ಮಾರ್ಕೆಟ್​ನಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿಕೊಂಡು ಹೊಡೆದ ಪೊಲೀಸರು! ದಾಸನಿಗೇನು ಲಿಂಕ್?

Published : Apr 30, 2025, 01:28 PM ISTUpdated : Apr 30, 2025, 03:22 PM IST
ಮಾರ್ಕೆಟ್​ನಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿಕೊಂಡು ಹೊಡೆದ ಪೊಲೀಸರು! ದಾಸನಿಗೇನು ಲಿಂಕ್?

ಸಾರಾಂಶ

ಬೆಂಗಳೂರಿನ ಮಾರ್ಕೆಟ್‌ನಲ್ಲಿ ಪೊಲೀಸರು ಜನರನ್ನು ಬೆತ್ತಲೆಗೊಳಿಸಿ ಥಳಿಸುವ ವೈರಲ್ ವಿಡಿಯೋ ವಾಸ್ತವದಲ್ಲಿ 'ಡೆಡ್ಲಿ ಸೋಮ ೨' ಚಿತ್ರದ ಚಿತ್ರೀಕರಣವಾಗಿದೆ. ನಿರ್ದೇಶಕ ರವಿ ಶ್ರೀವತ್ಸ ಈ ಚಿತ್ರದಲ್ಲಿ ದಾಸ ಮತ್ತು ದರ್ಶನ್ ಎಂಬ ಪಾತ್ರಗಳನ್ನು ಸೃಷ್ಟಿಸಿದ್ದಾರೆ. 'ಡೆಡ್ಲಿ ಸೋಮ' ಯಶಸ್ಸಿನ ನಂತರ ಈ ಚಿತ್ರ ನಿರ್ಮಾಣವಾಗುತ್ತಿದೆ.

ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಅದು ಬೆಂಗಳೂರಿನ ಮಾರ್ಕೆಟ್​. ಅಲ್ಲಿ ಒಂದಿಷ್ಟು ಮಂದಿಯ ಬಟ್ಟೆ ಬಿಚ್ಚಿಸಿ ಪೊಲೀಸರು ಅಟ್ಟಾಡಿಸಿಕೊಂಡು ಹೋಗುತ್ತಿದ್ದಾರೆ. ಅವರೆಲ್ಲಾ ರಸ್ತೆ ಮೇಲೆಯೇ ಬಿದ್ದು ನರಳಾಡುತ್ತಿದ್ದಾರೆ. ಪೊಲೀಸರು ಅವರಿಗೆ ರಪ ರಪ ಏಟು ಕೊಡುತ್ತಿದ್ದಾರೆ. ಈ ಏಟು ತಾಳದೆ ಅವರೆಲ್ಲಾ ಗೋಳೋ ಎನ್ನುತ್ತಿದ್ದಾರೆ. ಅಕ್ಕ ಪಕ್ಕ ಇದ್ದವರು ಈ ದೃಶ್ಯದ ಮಜಾ ತೆಗೆದುಕೊಳ್ಳುತ್ತಿದ್ದರೆ, ಕ್ಯಾಮೆರಾ ವ್ಯಕ್ತಿಯೊಬ್ಬ ಇದನ್ನೆಲ್ಲಾ ಶೂಟ್​ ಮಾಡಿಕೊಳ್ತಿದ್ದಾನೆ. ಒಮ್ಮೆ ನೋಡಿದರೆ, ಅಬ್ಬಬ್ಬಾ ಎನ್ನುವ ಉದ್ಗಾರ ಹೊರಡುತ್ತದೆ.  ಛೇ ಇವರು ಏನು  ಮಾಡಿದರು, ಪೊಲೀಸರಿಗೆ ಕರುಣೆ ಇಲ್ವಾ ಎಂದು ಕೆಲವರು ಕೇಳಿದ್ರೆ, ಖದೀಮರಿಗೆ ಸರಿಯಾಯ್ತು ಇನ್ನೂ ನಾಲ್ಕು ಏಟು ಬೀಳಬೇಕು ಅಂತಿದ್ದಾರೆ ಮತ್ತೆ ಕೆಲವರು.

ಹಾಗೆಂದು ಇದೇನು ರಿಯಲ್​ ಆಗಿ ನಡೆದದ್ದಲ್ಲ. ಈ ವಿಡಿಯೋದ ಹಿನ್ನೆಲೆ ಮುನ್ನೆಲೆ ತಿಳಿಯದೇ ನೋಡಿದರೆ ಮಾತ್ರ ಶಾಕಿಂಗ್​ ಎನ್ನಿಸುವುದು ಉಂಟು. ಆದರೆ ಇದು ರಿಯಲ್​ ವಿಡಿಯೋ ಅಲ್ಲ. ಬದಲಿಗೆ ಸಿನಿಮಾದ ಶೂಟಿಂಗ್​. ಕಮೆಂಟ್​ ಓದಿದರೆ ಮಾತ್ರ ತಿಳಿಯುತ್ತದೆ, ಇದು ಡೆಡ್ಲಿ ಸೋಮ-2 ಸಿನಿಮಾದ ಶೂಟಿಂಗ್​ ವಿಡಿಯೋ ಎಂದು. ಆದರೆ ಇದನ್ನು ತಿಳಿಯದವರು ಮಾತ್ರ ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ಇನ್ನು ಈ ಸಿನಿಮಾ  ಕುರಿತು ಹೇಳುವುದಾದರೆ, ರವಿ ಶ್ರೀವತ್ಸ ನಿರ್ದೇಶನದಲ್ಲಿ ಈ ಚಿತ್ರ ಬರುತ್ತಿದೆ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವವರು ಎಂದೇ ಫೇಮಸ್​  ಆದವರು ರವಿ. ಇದಾಗಲೇ ಇವರು  'ಡೆಡ್ಲಿ ಸೋಮ', 'ಮಾದೇಶ'ದಂತಹ ಸಿನಿಮಾಗಳನ್ನು ಮಾಡಿದ್ದಾರೆ.  'ಡೆಡ್ಲಿ ಸೋಮ 2' ಸಿನಿಮಾ ಈಗ ಮುಕ್ತಾಯದ ಹಂತದಲ್ಲಿ ಇದೆ.

'ಯಾರಿವನು' ಶೂಟಿಂಗ್​ ವೇಳೆ ಡಾ.ರಾಜ್​ ಕೊ* ಯತ್ನ! ಬದುಕಿದ್ದೇ ಪವಾಡ- ಸಾ.ರಾ.ಗೋವಿಂದು

ಅಷ್ಟಕ್ಕೂ 'ಡೆಡ್ಲಿ ಸೋಮ 2' ಸಿನಿಮಾ ಸಕತ್​ ಸೌಂಡ್​ ಮಾಡಲು ಕಾರಣ, ಇಲ್ಲಿ ಬರುವ ಪಾತ್ರಗಳ ಹೆಸರು. ಇಲ್ಲಿಯ ಪಾತ್ರಗಳಿಗೆ  ದಾಸ ಹಾಗೂ ದರ್ಶನ್ ಎಂಬ ಹೆಸರು ಇಡಲಾಗಿದೆ. ತಮಗೆ ದರ್ಶನ್​ ಮೇಲೆ ಇರುವ ಅಭಿಮಾನದಿಂದ ಈ ಹೆಸರು ಇಟ್ಟಿರುವುದಾಗಿ ನಿರ್ದೇಶಕ ರವಿ ಹೇಳಿದ್ದಾರೆ.  'ಡೆಡ್ಲಿ ಸೋಮ 2' ಹೆಸರಿನ ಬಗ್ಗೆ ಮಾತನಾಡಿದ್ದ ಅವರು,  "ಡೆಡ್ಲಿ ಸೋಮ ಆಯ್ತು, ಡೆಡ್ಲಿ 2 ಆಯ್ತು, ಡೆಡ್ಲಿ 3 ಮಾಡೋಣ ಅಂತಾನೇ ಪ್ಲಾನ್ ಮಾಡಿದ್ವಿ. ಆ ವೇಳೆಗೆ ದೆಡ್ಲಿ ಕಿಲ್ಲರ್ ಅದು ಇದು ಅಂತೆಲ್ಲ ಬಂದು ಹೋಯ್ತು. ಯಾರನ್ನ ಕಾಪಾಡಿದೆಯೋ ಇಲ್ಲವೋ ಗೊತ್ತಿಲ್ಲ. ಡೆಡ್ಲಿ ಸೋಮ ಅಂತು ನನ್ನನ್ನು ಕಾಪಾಡಿದೆ. ಅದರ ನೆರಳಿನಲ್ಲಿಯೇ ಹೋಗೋಣ ಅಂತ ಹೇಳಿ, ಈ ಸಿನಿಮಾವನ್ನು ಡೆಡ್ಲಿ ಸೋಮ ಭಾಗ ಎರಡು ಅಂತಾನೇ ಇಡುತ್ತಿದ್ದೇವೆ ಎಂದಿದ್ದರು.  

ಅಂದಹಾಗೆ, ಡೆಡ್ಲಿ ಸೋಮ ಸಿನಿಮಾದ ಮೊದಲ ಭಾಗ ರವಿ ಶ್ರೀವತ್ಸ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ. ಡೆಡ್ಲಿ ಡೈರೆಕ್ಟರ್ ಅಂತ ಈಗಲೂ ಕರೆಯುತ್ತಾರೆ. ಈ ಡೆಡ್ಲಿ ಡೈರೆಕ್ಟರ್ ಈ ಹಿಂದೆ ಡೆಡ್ಲಿ-2 ಅಂತಲೂ ಸಿನಿಮಾ ಮಾಡಿದ್ದಾರೆ. ಇದು 2010 ಬಂದಿತ್ತು. ಅದಕ್ಕೂ ಮೊದಲು ಡೆಡ್ಲಿ ಸೋಮ 2005 ರಲ್ಲಿ ಬಂದಿತ್ತು. ಈ ಎರಡೂ ಸಿನಿಮಾಗಳಾದ್ಮೇಲೆ ಇದರ ಮಧ್ಯೆ ರವಿ ಶ್ರೀವತ್ಸ ಬೇರೆ ಬೇರೆ ಸಿನಿಮಾಗಳನ್ನೂ ಮಾಡಿದರು. ಡೆಡ್ಲಿ ಅನ್ನೋ ಹೆಸರನ್ನ ಅದ್ಯಾರ್ಯಾರೋ ಹೇಗ್ಬೇಕೋ ಹಾಗೆ ಬಳಕೆ ಮಾಡಿದ್ರು. ಆದರೂ ಜಾಸ್ತಿ ಬೇಸರ ಮಾಡಿಕೊಳ್ಳದೇನೆ, ಇದೀಗ ಸೋಮನ ಕಥೆಯನ್ನೆ ಡೆಡ್ಲಿ ಸೋಮ ಭಾಗ-2 ಚಿತ್ರದಲ್ಲಿಯೇ ಹೇಳುತ್ತಿರುವುದು ಕುತೂಹಲ ಎನ್ನಿಸಿದೆ. ಅದರಲ್ಲಿಯೂ ದರ್ಶನ್​ ಫ್ಯಾನ್ಸ್​ಗೆ ಇದು ಖುಷಿ ಕೊಟ್ಟಿದೆ. ಕನ್ನಡ ಪಿಕ್ಚರ್​ ಇನ್​ಸ್ಟಾಗ್ರಾಮ್​  ಖಾತೆಯಿಂದ ಈ ವಿಡಿಯೋ ಶೇರ್​ ಆಗಿದೆ. 

 

ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್​ ಮಾತು

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ