
ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಜೋಡಿಯಾಗಿ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಟ್ರೇಲರ್ ಇದೇ ಆಗಸ್ಟ್ 20ಕ್ಕೆ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಅಂದು ಮಧ್ಯಾಹ್ನ 12.34ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿದ್ದು, ಡಾಲಿ ನಟನೆಯ ಚಿತ್ರದ ಝಲಕ್ ನೋಡಬಹುದಾಗಿದೆ. ರೋಹಿತ್ ಪದಕಿ ನಿರ್ದೇಶನದ, ಕಾರ್ತಿಕ್ ಹಾಗೂ ಯೋಗಿ ಜಿ
ರಾಜ್ ನಿರ್ಮಾಣದ ಚಿತ್ರ ಇದಾಗಿದೆ. ಅಂದಹಾಗೆ ಇದು ಕೆಆರ್‌ಜಿ ಸ್ಟುಡಿಯೋ ಅವರ ಮೊದಲ ನಿರ್ಮಾಣದ ಚಿತ್ರವೂ ಹೌದು. 'ಟಗರು' ಡಾಲಿ ಧನಂಜಯ್‌ಗೆ ಯುವ ನಟ ಪ್ರಮೋದ್ ಸಹೋದರನಾಗಿದೆ ಸಾಥ್ ನೀಡುತ್ತಿದ್ದಾರೆ. ಇಲ್ಲಿ ಧನಂಜಯ್ ಅವರಿಗೆ ತಮ್ಮನ ಪಾತ್ರದಲ್ಲಿ ಪ್ರಮೋದ್ ಕಾಣಿಸಿಕೊಳ್ಳುತ್ತಿದ್ದಾರೆ.
ಆ.20ಕ್ಕೆ ಶಾರ್ದೂಲಾ ಚಿತ್ರ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಡಾಲಿ ಎಂದೇ ಖ್ಯಾತಿ ಪಡೆದಿರುವ ಧನಂಜಯ್ ಕಳೆದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಮ್ಮ ಮತ್ತೊಂದು ಚಿತ್ರದ ಟೈಟಲ್ 'ರತ್ನನ್ ಪ್ರಪಂಚ' ಎಂದು ರಿವೀಲ್ ಮಾಡಿದ್ದರು. ಅಂದಿನಿಂದಲೂ ಅವರ ಫ್ಯಾನ್ಸ್ ಹೊಸ ಸಿನಿಮಾಗಾಗಿ ಥ್ರಿಲ್ ಆಗಿದ್ದಾರೆ. ರೆಟ್ರೋ ಶೇಡ್ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೈ ತುಂಬಾ ಸಿನಿಮಾ ಆಫರ್ ಹಿಡಿದು ನಿಂತಿರುವ ಧನಂಜಯ್ ಅವರನ್ನು ಡಿಫರೆಂಟ್ ಪಾತ್ರಗಳಲ್ಲಿ ಅಭಿಮಾನಿಗಳು ನೋಡಲು ಕಾತುರದಿಂದ ಕಾಯುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.