಅನ್ನೋದು ಗೊತ್ತಿದೆ ನಾವು ಬೇಡ ಎಂದು ದೂರ ಮಾಡಿದ್ದರೂ ಹಿಂಬಾಲಿಸಿಕೊಂಡು ಬರುತ್ತದೆ. ಎಲ್ಲಿಯೂ ನಾನು ಆರ್ಟಿಫಿಷಿಯಲ್ ಆಗಿರಲಿಲ್ಲ ಏನೂ ಮುಚ್ಚಿಡಲಿಲ್ಲ. ನಾನು ಮದುವೆ ಆಗಿದ್ದ ಕುಟುಂಬ ತುಂಬಾನೇ ಬ್ರಾಡ್‌ಮೈಂಡ್ ಆಗಿದ್ದರು, ನನ್ನ ತಂದೆ ತಾಯಿ ಹೀಗೆ ಮಾಡಬೇಡ ಹಾಗೆ ಎಂದು ಸ್ಟಾಪ್ ಮಾಡುತ್ತಿದ್ದರು ಆದರೆ ಅತ್ತೆ ಮಾವ ಸ್ಟಾಪ್ ಮಾಡಿರಲಿಲ್ಲ.  ನಿನ್ನ ನಿರ್ಧಾರ ಸರಿಯಾಗಿರುತ್ತದೆ ಎಂದು ಸಪೋರ್ಟ್ ಮಾಡುತ್ತಿದ್ದರು. ಇವತ್ತಿಗೂ ನನಗೆ ನೆನಪಿರುವ ಪ್ರಕಾರ, ನನ್ನ ಮಾವ ಎಮರ್ಜೆನ್ಸ್‌ ಬೆಡ್‌ ಮೇಲೆ ಮಲಗಿದ್ದಾರೆ ಶೂಟಿಂಗ್ ಮುಗಿಸಿಕೊಂಡು ನಾನು ಹೋಗಿರುವೆ ಅವರಿಗೆ ಸ್ಟ್ರೋಕ್ ಆಗಿ ಮಾತನಾಡಲು ಆಗುತ್ತಿರಲಿಲ್ಲ ನನ್ನ ಸೋಸೆ ಬಂದಿದ್ದಾರೆ ಆಕೆ ಆರ್ಟಿಸ್ಟ್‌ ಎಂದು ತೊದಲು ತೊದಲು ಮಾತುಗಳಲ್ಲಿ ಹೇಳುತ್ತಿದ್ದರು ಅದು ನನಗೆ ಹೆಮ್ಮೆಯ ಕ್ಷಣ. ಈ ರೀತಿ ಕಾಂಟ್ರವರ್ಸಿ ಬಂದಾಗ ನನ್ನ ಕುಟುಂಬ ನೆನಪಿಸಿಕೊಂಡಾಗ ಖುಷಿಯಾಗುತ್ತದೆ ಎಂದು ಅಶ್ವಿನಿ ಹೇಳಿದ್ದಾರೆ.

ಮದುವೆ ಯಾವಾಗ?

"ಮದುವೆ ಆದಾಗ ನನಗೆ 17 ವರ್ಷ ಆಗಿತ್ತು. ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅಂದ್ರೆ 18 ವರ್ಷವಿದ್ದಾಗ ನನ್ನ ಮದುವೆ ಆದ್ಮೇಲೆ ನನ್ನ ಗಂಡನ ಜೊತೆ. ಅವರ ಹೆಸರು ಈಗ ಬೇಡ ಏಕೆಂದರೆ ನಾವು ಒಟ್ಟಿಗಿಲ್ಲ. ಇದರಲ್ಲಿ ಮುಚ್ಚಿಡುವ ವಿಚಾರ ಏನೂ ಇಲ್ಲ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರುವಾಗ ನಾವು ಟ್ರಾನ್ಸ್‌ಪರೆಂಟ್ ಆಗಿರಬೇಕು. ಆ ಕುಟುಂಬ ನನಗೆ ಸದಾ ಸಪೋರ್ಟ್ ಮಾಡಿದ್ದಾರೆ. ಜೀವನದಲ್ಲಿ ನಾನು ಸಾಧನೆ ಮಾಡಿರುವೆ ಅಂದ್ರೆ ನನ್ನ ಅತ್ತೆ ಮಾವ ಕಾರಣ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಕುಟುಂಬ ತೊರೆದು ಹೋದಾಗ ಕೆಟ್ಟದಾಗಿ ಮಾತನಾಡುತ್ತಾರೆ ಆದರೆ ಇವರು ಹಾಗೆ ಮಾಡಿಲ್ಲ ಪ್ರತಿ ಹುಟ್ಟುಹಬ್ಬಕ್ಕೂ ವಿಶ್ ಮಾಡುತ್ತಾರೆ ಹಬ್ಬಕ್ಕೆ ಮನೆಗೆ ಕರೆಯುತ್ತಾರೆ. ಅಷ್ಟು ಚೆನ್ನಾಗಿದ್ದೀವಿ" ಎಂದು ಹೇಳಿದ್ದಾರೆ.

 

ಎಲ್ಲೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಪತಿಯಿಂದ ದೂರವಾಗಬೇಕು ಅಂದ್ರೆ ಅದು ಕೆಟ್ಟ ಚಟಗಳು ಆಗಿರಬೇಕು ಅನ್ನೋದು ಏನೂ ಇಲ್ಲ ಬೇರೆ ಬೇರೆ ಕಾರಣಗಳು ಇರುತ್ತದೆ. ಆ ಕುಟುಂಬದಿಂದ ನನಗೆ ಎಲ್ಲೂ ಕೆಟ್ಟದಾಗಿಲ್ಲ. ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ಸೇತುವೆ ಅಂದ್ರೆ ನನ್ನ ಮಗ. ನನಗಿಂತ ಅವರ ತಂದೆ ಜೊತೆ ಆತ ತುಂಬಾ ಫ್ರೆಂಡ್ಲಿಯಾಗಿದ್ದಾನೆ. ನಾನು ಬೈಯುವೆ ಆದರೆ ಅವರ ಅಪ್ಪ ಏನೂ ಮಾಡಲ್ಲ. ನನ್ನ ಮಗ ಅವನ ಫ್ರೀಡಂ ಅವನು ಎಂಜಾಯ್ ಮಾಡುತ್ತಿದ್ದಾನೆ ನನ್ನ ಫ್ರೀಡಂನ ನಾನು ಎಂಜಾಯ್ ಮಾಡುತ್ತಿರುವೆ. ನಾವು ಜಗಳ ಮಾಡಿಕೊಂಡು ದೂರ ಆಗಿಲ್ಲ ಮಾತನಾಡಿಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದು ಎಂದಿದ್ದಾರೆ ಅಶ್ವಿನಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!