ನಟ ಪುನೀತ್ ರಾಜ್‌ಕುಮಾರ್ ಅವರು 'ಗಂಧದ ಗುಡಿ' ಎಂಬ 'ಸಾಕ್ಷ್ಯಚಿತ್ರ' ನಿರ್ಮಿಸಿ ಅದನ್ನು ಜನರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಅಷ್ಟೊಂದು ತರಾತುರಿಯಲ್ಲಿ ನಿರ್ಮಿಸಿ ನಟಿಸಿ ಹೋಗಿದ್ದೇಕೆ ನಟ ಪುನೀತ್ ಎಂಬ ರಹಸ್ಯವನ್ನು..
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ತಮ್ಮ 46ನೆಯ ವಯಸ್ಸಿನಲ್ಲೇ ಅಸು ನೀಗಿದ್ದಾರೆ. ಅಷ್ಟರಲ್ಲಾಗಲೇ ಅವರು 25 ಸಿನಿಮಾಗಳನ್ನು ಕನ್ನಡ ಸಿನಿಪ್ರೇಕ್ಷಕರಿಗೆ ಕೊಟ್ಟಿದ್ದರು. 'ಅಪ್ಪು' ಚಿತ್ರದಿಂದ ಶುರುವಾದ ನಟ ಪುನೀತ್ ರಾಜ್‌ಕುಮಾರ್ ಸಿನಿಜರ್ನಿಯು 'ಜೇಮ್ಸ್' ಚಿತ್ರದ ಮೂಲಕ ಕೊನೆಗೊಂಡಿದೆ. ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಆದರೆ, ಅಷ್ಟು ಸಿನಿಮಾ ಮಾಡಿದ್ದರೂ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ' ಎಂಬ ಡಾಕ್ಯುಮೆಂಟರಿ ನಿರ್ಮಿಸಿ ಹೋಗಿದ್ದಾರೆ. ಈ ಸಂಗತಿ ಬಹುತೇಕ ಎಲ್ಲರಿಗೂ ಗೊತ್ತು.
ನಟ ಪುನೀತ್ ರಾಜ್‌ಕುಮಾರ್ ಅವರು 'ಗಂಧದ ಗುಡಿ' ಎಂಬ 'ಸಾಕ್ಷ್ಯಚಿತ್ರ' ನಿರ್ಮಿಸಿ ಅದನ್ನು ಜನರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಅಷ್ಟೊಂದು ತರಾತುರಿಯಲ್ಲಿ ನಿರ್ಮಿಸಿ ನಟಿಸಿ ಹೋಗಿದ್ದೇಕೆ ನಟ ಪುನೀತ್ ಎಂಬ ರಹಸ್ಯವನ್ನು ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪುನೀತ್ ಅವರು ಗಂಧದ ಗುಡಿ ಶೂಟಿಂಗ್ ಮಾಡಿ ಮುಗಿಸಿದ ಮೇಲೆ ರಾಘಣ್ಣ ಅವರನ್ನು ಕರೆದು ವಿಸ್ಯೂವಲ್ ತೋರಿಸಿದ್ದಾರಂತೆ.
ಈ ಕನ್ನಡದ ಬಿಗ್ ಸ್ಟಾರ್ಸ್ 'ಹೀರೋ' ಆಗಿ ಎಂಟ್ರಿ ಕೊಟ್ಟಿದ್ದು ಎಷ್ಟನೇ ವಯಸ್ಸಿಗೆ ಗೊತ್ತಾ? ನೋಡಿ..
ಬಳಿಕ 'ನನಗೆ ಕನ್ನಡ ಚಿತ್ರರಂಗ ಹಾಗೂ ಪ್ರೇಕ್ಷಕರು ಇಷ್ಟೆಲ್ಲಾ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ನಾನು ನನ್ನ ನೆನಪಿಗಾಗಿ ಏನಾದ್ರೂ ಬಿಟ್ಟು ಹೋಗಬೇಕು' ಎಂದಿದ್ದರಂತೆ. ಆ ಮಾತಿಗೆ ಶಾಕ್ ಆದ ರಾಘಣ್ಣ 'ಏನ್ ಪಾಪು.. ಅದ್ಯಾಕೆ ಹಾಗೆ ಹೇಳ್ತೀಯಾ?' ಎಂದು ಕೇಳಿದ್ದರಂತೆ. ತಕ್ಷಣ ಮಾತು ತೇಲಿಸಿ 'ಅಲ್ಲ, ನನ್ನ ಸ್ವಂತದ್ದು ಅಂತ ಇದೊಂದು ಇರಲಿ.. ಅದಕ್ಕೇ ಈ ಗಂಧದ ಗುಡಿ ಡಾಕ್ಯುಮೆಂಟರಿಯನ್ನು ನಾನೇ ನಿರ್ಮಿಸಿದ್ದೇನೆ' ಎಂದರಂತೆ ನಟ ಪುನೀತ್.
ಆದರೆ, ಆ ಕ್ಷಣಕ್ಕೆ ರಾಘಣ್ಣ ಅವರು, ಬಹುಶಃ ಪುನೀತ್ ಅವರು ಈ ಮಾತನ್ನು ಬಾಯಿತಪ್ಪಿ ಹೇಳಿರಬೇಕು ಎಂದುಕೊಂಡಿದ್ದರಂತೆ. ಹಾಗೇ ಅಂದುಕೊಂಡು ಸಮಾಧಾನ ಕೂಡ ಮಾಡಿಕೊಂಡಿದ್ದರಂತೆ. ಆದರೆ, ಪುನೀತ್ ಅಸುನೀಗಿದ ಮೇಲೆ ರಾಘಣ್ಣ ಅವರಿಗೆ ಆ ಮಾತು ನೆನಪಾಗಿದೆ. ಆಗ, 'ಬಹುಶಃ ಅಪ್ಪುಗೆ ತಾನು ಅಲ್ಪಾಯುಷಿ, ಸದ್ಯದಲ್ಲೇ ಸಾವು ಸಂಭವಿಸಲಿದೆ' ಎಂದು ಗೊತ್ತಾಗಿತ್ತು' ಎನ್ನಿಸಿದೆಯಂತೆ. ಹಾಗಂತ ಹೇಳಿದ ರಾಘಣ್ಣ ಮಾತು ಕೇಳಿದರೆ, ಎಲ್ಲರಿಗೂ ಹಾಗೇ ಅನ್ನಿಸುವುದು ಖಂಡಿತ.
ಪುನೀತ್ & ಅಣ್ಣಾವ್ರ ಬಗ್ಗೆ ನಟ ರಮೇಶ್ ಭಟ್ ಮಾತು.. ನಾನು 'ನತದೃಷ್ಟ' ಅಂದಿದ್ದೇಕೆ?
ಏಕೆಂದರೆ, ಹಲವರು ಹೇಳುವಂತೆ.. ನಟ ಪುನೀತ್ ಅವರು ಸಾಯುವ ಸ್ವಲ್ಪ ದಿನಕ್ಕೂ ಮೊದಲು ಕೆಲವು ದಿನಗಳು ಹೆಚ್ಚುಹೆಚ್ಚು ವೈರಾಗ್ಯದ ಮಾತುಗಳನ್ನು ಆಡುತ್ತಿದ್ದರಂತೆ. ಆದರೆ, ಯಾರೂ ಆ ಬಗ್ಗೆ ಗಮನ ಕೊಡಲಿಲ್ಲ. ಅಪ್ಪುಗೆ ಅದು ಗೊತ್ತಾಗಿತ್ತು ಎಂದೇ ಅನ್ನಿಸುತ್ತದೆ, ಯಾಕಂದ್ರೆ, ಅವರು 'ಗಂಧದ ಗುಡಿ' ಯನ್ನು ಅಷ್ಟೊಂದು ಇಷ್ಟಪಟ್ಟು ಮಾಡಿ ಮುಗಿಸಿದ್ದಾರೆ. ಆದರೆ, ಅದನ್ನು ಬಿಡುಗಡೆ ಮಾಡುವ ಮೊದಲೇ ಇಹಲೋಕ ಯಾತ್ರೆ ಮುಗಿಸಿಬಿಟ್ಟಿದ್ದಾರೆ. ಕನ್ನಡಿಗರ ಪಾಲಿಗೆ ಇದೊಂದು ಘೋರ ದುರಂತ.