ಕೊನೆಗೂ 2ನೇ ಮದ್ವೆಗೆ ಚಂದನ್​ ಶೆಟ್ಟಿ ರೆಡಿ! ಹುಡುಗಿ ಹೇಗಿರಬೇಕೆಂದು ಮನದ ಮಾತು ತೆರೆದಿಟ್ಟ ನಟ...

Published : May 10, 2025, 11:16 AM ISTUpdated : May 12, 2025, 11:57 AM IST
ಕೊನೆಗೂ 2ನೇ ಮದ್ವೆಗೆ ಚಂದನ್​ ಶೆಟ್ಟಿ ರೆಡಿ!   ಹುಡುಗಿ ಹೇಗಿರಬೇಕೆಂದು ಮನದ ಮಾತು ತೆರೆದಿಟ್ಟ ನಟ...

ಸಾರಾಂಶ

ಚಂದನ್​ ಶೆಟ್ಟಿ 'ಮುದ್ದು ರಾಕ್ಷಸಿ' ಚಿತ್ರ ಮುಗಿಸಿ, 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋದಲ್ಲಿ ಬ್ಯುಸಿ. ನಿವೇದಿತಾ ಜೊತೆಗಿನ ವಿಚ್ಛೇದನದ ನಂತರ ಮತ್ತೆ ಮದುವೆಗೆ ಸಿದ್ಧ. ಸಿನಿಮಾರಂಗದ ಹೊರಗಿನ, ತಮ್ಮನ್ನು ಅರ್ಥಮಾಡಿಕೊಳ್ಳುವ ಹುಡುಗಿ ಬೇಕೆನ್ನುವುದು ಅವರ ಆಶಯ. 'ಸೂತ್ರಧಾರಿ' ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ. ತಂದೆಯ ಕನಸು ನನಸಾಗುತ್ತಿದೆ ಎಂದಿದ್ದಾರೆ.

ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್​ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ  ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್​ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ  ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್​ಬ್ಯಾಕ್​ ಆಗಿದ್ದು ನೋಡಿ ಫ್ಯಾನ್ಸ್​ಗೆ ಸಕತ್​ ಖುಷಿಯಾಗಿದೆ. ನಿವೇದಿತಾ ಅವರು ದಿನದಿಂದ ದಿನಕ್ಕೆ ಹಾಟ್​ ಆಗಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಾ ನೆಗೆಟಿವ್​ ಕಮೆಂಟ್ಸ್​ಗಳನ್ನು ಎಂಜಾಯ್​ ಮಾಡುತ್ತಿದ್ದರೆ, ಇತ್ತ ಚಂದನ್​ ಶೆಟ್ಟಿ ತಮ್ಮ ಕರಿಯರ್​ನಲ್ಲಿ ಮುಂದುವರೆಯುತ್ತಿರುವ ಜೊತೆಗೆ ಈಗ ಮತ್ತೊಂದು ಮದ್ವೆಗೂ ಸಿದ್ಧರಾಗಿದ್ದಾರೆ.

ಹೌದು. ಚಂದನ್​ ಶೆಟ್ಟಿ ಬಾಳಲ್ಲಿ ಹೊಸ ಹುಡುಗಿ ಎಂಟ್ರಿಯಾಗಬೇಕು, ಅವರು ಮೊದಲು ಮಾಡಿದ ತಪ್ಪನ್ನೇ ಮಾಡಬಾರದು, ಈ ಬಾರಿ ಎಲ್ಲಾ ವಿಚಾರಿಸಿ ಅವರಂತೆಯೇ ಒಳ್ಳೆಯ ಹುಡುಗಿಯನ್ನೇ ಮದ್ವೆಯಾಗಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಅದರ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಂದನ್​ ಶೆಟ್ಟಿ ಮಾತನಾಡಿದ್ದಾರೆ. ನನಗೆ ಸಿಂಗಲ್​ ಆಗಿಯೇ ಮುಂದುವರೆಯುವ ಇಷ್ಟವೇನಿಲ್ಲ. ನನ್ನ ಪಾಲಕರಿಗೂ ನಾನು ಲೈಫ್​ನಲ್ಲಿ ಮುಂದಕ್ಕೆ ಹೋಗಬೇಕು, ದಾಂಪತ್ಯ ಜೀವನ ನಡೆಸಬೇಕು, ಮದುವೆಯಾಗಬೇಕು ಎನ್ನುವ ಎಲ್ಲಾ ಆಸೆಯಿದೆ. ಅದಕ್ಕಾಗಿಯೇ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ನಿವೇದಿತಾ ಬಾಳಲ್ಲಿ ಹೊಸ ಉತ್ಸಾಹ! ಜೀವಕ್ಕೆ ಹೊಸ ದಿಕ್ಕು ತೋರಿದ ಯುವಕನ ಪರಿಚಯಿಸಿದ ನಟಿ..

ಇದೇ ವೇಳೆ ತಮ್ಮ ಕನಸಿನ ಹುಡುಗಿಯ ಬಗ್ಗೆ ಮಾತನಾಡಿರುವ ಚಂದನ್​ ಶೆಟ್ಟಿ, ಆಕೆ ಪಬ್ಲಿಕ್​ ಲೈಫ್​ನಲ್ಲಿ ಇರಬಾರದು, ಸಿನಿಮಾ ರಂಗದಲ್ಲಿಯೂ ಇರಬಾರದು ಎಂದಿದ್ದಾರೆ. ಇದಕ್ಕೆ ಉದಾಹರಣೆ ಕೊಟ್ಟಿರುವ ಅವರು, ನಾವಿಬ್ಬರೂ ಸಿನಿಮಾ ಫೀಲ್ಡ್​ನಲ್ಲಿಯೇ  ಇದ್ದರೆ ಇಬ್ಬರೂ ಬಿಜಿ ಆಗ್ತೇವೆ. ಪರಸ್ಪರ ಟೈಮ್​  ಕೊಡಲು ಆಗುವುದಿಲ್ಲ. ಆದ್ದರಿಂದ ಹಾಗೆ ಬೇಡ ಎನ್ನುವ ಮೂಲಕ ಹಿಂದೆ ತಾವು ನಿವೇದಿತಾರನ್ನು ಮದುವೆಯಾಗಿದ್ದ ಅನುಭವವನ್ನು ಪರೋಕ್ಷವಾಗಿ ಹೇಳಿಕೊಂಡಂತಿದೆ. ನನ್ನನ್ನು ಆಕೆ ಅರ್ಥ ಮಾಡಿಕೊಳ್ಳಬೇಕು, ಅಂಡರ್​ಸ್ಟ್ಯಾಂಡಿಂಗ್​ನಲ್ಲಿ ಇರಬೇಕು. ಪಬ್ಲಿಕ್​ ಲೈಫ್​ನಲ್ಲಿ ಇರುವಂತವಳು ಬೇಡ ಎಂದೂ ಹೇಳಿದ್ದಾರೆ. 

ಕೆಲ ದಿನಗಳ ಹಿಂದೆ ತಮ್ಮ ಮುಂಬರುವ ಸೂತ್ರಧಾರಿ ಚಿತ್ರದ ಕುರಿತು ಹೇಳಿಕೊಂಡಿದ್ದ ಚಂದನ್  ಶೆಟ್ಟಿ,  ನನ್ನ ಬಹಳ ವರ್ಷಗಳ ಕನಸು ಈಡೇರುತ್ತಿದೆ, ಹೊಸ ಜೀವನ ಶುರು ಮಾಡುತ್ತಿದ್ದೇನೆ. ಅಪ್ಪನ ಆಸೆಯಂತೆ ಹೀಗೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದಿದ್ದರು.   ಸೂತ್ರಧಾರಿ ಚಿತ್ರದ  ಮೂಲಕ ಚಂದನ್‌ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಕುರಿತು ಅವರು ಮಾತನಾಡಿದ್ದರು.  ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಎಂದಿದ್ದರು ನಟ.  

ಆ ರೂಮ್​ನಲ್ಲೇ ಇಬ್ರೂ ಮಾಡ್ತೀವಿ, ಏನಿವಾಗ? ನೋಡೋಕೆ ಆಗದಿದ್ರೆ ಕಣ್ಮುಚ್ಚಿ... ನಿವೇದಿತಾ ಗೌಡ ಗರಂ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ