ದರ್ಶನ್ ನಟನೆಯ 'ಮಂಡ್ಯ' ಮರುಬಿಡುಗಡೆಗೆ ಸಜ್ಜು; ಈಗ ಫ್ಯಾನ್ಸ್ ಏನಂತಿದಾರೆ..?!

Published : May 11, 2025, 01:28 PM IST
ದರ್ಶನ್ ನಟನೆಯ 'ಮಂಡ್ಯ' ಮರುಬಿಡುಗಡೆಗೆ ಸಜ್ಜು; ಈಗ ಫ್ಯಾನ್ಸ್ ಏನಂತಿದಾರೆ..?!

ಸಾರಾಂಶ

ದರ್ಶನ್‌ರ 'ಮಂಡ್ಯ' ಚಿತ್ರ ಮೇ ೧೬, ೨೦೨೫ ರಂದು ಮರುಬಿಡುಗಡೆ ಕಾಣುತ್ತಿದೆ. ೨೦೦೬ ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಈ ಚಿತ್ರ, ಹಳೆಯ ಚಿತ್ರಗಳ ಮರುಬಿಡುಗಡೆಯ ಹೊಸ ಟ್ರೆಂಡ್‌ ಅನ್ನು ಅನುಸರಿಸುತ್ತಿದೆ. ದರ್ಶನ್‌ರ ಹೊಸ ಚಿತ್ರಗಳಿಲ್ಲದ ಕಾರಣ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. 'ಓಂ', 'ಅಪ್ಪು' ಮೊದಲಾದ ಚಿತ್ರಗಳ ಮರುಬಿಡುಗಡೆ ಯಶಸ್ವಿಯಾಗಿದೆ.

ಹೌದು, ಕನ್ನಡದ ಸ್ಟಾರ್ ನಟ ದರ್ಶನ್‌ ಅಭಿನಯದ 'ಮಂಡ್ಯ' ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾ 20 ವರ್ಷದ ಹಿಂದೆ (6 January 2006) ರಂದು ಬಿಡುಗಡೆ ಕಂಡು ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೆ ಬಿಡುಗಡೆ ಆಗಲು ಸಜ್ಜಾಗಿ ನಿಂತಿದೆ. ಇದೇ ಮೇ 16 ರಂದು, ಅಂದರೆ 16 ಮೇ 2025 ರಂದು ಮಂಡ್ಯ ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ದರ್ಶನ್ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗುವ ಹಂತದಲ್ಲಿ ಇಲ್ಲ. ಈ ಕಾರಣಕ್ಕೆ ಮತ್ತೆ ಮತ್ತೆ ಹಳೆಯ ಸಿನಿಮಾಗಳನ್ನೇ ಬಿಡುಗಡೆ ಮಾಡಲಾಗುತ್ತಿದೆ. 

ಮಂಡ್ಯ ಸಿನಿಮಾದಲ್ಲಿ ನಟ ದರ್ಶನ್‌ಗೆ ನಾಯಕಿಯರಾಗಿ ರಾಧಿಕಾ ಹಾಗೂ ರಕ್ಷಿತಾ ನಟಿಸಿದ್ದಾರೆ. ಈ ಚಿತ್ರವು ಅಂದು ರೀಮೇಕ್ ಅಗಿದ್ದರೂ ಕೂಡ ಸೂಪರ್ ಹಿಟ್ ದಾಖಲಿಸಿತ್ತು. ಇದೀಗ ರೀ-ರಿಲೀಸ್ ಆಗುವ ಮೂಲಕ ಈ ಚಿತ್ರವು ಈ ಜನರೇಶನ್‌ ಜನರಿಗೆ ತಲುಪಲಿದೆ. ಇನ್ನು, ದರ್ಶನ್ ಅಭಿಮಾನಿಗಳಿಗಂತೂ ಈ ಚಿತ್ರದ ಮರು-ಬಿಡುಗಡೆ ದೊಡ್ಡ ಹಬ್ಬ ಎಂಬುವುದನ್ನು ಮತ್ತೆ ಹೇಳಬೇಕಿಲ್ಲ. ಮೇ 16 ಎಂದು ಬರುವುದೋ ಎಂದು ದರ್ಶನ್ ಫ್ಯಾನ್ ಕಾಯುತ್ತಿದ್ದಾರೆ. ಮೇ 15 ಕಳೆದರೆ ಸಾಕು, ಮರುದಿನ ಬೆಳಿಗ್ಗೆಯೇ 16 ಎಂಬುದು ಅದೆಷ್ಟು ನಿಜ ತಾನೇ?!

ಇದೀಗ ಭಾರತೀಯ ಚಿತ್ರರಂಗದಲ್ಲಿ ಮರು ಬಿಡುಗಡೆಯ ಭರಾಟೆ ಜೋರಾಗಿದೆ. ಇದೀಗ ಹಳೆಯ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಬಾಲಿವುಡ್ ಚಿತ್ರಗಳು ಮರು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಹಳೆಯ ಜನಪ್ರಿಯ ಚಿತ್ರಗಳನ್ನು ಮತ್ತೆ ತೆರೆಗೆ ತರುವ ಟ್ರೆಂಡ್ ಹೆಚ್ಚಾಗುತ್ತಿದ್ದು, ಇದು ನಿರ್ಮಾಪಕರಿಗೆ ಲಾಭದಾಯಕವಾಗಿದೆ.

ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ ಚಿತ್ರಮಂದಿರಗಳು ಮತ್ತೆ ಗಿಜಿಗುಡುತ್ತಿವೆ. ಈ ಟ್ರೆಂಡ್ ಈಗ ಕನ್ನಡದಲ್ಲಿ ಕೂಡ ಶುರುವಾಗುವ ಎಲ್ಲಾ ಲಕ್ಷಣಗಳೂ ಇವೆ. ಹಾಗಿದ್ದರೆ ಇದೇನು ಮ್ಯಾಜಿಕ್? ಮುಂದೆ ನೋಡಿ.. 

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಮರು ಬಿಡುಗಡೆಯ ಹಿಂದಿನ ಮುಖ್ಯ ಕಾರಣವೆಂದರೆ, ಪ್ರೇಕ್ಷಕರು ಹಳೆಯ ಕ್ಲಾಸಿಕ್ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಬಯಸುವುದು. ಅಲ್ಲದೆ, ಚಿತ್ರಮಂದಿರಗಳಲ್ಲಿ ಉತ್ತಮ ಗುಣಮಟ್ಟದ ಪ್ರದರ್ಶನ ಲಭ್ಯವಿರುವುದರಿಂದ ಪ್ರೇಕ್ಷಕರು ಆಕರ್ಷಿತರಾಗುತ್ತಿದ್ದಾರೆ. ಸದ್ಯಕ್ಕೆ ಈ ಟ್ರೆಂಡ್ ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಮರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.

ಸದ್ಯ ಈ ಟ್ರೆಂಡ್ ಕೇವಲ ಬಾಲಿವುಡ್‌ಗೆ ಸೀಮಿತ ಎಂದು ಹೇಳುವುದು ಅಸಾಧ್ಯ ಎನ್ನಬಹುದು. ಏಕೆಂದರೆ, ಕನ್ನಡದಲ್ಲಿ ಕೂಡ ಹಳೆಯ ಚಿತ್ರಗಳು ಆಗಾಗ ಬಿಡುಗಡೆ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಉಪೇಂದ್ರ ನಿರ್ದೇಶನ, ಶಿವರಾಜ್‌ಕುಮಾರ್ ನಟನೆ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಓಂ' ಚಿತ್ರ ಇದಕ್ಕೆ ಕನ್ನಡದಲ್ಲಿ ಅತ್ಯುತ್ತಮ ಉದಾಹರಣೆ ಎನ್ನಬಹುದು. 1995 ರಲ್ಲಿ ಮೊದಲು ಬಿಡುಗಡೆಯಾಗಿದ್ದ ಈ ಚಿತ್ರವು ಬಹಳಷ್ಟು ಮರುಬಿಡುಗಡೆ ಕಂಡಿದೆ. ಜೊತೆಗೆ, ಯಶಸ್ವಿ ಕೂಡ ಆಗಿದೆ. 

ಅಷ್ಟೇ ಅಲ್ಲ, ನಟ ದರ್ಶನ್‌ ನಟನೆಯ 'ನವಗ್ರಹ', 'ಕರಿಯ' ಹಾಗೂ 'ನನ್ನ ಪ್ರೀತಿಯ ರಾಮು' ಚಿತ್ರಗಳು ಮತ್ತೆ ಬಿಡುಗಡೆ ಆಗಿ ಭಾರೀ ಕಲೆಕ್ಷನ್ ಮಾಡಿವೆ. ಜೊತೆಗೆ ಇದೀಗ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಚಿತ್ರವು ರೀರಿಲೀಸ್ ಆಗಿದೆ. ಪುನೀತ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರವು ಮಾರ್ಚ್ 14ರಂದು ಮತ್ತೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಈಗ ಕಾಲ ಬದಲಾಗಿದೆ. ಹಳೆಯದೇ ಮತ್ತೆ ಹೊಸದಾಗುತ್ತಿದೆ. ಅದು ಫ್ಯಾಷನ್ ವಿಷಯದಲ್ಲೂ ಆಗಿರಬಹುದು, ಹಾಗೂ ಸಿನಿಮಾಗಳ ವಿಷಯದಲ್ಲೂ ಕೂಡ. ಈಗ ಹೇಳಹೊರಟಿರುವುದು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿರುವ ಸಿನಿಮಾ ವಿದ್ಯಮಾನಗಳ ಕುರಿತು. ಹೌದು, ಸದ್ಯ ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದು ಏನು, ಎತ್ತ ಎಂಬುದನ್ನು ಹೇಳಲಾಗುತ್ತಿದೆ, ಸ್ವಲ್ಪ ಮುಂದೆ ನೋಡಿ.. 

ಹೌದು, ಬಾಲಿವುಡ್‌ನಲ್ಲಿ ಹಳೆಯ ಸಿನಿಮಾಗಳ ಮರು-ಬಿಡುಗಡೆಗಳ ಅಬ್ಬರ ಜೋರಾಗಿದೆ! ಹಳೆಯ ಸೂಪರ್‌ಹಿಟ್ ಚಿತ್ರಗಳನ್ನು ಮತ್ತೆ ತೆರೆಗೆ ತರುವ ಟ್ರೆಂಡ್ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ವ್ಯಾಪಾರ ತಜ್ಞರ ಪ್ರಕಾರ, ಈ ಮರು ಬಿಡುಗಡೆಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿವೆ. ಜೊತೆಗೆ, ಮತ್ತೆ ಹಳೆಯ ನಟನಟಿಯರು ಜನಮನದಲ್ಲಿ ಸ್ಥಾನ ಪಡೆಯತೊಡಗಿದ್ದಾರೆ. ಜೊತೆಗೆ, ಅವರು ಕೂಡ ತಮ್ಮ ಸಿನಿಮಾಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡಬಹುದು.

ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ಸಿಕ್ಕ ಪ್ರತಿಕ್ರಿಯೆಗಿಂತಲೂ ಹೆಚ್ಚಿನ ಪ್ರೀತಿಯನ್ನು ಈಗ ಪಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಈ ಯಶಸ್ಸಿಗೆ ಮುಖ್ಯ ಕಾರಣವೆಂದರೆ, ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುವ ಶಕ್ತಿ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ನೋಡುವ ಅವಕಾಶ ಸಿಗುತ್ತಿದೆ. ಬಾಲಿವುಡ್‌ನ ಈ ತಂತ್ರವು ಗಲ್ಲಾಪೆಟ್ಟಿಗೆಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸುವ ಸೂಚನೆ ನೀಡುತ್ತಿದೆ. ಚಿತ್ರೋದ್ಯಮದಲ್ಲಿ ಇದು ಹೊಸ ಟ್ರೆಂಡ್ ಆಗಿ ಸ್ಥಾಪಿತವಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಳೆಯ ಚಿನ್ನ ಮತ್ತೆ ಹೊಳೆಯುತ್ತಿದೆ!.. ಇದು ಈ ಕಾಲದ ಹೊಸ ಅಧ್ಯಾಯವೇ? ಹೌದೆನ್ನುತ್ತಿವೆ ಸುದ್ದಿ ಮೂಲಗಳು.

ಹೌದು, ಇತ್ತೀಚೆಗೆ ಹಬ್ಬಿರುವ ಈ ಟ್ರೆಂಡ್ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗದು. ಇದು ಈಗ ಬಾಲಿವುಡ್‌ನಲ್ಲಿ ಹೆಚ್ಚು ಎನ್ನಿಸಬಹುದು. ಆದರೆ, ಕನ್ನಡದಲ್ಲಿ ಕೂಡ ಇದು ಇದೆ. ಈ ಮೊದಲೂ ಇತ್ತು, ಈಗಲೂ ಇದೆ, ಇನ್ಮುಂದೆ ಕೂಡ ಇರುತ್ತೆ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!