ರಮ್ಯಾ ಮೆಸೇಜ್ ತಪ್ಪು, ಪ್ರಥಮ್‌ಗೆ ಮಾತಿನ ಹಿಡಿತವಿಲ್ಲ: ದರ್ಶನ್ ಸರ್ ಪರ ನಿಲ್ಲುತ್ತೇನೆ ಎಂದ ಧ್ರುವ ಸರ್ಜಾ

Published : Jul 31, 2025, 05:27 PM IST
Dhruva Sarja

ಸಾರಾಂಶ

ಪ್ರಥಮ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್‌ ಮೀಡಿಯಾ ವಾರ್‌ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ನಟ ಧ್ರುವ ಸರ್ಜಾ ಎಂಟ್ರಿ ಕೊಟ್ಟಿದ್ದಾರೆ.

ದರ್ಶನ್‌ ಫ್ಯಾನ್ಸ್‌ ವಿರುದ್ಧ ಒಂದೆಡೆ ನಟಿ ರಮ್ಯಾ ತಿರುಗಿಬಿದ್ದಿದ್ದರೆ, ಇನ್ನೊಂದೆಡೆ ನಟ ಒಳ್ಳೇ ಹುಡುಗ ಪ್ರಥಮ್‌ ತಿರುಗಿಬಿದ್ದಿದ್ದಾರೆ. ಪ್ರಥಮ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ವರ್ಷಗಳ ಕಾಲದಿಂದಲೂ ಈ ವಾಗ್ಯುದ್ಧ, ಸೋಷಿಯಲ್‌ ಮೀಡಿಯಾ ವಾರ್‌ ನಡೆಯುತ್ತಲೇ ಇದೆ. ಇದೀಗ ಈ ವಿಷಯಕ್ಕೆ ನಟ ಧ್ರುವ ಸರ್ಜಾ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಮಾತನ್ನಾಡಿರುವ ನಟ ಧ್ರುವ, ರಮ್ಯಾ ಅವರಿಗೆ ಒಪ್ಪಿನಿಯನ್ ಹೇಳುವ ಅವಕಾಶವಿದೆ. ಅವರಿಗೆ ಹಾಕಿದ ಮೆಸೇಜ್ ತಪ್ಪು. ನಮಗೆ ತುಂಬಾ ಬೇಸರವಾಗಿದೆ. ನಾನು ದರ್ಶನ್ ಸರ್ ಪರ ನಿಲ್ಲುತ್ತೇನೆ. ಅಲ್ಲದೇ ಪ್ರಥಮ್‌ಗೆ ಡ್ರಾಗನ್ ತೋರಿಸಿದ್ದರು ನಿಜ ಆದ್ರೆ ಪ್ರಥಮ್ ಸರ್‌ದು ತಪ್ಪು ಇದೆ ಅನ್ಸುತ್ತೆ ಎಂದು ಹೇಳಿದರು.

ಲಾಯರ್ ಜಗದೀಶ್ ಕಂಪ್ಲೇಂಟ್ ಕೊಡು ಅಂದ್ರು ಪ್ರಥಮ್ ಕೊಡಲಿಲ್ಲ. ಎಲ್ಲೋ ಒಂದು ಕಡೆ ಪ್ರಥಮ್ ತಪ್ಪಿದೆ ಅಂತ ಅನ್ನಿಸ್ತಿದೆ. ಪ್ರಥಮ್‌ಗೆ ಮಾತಿನ ಮೇಲೆ ಹಿಡಿತವಿಲ್ಲ. ಎಲ್ಲರೂ ಅವರಿಗೆ ಅವರದ್ದೇ ಆಗಿರೋ ಸ್ವಾಭಿಮಾನವಿರುತ್ತೆ. ಯಾರು ಪರ್ಸನಲ್ ವಿಷಯನು ಮಾತಾಡುವ ಹಕ್ಕು ಇಲ್ಲ. ತುಂಬ ಪರ್ಸನಲ್ ಆಗಿ ಮಾತನಾಡಿದ್ದಾರೆ ಎಲ್ಲರಿಗೂ ಬೇಸರವಾಗುತ್ತೆ. ಇದು ಮಾತಾಡಲು ಸರಿಯಾದ ಸಮಯವಲ್ಲ. ಯಾವುದೋ ವಿಷಯಕ್ಕೆ ಯಾರನ್ನೋ ಕರೆದುಕೊಂಡು ಬರೋದು ತಪ್ಪು. ಪ್ರಥಮ್ ಅವರಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ ಇದರಲ್ಲಿ ದರ್ಶನ್ ಅವರ ತಪ್ಪಿಲ್ಲ ಎಂದರು.

ಪ್ರಥಮ್‌ಗೆ ಬೇಜಾರಾಗಿದೆ ಆದರೆ ಎಲ್ಲಾದಕ್ಕೂ ಲಿಮಿಟ್ ಇರುತ್ತೆ. ಈ ವಿಷಯದಿಂದ ಎಲ್ಲರಿಗೂ ಬೇಸರವಾಗುತ್ತೆ. ಶಿವಣ್ಣ, ಸುದೀಪ್, ಪುನೀತ್ ಯಾರಿಗೆ ಆದರೂ ಬೇಜಾರ್ ಆಗುತ್ತೆ. ಪ್ರಥಮ್ ಮೊದಲು ನೀವು ಸರಿಯಾಗಿ, ಆಮೇಲೆ ಮಾತನಾಡಿ . ಏನೇನಾಗಿದೆ ಅದೆಲ್ಲ ಆಗಬಾರದಿತ್ತು. ಅದು ಆಗಿದೆ. ಸಿನಿಮಾ ಇಂಡಸ್ಟ್ರಿ ಬಿಟ್ಟುಬಿಡುತ್ತೇನೆ ಅದೆಲ್ಲ ಒಳ್ಳೆಯ ಗುಣವಲ್ಲ. ಪೋಲಿಸ್‌ಗೆ ಬಯ್ಯುವಂತ ಕೆಲಸ ನೀವು ಮಾಡಬಾರದಿತ್ತು. ಪ್ರಥಮ್ ಎಲ್ಲ ಆಕ್ಟರ್ ಕೂಡ ಒಂದೇ ಎಂದು ಧ್ರುವ ಸರ್ಜಾ ತಿಳಿಸಿದರು. ಇನ್ನು ಸು ಫ್ರಮ್ ಸೋ ಸಿನಿಮಾ ವೀಕ್ಷಿಸಿ, ಸಿನಿಮಾ ಬಹಳ ಅದ್ಭುತವಾಗಿದೆ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ