Daali Dhananjaya ಪುತ್ರನ ಮೊದಲ ಫೋಟೋ ರಿವೀಲ್: ಅಭಿಮಾನಿಗಳ ಮನ ಗೆದ್ದ 'ಮದರ್ ಪ್ರಾಮಿಸ್' ಪೋಸ್ಟ್

Published : Jul 06, 2026, 04:51 PM IST
Daali Dhananjaya

ಸಾರಾಂಶ

ನಟ ರಾಕ್ಷಸ ಡಾಲಿ ಧನಂಜಯ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇತ್ತೀಚೆಗೆ ಪತ್ನಿ ಧನ್ಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ, ಇದೀಗ ಮೊದಲ ಬಾರಿಗೆ ತಮ್ಮ ಮುದ್ದು ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇತ್ತೀಚೆಗೆ ಪತ್ನಿ ಧನ್ಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ, ಇದೀಗ ಮೊದಲ ಬಾರಿಗೆ ತಮ್ಮ ಮುದ್ದು ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ, ಮಗುವಿನ ಮುಖವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಕೇವಲ ಎರಡು ತಿಂಗಳ ಹಸುಗೂಸಾಗಿರುವ ಕಾರಣ, ಪುಟ್ಟ ಮಗನ ಪುಟಾಣಿ ಪಾದಗಳನ್ನು ಎದೆಗೊತ್ತಿಕೊಂಡು ಮುದ್ದಾಡುತ್ತಿರುವ ಭಾವನಾತ್ಮಕ ಚಿತ್ರವನ್ನಷ್ಟೇ ಹಂಚಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳ ಮನಗೆದ್ದಿದ್ದು, ಸಾವಿರಾರು ಮಂದಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ಫೋಟೋದಲ್ಲಿರುವ ಮತ್ತೊಂದು ವಿಶೇಷವೆಂದರೆ ಧನಂಜಯ್ ಧರಿಸಿರುವ ಕಪ್ಪು ಬಣ್ಣದ ಶರ್ಟ್. ಅದರ ಮೇಲೆ 'Mother Promise' ಎಂಬ ಬರಹ ಗಮನ ಸೆಳೆಯುತ್ತಿದ್ದು, ತಮ್ಮ ವೈಯಕ್ತಿಕ ಸಂತಸದ ಕ್ಷಣವನ್ನೇ ಮುಂಬರುವ ಸಿನಿಮಾದ ಪ್ರಚಾರಕ್ಕೆ ಜೋಡಿಸಿರುವ ರೀತಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಧನಂಜಯ್ ಹಾಗೂ ಧನ್ಯಾ ಅವರ ವಿವಾಹ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದಿದ್ದ ಈ ಮದುವೆ ಸಾಕಷ್ಟು ಸುದ್ದಿಯಾಗಿತ್ತು. ಈಗ ಮಗುವಿನ ಆಗಮನದೊಂದಿಗೆ ಈ ದಂಪತಿಯ ಜೀವನದಲ್ಲಿ ಮತ್ತೊಂದು ಸಂಭ್ರಮದ ಕ್ಷಣ ಸೇರಿಕೊಂಡಿದೆ. ಇನ್ನೊಂದೆಡೆ, ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಮದರ್ ಪ್ರಾಮಿಸ್' ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಕಾಮಿಡಿ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಧನಂಜಯ್ ಅವರೇ ನಿರ್ಮಿಸಿದ್ದು, ಪೂರ್ಣಚಂದ್ರ ಮೈಸೂರು ನಿರ್ದೇಶಿಸಿದ್ದಾರೆ.

'ರಾಸಿ' ಪಾತ್ರದಲ್ಲಿ ಧನಂಜಯ್

ಚಿತ್ರದಲ್ಲಿ ಬೆಂಗಳೂರಿನ ಜೂಜುಕೋರನೊಬ್ಬ ಅಪಾಯಕಾರಿ ಗ್ಯಾಂಗ್‌ಸ್ಟರ್‌ಗಳು ಹಾಗೂ ಕಳ್ಳಸಾಗಣೆ ಜಾಲದಿಂದ ಪಾರಾಗಲು ನಡೆಸುವ ಹೋರಾಟವನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಧನಂಜಯ್ 'ರಾಸಿ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪೂರ್ಣಚಂದ್ರ ಮೈಸೂರು, ಗೀತಾ, ವಿನಯಾ ಪ್ರಸಾದ್, ಗುರುದತ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ, ಒಂದೆಡೆ ತಂದೆಯಾದ ಸಂಭ್ರಮ, ಮತ್ತೊಂದೆಡೆ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ, ಡಾಲಿ ಧನಂಜಯ್ ಪಾಲಿಗೆ ಈ ಜುಲೈ ತಿಂಗಳು ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ಎರಡೂ ದೃಷ್ಟಿಯಿಂದ ವಿಶೇಷವಾಗಿರುವುದು ನಿಜ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rishab Shetty ಹುಟ್ಟುಹಬ್ಬ ವಿಶೇಷ: ‘ಜೈ ಹನುಮಾನ್’, ‘ರಂಡಮೂಳಂ’ ಹಾಗೂ ಹೊಸ ಕನಸು
Krishi Thapanda: ಪದೇ ಪದೇ ಆರೋಪ, ಚುಚ್ಚು ಮಾತುಗಳು; 'ಬೇರೆ ದಾರಿ ಇಲ್ಲ; ದುಃಖದ ಜೊತೆ ಬದುಕ್ತೀನಿ'