"ಅಂದಿನಿಂದ ಇಂದಿನವರೆಗೂ ಹಾಡುತ್ತಲೇ ಇದ್ದಾನೆ " ಅಂತ ನಿರ್ದೇಶಕ ಯೋಗರಾಜ್ ಭಟ್ ಅವರು ಶೇರ್ ಮಾಡಿಕೊಂಡಿರುವ ವೀಡಿಯೋದಲ್ಲಿ ಇರುವ ಇಂದಿನ ಬಹುಬೇಡಿಕೆಯ ಅಪ್ಪಟ ಕನ್ನಡದ ಗಾಯಕ ಯಾರು ಗೊತ್ತಾ ?
ಕೊರೋನಾ ವೈರಸ್ ಹಾವಳಿಯಿಂದ ಇಡೀ ಭಾರತ ಲಾಕ್ ಡೌನ್ ಆಗಿದೆ . ಕನ್ನಡ ಚಿತ್ರರಂಗವೂಕೂಡ ಸಿನಿಮಾ ಸಂಬಂಧ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ . ಹೀಗಿರುವಾಗ ಮುಂಗಾರು ಮಳೆ 2 ಚಿತ್ರದ ಶೂಟಿಂಗ್ ಮತ್ತು ರಿಯಾಲಿಟಿ ಶೋ ಗಳಿಂದ ಕೆಲ್ಸಗಳಿಗೆ ಸ್ವಲ್ಪ ರೆಸ್ಟ್ ಕೊಟ್ಟಿರುವ ಖ್ಯಾತ ನಿರ್ದೇಶಕ , ವಿಕಟ ಕವಿ ಯೋಗರಾಜ್ ಭಟ್ರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು ತಮ್ಮ ಇನ್ಸ್ಟಗ್ರಾಂ ಖಾತೆಯಲ್ಲಿ ಜನಪ್ರಿಯ ಗಾಯಕರೊಬ್ಬರ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ
ಈ ವೀಡಿಯೋ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಆ ಬಾಲಕನ ಹಾಡುಗಾರಿಕೆಗೆ ಶಹಬಾಸ್ ಅನ್ನುತ್ತಿದಾರೆ .
ಈ ಬಾಲಕ ಅಂದಿನಿಂದ ಇಂದಿನವರೆಗೂ ಹಾಡುತ್ತಲೇ ಇದ್ದಾರೆ ಎಂದು ಬರೆದು ಯೋಗರಾಜ್ ಭಟ್ ಅವರು ಪೋಸ್ಟ್ ಮಾಡಿರುವ ವೀಡಿಯೋ ಈಗ ಸಕತ್ ವೈರಲ್ ಆಗುತ್ತಿದೆ . ಅಂದಹಾಗೆ ಈ ವಿಡಿಯೋದಲ್ಲಿ ಹಾಡುತ್ತಿರುವ ಬಾಲಕ ಇಂದು ತಮ್ಮ ಸುಮಧುರ ಗಾಯನದ ಮೂಲಕ ಬಹುಭಾಷಾ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಗಾಯಕ ವಿಜಯ್ ಪ್ರಕಾಶ್ ಅವರು ಬಾಲ್ಯದಲ್ಲಿ ಅದ್ಭುತವಾಗಿ ಹಾಡಿರುವ ಅಪರೂಪದ ವೀಡಿಯೋ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.