ಲಾಕ್‌ಡೌನ್‌ ನಂತರ ನಟ-ನಟಿಯರ ಸಂಭಾವನೆಗೆ ಬೀಳಲಿದೆ ಕತ್ತರಿ; ಯಾರಿಗೆ ಎಷ್ಟು?

By Suvarna NewsFirst Published May 7, 2020, 4:47 PM IST
Highlights

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಚಿತ್ರರಂಗ  ಸ್ಟಾರ್ ನಟ- ನಟಿಯರ ಸಂಭಾವನೆಗೆ ಕತ್ತರಿ ಹಾಕಲಿದ್ಯಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ . 
 

ಮಹಾಮಾರಿ ಕೊರೋನಾ ವೈರಸ್‌ ಅಟ್ಟಹಾಸದಿಂದ  ಲಾಕ್‌ಡೌನ್‌ ಮಾಡಿ ಇಂದಿಗೆ 44 ದಿನಗಳು ಕಳೆದಿದೆ.  ಯಾವ ವಹಿವಾಟು ಇಲ್ಲದ ಕಾರಣ ಜನರ ತಿಜೋರಿಯಲ್ಲಿ ಹಣವಿಲ್ಲದಂತಾಗಿದೆ. ಕೋಟಿಗಟ್ಟಲೆ  ಬಂಡವಾಳ ಹಾಕಿ ಸಿನಿಮಾ ಮಾಡೋ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ.

ಒಂದು ಚಿತ್ರರಂಗಕ್ಕೆ ಸೀಮಿತವಲ್ಲ:

ಲಾಕ್‌ಡೌನ್‌ ಆರ್ಥಿಕ ಸಂಕಷ್ಟದ ಪರಿಣಾಮ ಕೇವಲ ಕನ್ನಡ ಚಿತ್ರರಂಗದ ಮೇಲೆ ಮಾತ್ರವಲ್ಲ ಬಾಲಿವುಡ್, ಕಾಲಿವುಡ್‌, ಟಾಲಿವುಡ್‌ ಹಾಗೂ ಅನೇಕ ಭಾಷಾ ಸಿನಿಮಾಗಳ ಮೇಲೆ  ಪರಿಣಾಮ ಬೀರುತ್ತಿದೆ.  ಚಿತ್ರೀಕರಣ ಹಾಗೂ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳು ರದ್ದಾದ ಕಾರಣ ನಟ-ನಟಿಯರು ಮನೆಯಲ್ಲಿಯೇ ಸಮಯ ಕಳೆಯಬೇಕಾಗಿದೆ . ಇದರಿಂದ ಇಡೀ ಚಿತ್ರೋದ್ಯಮ ಭಾರೀ  ನಷ್ಟ ಎದುರಿಸುತ್ತಿದೆ. ಇದರ ಬೆನ್ನಲ್ಲೇ ಸರ್ಕಾರ ಕಿರುತೆರೆ ಧಾರಾವಾಹಿಗಳು ಮೇ 25ರ ನಂತರ ಚಿತ್ರೀಕರಣ ಶುರು ಮಾಡಲು ಅನುಮತಿ  ನೀಡಿದೆ.

ಸ್ಟಾರ್‌ಗಳ ಸಂಭಾವನೆ ಕಟ್:

ಒಂದು ಚಿತ್ರಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದ ಸ್ಟಾರ್‌ಗಳಿಗೂ ಸಂಭಾನೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆಸ್ಥಿತಿ . ಆಯಾ ಚಿತ್ರಕಥೆ ಡಿಮ್ಯಾಂಡ್‌ ಮಾಡುವಷ್ಟು ಮಾತ್ರ ಹಣ ಬಳಸಿಕೊಂಡು ಹಾಗೂ ಪಾತ್ರಕ್ಕೆ ಸೀಮಿತವಾದಷ್ಟು ಸಂಭಾವನೆ ನೀಡಬೇಕೆಂದು ಬಾಲಿವುಡ್‌ ಚಿತ್ರರಂಗದಲ್ಲಿ ಮಾತುಗಳು ಶುರುವಾಗಿದೆ.

' ಸ್ಟಾರ್‌ಗಳು ದೊಡ್ಡ ಮೊತ್ತದಲ್ಲಿ ಸಂಭಾನೆ ಪಡೆಯುತ್ತಿದ್ದ ಕಾರಣ ಇಂಥ ಸಂದರ್ಭದಲ್ಲಿ ಚಿತ್ರೋದ್ಯಮ ಸಂಭಾವನೆ ಕಡಿತ ಮಾಡದೆ ಬೇರೆ ವಿಧಿಯಿಲ್ಲ. ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದ್ದು ಇದು ನಿರ್ಮಾಪಕರಿಗೆ ದೊಡ್ಡ ಚಾಲೆಂಜ್ ಆಗಿದೆ' ಎಂದು ಸಿನಿ ಟ್ರೇಡ್ ಅನಾಲಿಸ್ಟ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.  

ಪ್ರಭಾಸ್ ಜೊತೆ ನಟಿಸಲು ದೀಪಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

ಯಾರ ಸಂಭಾವನೆ ಎಷ್ಟು?

ಬಾಲಿವುಡ್‌ ಸುಂದರಿ ಆಲಿಯಾ ಭಟ್‌ - 10 ದಿನಕ್ಕೆ 5 ಕೋಟಿ.

ವಿಜಯ್ ದಳಪತಿ - ಮಾಸ್ಟರ್ ಚಿತ್ರಕ್ಕೆ 80 ಕೋಟಿ ಸಂಭಾವನೆ.

ಬಾಲಿವುಡ್‌ ಬ್ಯೂಟಿ ತಬು - 3 ಕೋಟಿ

ನಯನತಾರಾ - 2-3 ಕೋಟಿ.

ಮಹೇಶ್‌ ಬಾಬು - 18 ಕೋಟಿ

ಜೂನಿಯರ್‌ ಎನ್‌ಟಿಆರ್-  20 ಕೋಟಿ

ಪ್ರಭಾಸ್ - 25 ಕೋಟಿ

ಅಲ್ಲು ಸರ್ಜುನ್ - 14 ಕೋಟಿ

ಹೀಗೆ ಸಾಕಷ್ಟು ಸ್ಟಾರ್‌ಗಳ ಲೆಕ್ಕ ಹಾಕುತ್ತಾ ಕುಂತರೆ ಗಗನ ಮುಟ್ಟುತ್ತದೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ಅವರ ವ್ಯಾನಿಟಿ ವ್ಯಾನ್, ಹೇರ್‌ ಡ್ರೆಸರ್‌, ಡ್ರೈವರ್‌ ಮುಂತಾದ ಸೌಲಭ್ಯಗಳಿಗೂ ಬ್ರೇಕ್‌ ಬೀಳುವ ಸಾಧ್ಯತೆಗಳು ಹೆಚ್ಚಿದೆ .

click me!