ಕಾಪಿ ರೈಟ್ಸ್ ಕಿರಿಕ್ ಪ್ರಕರಣ ಇತ್ಯರ್ಥ, ರಾಜಿಯಾದ ರಕ್ಷಿತ್-ಲಹರಿ

By Suvarna NewsFirst Published Jun 29, 2021, 3:50 PM IST
Highlights

* ಲಹರಿ ಕಂಪನಿಯೊಂದಿಗೆ ರಾಜಿಯಾದ ನಟ ರಕ್ಷಿತ್ ಶೆಟ್ಟಿ
* ಕಿರಿಕ್‌ ಪಾರ್ಟಿ ಸಿನಿಮಾದ ಹಾಡಿನ ವಿಚಾರದ ಪ್ರಕರಣ
 * ಕಾಪಿರೈಟ್ಸ್ ಆ್ಯಕ್ಟ್ ಪ್ರಕಾರ ಕೇಸ್ ಹಾಕಿತ್ತು ಲಹರಿ ಆಡಿಯೋ ಕಂಪನಿ
* ನಾಲ್ಕು ವರ್ಷದಿಂದ ಹಗ್ಗಜಗ್ಗಟಾ ಈಗ ಇತ್ಯಾರ್ಥವಾಗಿದೆ

ಬೆಂಗಳೂರು( ಜೂ.  29)   ಕಿರಿಕ್ ಪ್ರಕರಣವೊಂದು ಸುಖಾಂತ್ಯವಾಗಿದೆ. ಲಹರಿ ಕಂಪನಿಯೊಂದಿಗೆ ನಟ ರಕ್ಷಿತ್ ಶೆಟ್ಟಿ ರಾಜಿ ಮಾಡಿಕೊಂಡಿದ್ದಾರೆ. ಕಿರಿಕ್‌ ಪಾರ್ಟಿ ಸಿನಿಮಾದ ಹಾಡಿನ ವಿಚಾರದಲ್ಲಿ  ಕಾಪಿರೈಟ್ ಫೈಟ್ ನಡೆಯುತ್ತಿತ್ತು.

ಈ ಹಿಂದೆ ಕಿರಿಕ್ ಪಾರ್ಟಿ ಹಾಡೊಂದಕ್ಕೆ ಕಾಪಿರೈಟ್ಸ್ ಆ್ಯಕ್ಟ್ ಪ್ರಕಾರ  ಲಹರಿ ಆಡಿಯೋ ಕಂಪನಿ ಕೇಸ್ ದಾಖಲಿಸಿತ್ತು. ನಾಲ್ಕು ವರ್ಷದಿಂದ ನಡೆಯುತ್ತಿದ್ದ ಇತ್ಯಾರ್ಥವಾಗಿದೆ.. ಡಿನ ಕಾಪಿರೈಟ್ ವಿಚಾರ ಲಹರಿ ಕೋರ್ಟ್ ಮೆಟ್ಟಿಲೇರಿತ್ತು. ನಟ ರಕ್ಷಿತ್ ಶೆಟ್ಟಿ‌ ವಿಚಾರಣೆಗೂ ಹಾಜರಾಗಿದ್ದರು.

ರಕ್ಷಿತ್ ಶೆಟ್ಟಿ ಮತ್ತು ಚೇತನ್ ಅಹಿಂಸಾ ನಡುವೆ ಫೈಟ್

ಖಾಸಗಿ ಹೋಟೆಲ್ ಒಂದರಲ್ಲಿ ಲಹರಿ ಕಂಪನಿಯ ಮುಖ್ಯಸ್ಥರಲ್ಲೊಬ್ಬರಾದ ಲಹರಿ ವೇಲು ಅವರನ್ನು ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್  ಭೇಟಿ ಮಾಡಿದ್ದಾರೆ. ಚಿತ್ರರಂಗದ ಹಿತದೃಷ್ಟಿಯಿಂದ ಸೌಹಾರ್ದತ ಪೂರಕವಾಗಿ ಕೇಸನ್ನ ವಾಪಸ್ ಪಡೆದಿದ್ದೇವೆ ಎಂದು ಲಹರಿ ಸಂಸ್ಥೆ ತಿಳಿಸಿದೆ.

ಕಿರಿಕ್ ಪಾರ್ಟಿ ಸಿನಿಮಾ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಲಹರಿ ಸಂಸ್ಥೆ  ಮುಂದಾಗಿತ್ತು. ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿತ್ತು.

ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಸೆಪ್ಟಂಬರ್ 28, 2019 ರಲ್ಲಿ ಕೇಸು ದಾಖಲಾಗಿತ್ತು.

click me!