ಗಣೇಶ್‌ ಅಭಿನಯದ ‘99’ ರಿಲೀಸ್‌ಗೆ ಡೇಟ್ ಫಿಕ್ಸ್!

Published : Apr 10, 2019, 11:53 AM IST
ಗಣೇಶ್‌ ಅಭಿನಯದ ‘99’ ರಿಲೀಸ್‌ಗೆ ಡೇಟ್ ಫಿಕ್ಸ್!

ಸಾರಾಂಶ

ಗಣೇಶ್‌ ಅಭಿನಯದ ‘99’ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 26 ಕ್ಕೆ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. 

ಬೆಂಗಳೂರು (ಏ. 10): ಗಣೇಶ್‌ ಅಭಿನಯದ ‘99’ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 26 ಕ್ಕೆ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಏಪ್ರಿಲ್ 23 ಕ್ಕೆ ಲೋಕಸಭಾ ಚುನಾವಣೆ ಮುಗಿಯಲಿದೆ. ಅದೇ ವಾರ ‘99’ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ. ಗಣೇಶ್‌ ಹಾಗೂ ಭಾವನಾ ಅಭಿನಯದ ಈ ಚಿತ್ರವು, ತಮಿಳಿನ ಸೂಪರ್‌ ಹಿಟ್‌ ಚಿತ್ರ ‘96’ನ ರಿಮೇಕ್‌.

ತಮಿಳಿನಲ್ಲಿ ವಿಜಯ್‌ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆ ಜಾಗದಲ್ಲೀಗ ಗಣೇಶ್‌ ಹಾಗೂ ಭಾವನಾ ಇದ್ದಾರೆ. ಅವರೊಂದಿಗೆ ಸಮೀಕ್ಷಾ ಹಾಗೂ ಹೇಮಂತ್‌ ಅಭಿನಯಿಸಿದ್ದಾರೆ. ಪ್ರೀತಮ್‌ ಗುಬ್ಬಿ ನಿರ್ದೇಶಿಸಿದ್ದು, ಚಿತ್ರದ ನಿರ್ಮಾಣಕ್ಕೆ ರಾಮು ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಈಗಾಗಲೇ 99 ಹಾಡುಗಳ ಮೂಲಕ ಭರ್ಜರಿ ಸದ್ದು ಮಾಡಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಡೆವಿಲ್ ರಿಲೀಸ್: ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್‌
ಶಿರಡಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!