ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು?

Published : Jun 22, 2025, 05:53 PM IST
Tara Anuradha

ಸಾರಾಂಶ

ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ..

ನಟಿ ತಾರಾ ಅನುರಾಧಾ (Tara Anuradha) ಕನ್ನಡ ಚಿತ್ರರಂಗದಲ್ಲಿ ಮೇರು ಕಲಾವಿದೆಯರಲ್ಲಿ ಒಬ್ಬರು. ಅವರನ್ನು ನಟಿ ಎಂದು ಸಿಂಪಲ್‌ ಆಗಿ ಹೇಳುವುದು ಕಷ್ಟ. ಉಮಾಶ್ರೀ ಅವರಂತೆ ನಟಿ ತಾರಾ ಕೂಡ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಿ, ಕ್ಯಾಮರಾ ಮುಂದೆ ಪಾತ್ರವೇ ತಾವಾಗಿ ಬಿಡುವಷ್ಟು ಅಭಿಜಾತ ಕಲಾವಿದೆ. ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ, ಸಾಕಷ್ಟು ರಾಷ್ಟ್ರ ಪ್ರಶಸ್ತಿಗಳನ್ನು ಕೂಡ ತಾರಾ ಪಡೆದಿದ್ದಾರೆ. ನಟನಾ ಜೀವನದಲ್ಲಿ ಬರೋಬ್ಬರಿ 4 ದಶಕಗಳನ್ನು ಕಳೆದಿರುವ ನಟಿ ತಾರಾ ಬಗ್ಗೆ ಹೇಳುವುದು ಸಾಕಷ್ಟಿದೆ.

ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ ಅವರು ನಾಯಕಿಯಾಗಿ, ಸ್ನೇಹಿತೆಯಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆ, ಹೆಂಡತಿ, ಹೀಗೆ ಲೆಕ್ಕವಿಲ್ಲದಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಜ್‌ಕುಮಾರ್, ಅಂಬರೀಷ್-ವಿಷ್ಣುವರ್ಧನ್, ಅನಂತ್‌ ನಾಗ್, ಶಂಖರ್‌ ನಾಗ್ ಹೀಗೆ ಹಲವು ಮೇರು ನಟರುಗಳ ಜೊತೆಯಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ. ಡಾ ರಾಜ್‌ ಬಿಟ್ಟು ಉಳಿದೆಲ್ಲಾ ಕಲಾವಿದರ ಜೊತೆಯಲ್ಲಿ ನಾಯಕಿಯಾಗಿ, ತಂಗಿಯಾಗಿ, ಸ್ನೇಹಿತೆಯಾಗಿಯೂ ನಟಿಸಿದ್ದಾರೆ ನಟಿ ತಾರಾ. ಇಂಥ ನಟಿ ತಾರಾ ಅವರ ಸಂದರ್ಶನವೊಂದು ಇತ್ತೀಚೆಗೆ 'ಬಿ ಗಣಪತಿ'ಯವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮೂಡಿ ಬಂದಿದೆ. ಅದರಲ್ಲಿ ನಟಿ ತಾರಾ ಅವರ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಾರಾ ಅವರಿಗೆ ಹೊಡೆದ ಏಕೈಕ ನಿರ್ದೇಶಕರ ಬಗ್ಗೆ ಅಲ್ಲಿ ವಾರು ಅನುಭವ ಹಂಚಿಕೊಂಡಿದ್ದಾರೆ. ಹಾಗಿದ್ರೆ ನಟಿ ತಾರಾ ಅವರು ಹೇಳಿದ್ಧೇನು? ಮುಂದೆ ನೋಡಿ...

ತಾರಾ ಅನುರಾಧಾ ಅವರು ಸಂದರ್ಶನದಲ್ಲಿ ಹೇಳಿರುವಂತೆ, ಸುಂದರ ಸ್ವಪ್ನಗಳು ಸಿನಿಮಾ ಶೂಟಿಂಗ್‌ಲ್ಲಿ ಆ ಘಟನೆ ನಡೆದಿದೆ. ಆ ಚಿತ್ರದ ನಿರ್ದೇಶಕರಾದ ಕೆ ಬಾಲಚಂದರ್ ಅವರು ನಟಿ ತಾರಾ ಅವರಿಗೆ ಶೂಟಿಂಗ್‌ ಸೆಟ್‌ನಲ್ಲಿ ಕರೆದು ಕೈ ಮುಂದೆ ಮಾಡಲು ಹೇಳಿ, ಅವರ ಬಳಿಯಿದ್ದ ಸ್ಕೇಲ್‌ನಿಂದ ಕೈ ಮೇಲೆ ಒಂದು ಪೆಟ್ಟು ಹೊಡೆದಿದ್ದಾರೆ. ಆಕಸ್ಮಿಕವಾಗಿ ಬಿದ್ದ ಪೆಟ್ಟಿಗೆ ತಾರಾಗೆ ಮುಜುಗರವಾಗಿದೆ. ಅವರು ಆ ಬಗ್ಗೆ ಮಾತನ್ನಾಡುತ್ತ 'ನನಗೆ ಕೆ ಬಾಲಚಂದರ್ ಹೊಡೆದಿದ್ದಕ್ಕೆ ಸ್ವಲ್ಪವೂ ಬೇಸರ ಆಗಿರಲಿಲ್ಲ. ಆದರೆ, ಅವರು ಎಲ್ಲರ ಎದುರಿಗೆ ಹೊಡಿದಿದ್ದಕ್ಕೆ ಬೇಸರ ಆಗಿತ್ತು' ಎಂದು ತಮಾಷೆಯಾಗಿ ಹೇಳಿದ್ದಾರೆ.

ಕೆ ಬಾಲಚಂದರ್ ಬಿಟ್ಟರೆ ಬೇರೆ ಯಾವುದೇ ನಿರ್ದೇಶಕರ ಬಳಿ ಕೆಲಸ ಮಾಡುವಾಗ ನಟಿ ತಾರಾ ಅವರು ಹೊಡೆತ ತಂದಿದ್ದು ಇಲ್ಲವಂತೆ. ಬೈಸಿಕೊಂಡಿದ್ದು ಕೂಡ ತುಂಬಾ ಕಡಿಮೆ ಎಂದಿದ್ದಾರೆ ತಾರಾ ಅನುರಾಧಾ. ಅವರೊಬ್ಬ ಅತ್ಯುತ್ಮ ಕಲಾವಿದೆ ಎಂಬುದಕ್ಕೆ ಯಾರಿಗೂ ಯಾವುದೇ ಸಾಕ್ಷಿ ಬೇಕಾಗಿಲ್ಲ, ಅವರ ನಟನೆಯ ಸಿನಿಮಾಗಳೇ ಕಣ್ಣಮುಂದಿವೆ. ಹೀಗಾಗಿ ನಟಿ ತಾರಾ ಮಾತಿನಲ್ಲಿ ಎಳ್ಳಷ್ಟೂ ಸುಳ್ಳಿಲ್ಲ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ನಾಲ್ಕು ದಶಗಳ ತಮ್ಮ ವೃತ್ತಿ ಜೀವನದಲ್ಲಿ ನಟಿ ತಾರಾ ಎಲ್ಲಿಯೂ ಕೂಡ ಯಾವುದೇ ದೊಡ್ಡ ವಿವಾದಕ್ಕೆ ಸಿಲುಕಿಲ್ಲ.

ನಟಿ ತಾರಾ ಅವರು ತಮ್ಮ ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ. ಅದನ್ನು ಒಂದೇ ಸ್ಟೋರಿಯಲ್ಲಿ ಹೇಳಲು ಅಸಾಧ್ಯ. ಆದರೆ, ಒಂದು ಮಾತಂತೂ ಸತ್ಯ, ಅದೇನೆಂದರೆ.. ನಟಿ ತಾರಾ ಅವರು ಅಸಾಮಾನ್ಯ ನಟಿ ಹಾಗೂ ಅಭಿಜಾತ ಕಲಾವಿದೆ. ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧ ಅಭಿನಯ ನೀಡಿದ್ದಾರೆ. ಅವರನ್ನು ಕನ್ನಡದ ಆಸ್ತಿ ಎನ್ನಲೇಬೇಕು. ಶೈಕ್ಷಣಿಕವಾಗಿ ಕಡಿಮೆ ಓದಿದ್ದರೂ ಕೂಡ ಅವರ ಮಾತುಕತೆಗಳಲ್ಲಿ ಭಾಷಾ ಪಾಂಡಿತ್ಯ ಜೊತೆಗೆ ಭಾಷಾಭಿಮಾನ ಕೂಡ ಎದ್ದುಕಾಣುತ್ತದೆ. ನಟಿ ತಾರಾ ವರು ನಟಿಸಿದ ಚಿತ್ರಗಳು 500 ಕ್ಕಿಂತ ಹೆಚ್ಚು. ಅದು ಅವರಿಗೇ ಲೆಕ್ಕವಿದೆಯೋ ಇಲ್ಲವೋ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ