ಕನ್ನಡದಲ್ಲಿ ಹೆಚ್ಚೆಚ್ಚು ಸಿನಿಮಾ ನಿರ್ಮಾಣವಾಗಬೇಕು: ಜೋಗಿ ಪ್ರೇಮ್‌ ಕಾಲೆಳೆದ ಕಿಚ್ಚ ಸುದೀಪ್‌

Published : Oct 20, 2025, 09:54 AM IST
Kichcha Sudeep

ಸಾರಾಂಶ

ಕೆಡಿ ಸಿನಿಮಾ ರಿಲೀಸ್‌ ಅನ್ನು ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಶಿಫ್ಟ್‌ ಮಾಡಿದ್ರೂ ಅಚ್ಚರಿ ಇಲ್ಲ. ಆದರೆ ವಾಸ್ತವದಲ್ಲಿ ಕನ್ನಡದಲ್ಲಿ ಹೆಚ್ಚೆಚ್ಚು ಸಿನಿಮಾ ನಿರ್ಮಾಣವಾಗಬೇಕಿದೆ. ಹೀಗೆ ಜೋಗಿ ಪ್ರೇಮ್‌ ಅವರ ಕಾಲೆಳೆದದ್ದು ಕಿಚ್ಚ ಸುದೀಪ್‌.

‘ಕೆಡಿ ಸಿನಿಮಾ ನಿರ್ಮಾಪಕರು ಬ್ರಾಟ್‌ ಸಿನಿಮಾ ವಿತರಿಸಲು ಕಾತರದಿಂದಿರುವುದಾಗಿ ಹೇಳಿದ್ದಾರೆ, ಏಕೆಂದರೆ ಅವರ ಸಿನಿಮಾ ರಿಲೀಸೇ ಆಗ್ತಿಲ್ಲವಲ್ಲ.. ಜೋಗಿ ಪ್ರೇಮ್‌ ಅವರು ಕೆಡಿ ಸಿನಿಮಾ ರಿಲೀಸ್‌ ಅನ್ನು ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಶಿಫ್ಟ್‌ ಮಾಡಿದ್ರೂ ಅಚ್ಚರಿ ಇಲ್ಲ. ಆದರೆ ವಾಸ್ತವದಲ್ಲಿ ಕನ್ನಡದಲ್ಲಿ ಹೆಚ್ಚೆಚ್ಚು ಸಿನಿಮಾ ನಿರ್ಮಾಣವಾಗಬೇಕಿದೆ’. ಹೀಗೆ ಜೋಗಿ ಪ್ರೇಮ್‌ ಅವರ ಕಾಲೆಳೆದದ್ದು ಕಿಚ್ಚ ಸುದೀಪ್‌.

ಶಶಾಂಕ್‌ ನಿರ್ದೇಶನದಲ್ಲಿ ಡಾರ್ಲಿಂಗ್‌ ಕೃಷ್ಣ ಹಾಗೂ ಮನಿಶಾ ಕಂದಕೂರ್‌ ನಟಿಸಿರುವ ‘ಬ್ರಾಟ್‌’ ಸಿನಿಮಾದ ಟ್ರೇಲರ್‌ ಅನ್ನು ಸುದೀಪ್‌ ಬಿಡುಗಡೆ ಮಾಡಿದರು. ‘ಡಾರ್ಲಿಂಗ್‌ ಕೃಷ್ಣ ಅವರನ್ನು ಕ್ಲೀನ್‌ ಕೃಷ್ಣಪ್ಪ ಅಂತ ಕರೀತೀವಿ. ಅವರ ವ್ಯಕ್ತಿತ್ವದಲ್ಲಿ ಬ್ರಾಟ್‌ ಎಂಬುದರ ಒಂದಂಶವೂ ಇಲ್ಲ. ಊಟ, ಸಿನಿಮಾ, ಮನೆ ಇವಿಷ್ಟೇ ಅವರ ಜಗತ್ತು. ಅಂಥವರ ಬಳಿ ಇಂಥಾದ್ದೊಂದು ಕಿಡಿಗೇಡಿ ಹುಡುಗನ ಪಾತ್ರ ಮಾಡಿಸಲು ನಿರ್ದೇಶಕ ಶಶಾಂಕ್‌ ಬಹಳ ಕಷ್ಟಪಟ್ಟಿರಬೇಕು. ಶಶಾಂಕ್‌ ಅವರ ಪ್ರತಿಭೆಗೆ ತಕ್ಕ ಸಿನಿಮಾ ಇನ್ನೂ ಬಂದಿಲ್ಲ. ಒಂದು ಮುಂಜಾನೆ ಎದ್ದು ತಲೆಯಲ್ಲಿರುವ ಎಲ್ಲ ಕಲಾವಿದರನ್ನೂ ಆಚೆಗೆ ಹಾಕಿ ಅವರು ಅವರದೇ ಕಥೆ ಬರೆಯಲು ಕೂರಬೇಕು. ಶಶಾಂಕ್‌ ಅವರ ಆ ಅದ್ಭುತ ಸಿನಿಮಾಕ್ಕೆ ನಾವೆಲ್ಲ ಸಾಕ್ಷಿಯಾಗುವಂತಿರಬೇಕು ’ ಎನ್ನುವ ಮಾತನ್ನೂ ಸುದೀಪ್‌ ಹೇಳಿದರು.

ಇಮೇಜ್‌ ಬದಲಿಸುವಂತೆ ಸಿನಿಮಾ ಮಾಡಿದ್ದೇವೆ

ನಿರ್ದೇಶಕ ಶಶಾಂಕ್‌, ‘ನನಗೆ ಈಸಿ ರೂಟ್‌ ಇಷ್ಟ ಇಲ್ಲ. ಚಾಲೆಂಜಿಂಗ್‌ ಸಿನಿಮಾ ಮಾಡುವ ಆಸೆ. ನನಗೆ ಕೃಷ್ಣ ಅವರು ರೊಮ್ಯಾಂಟಿಕ್‌ ಹೀರೋ ಆಗಿ ಕಂಡಿಲ್ಲ. ರಫ್‌ ಆಂಡ್‌ ಟಫ್‌ ಮ್ಯಾನ್‌ ಆಗಿ ಕಂಡಿದ್ದರು. ಅವರ ಕ್ರಿಕೆಟ್‌ ಪ್ರತಿಭೆ ಇಟ್ಟುಕೊಂಡು ಇಮೇಜ್‌ ಬದಲಿಸುವಂತೆ ಈ ಸಿನಿಮಾ ಮಾಡಿದ್ದೇವೆ. ಈ ಸಿನಿಮಾವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ, ಇಲ್ಲಿ ಹಿಟ್‌ ಆದಮೇಲೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದರು. ನಾಯಕ ಡಾರ್ಲಿಂಗ್‌ ಕೃಷ್ಣ, ನಾಯಕಿ ಮನಿಶಾ ಕಂದಕೂರ್ ಹಾಜರಿದ್ದರು. ಮಂಜುನಾಥ್ ಕಂದಕೂರ್‌ ನಿರ್ಮಾಣದ ಈ ಸಿನಿಮಾ ಅಕ್ಟೋಬರ್‌ 31ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!