
ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಸದಾ ನ್ಯೂಸ್ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಕೊಡುವ ಪ್ರಶಾಂತ್ ಇದೀಗ ಸಿನಿಮಾದ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದ್ದಾರೆ. ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು ಫೋಟೋ ಶೂಟ್ ಮಾಡಿಸಿರುವ ಫೋಟೋಗಳು ವೈರಲ್ ಆಗುತ್ತಿದೆ. ಪ್ರಶಾಂತ್ ಇದ್ದಾರೆ ಅಂದ್ರೆ ಸಿನಿಮಾ ಕ್ರಾಂತಿ ಮಾಡೋದು ಗ್ಯಾರಂಟಿ ಅಂತಿದ್ದಾರೆ ಸಿನಿ ರಸಿಕರು.
ಹೌದು! ಅರ್ಜುನ್ ನಿರ್ದೇಶನ ಮಾಡುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿ ಸಿನಿಮಾದಲ್ಲಿ ಪ್ರಶಾಂತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಚಂದನ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈಗಷ್ಟೇ ಬಿಗ್ ಬಾಸ್‌ನಿಂದ ಹೊರ ಬಂದಿರುವ ಪ್ರಶಾಂತ್ ಕೆಲವು ದಿನಗಳಲ್ಲಿ ಚಿತ್ರೀಕರಣ ಅರಂಭಿಸಲಿದ್ದಾರೆ. 'ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಡ್ರಗ್ಸ್ ಮತ್ತು ಆನ್‌ಲೈನ್ ಗೇಮಿಂಗ್‌ನಿಂದ ಯುವಕರಿಗೆ ಆಗುತ್ತಿರುವ ಅಪಾಯವನ್ನು ತಡೆಯುವಂತ ಕೆಲಸ ಮಾಡುತ್ತಿರುವೆ. ನನ್ನ ನಿಜ ಜೀವನದಲ್ಲೂ ನಾನು ಹಲವು ಬಾರಿ ಡ್ರಗ್ ಸ್ಕ್ಯಾಂಡಲ್‌ಗಳ ಬಗ್ಗೆ ಧ್ವನಿ ಎತ್ತಿರುವೆ. ಹೀಗಾಗಿ ಈ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಬಾಲ್ಯದಿಂದಲ್ಲೂ ನಾನು ಪೊಲೀಸರ್ ಆಗಬೇಕು ಅಂತ ಕನಸು ಕಟ್ಟಿದ್ದೆ. ಇದೆಲ್ಲವೂ ನನಗೆ ಕನಸು' ಎಂದು ಪ್ರಶಾಂತ್ ಮಾತನಾಡಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡುತ್ತ ತಮ್ಮ ಪಾತ್ರದ ಬಗ್ಗೆ ಮತ್ತೊಂದು ಸುಳಿವು ಬಿಟ್ಟು ಕೊಟ್ಟಿದ್ದಾರೆ. 'ಈ ಸಿನಿಮಾದಲ್ಲಿ ನನಗೆ ಎರಡು ಶೇಡ್‌ಗಳಿದೆ. ಸಿನಿಮಾದಲ್ಲಿ ನನ್ನ ಮಗಳು ಕೂಡ ಈ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾಳೆ ಹೀಗಾಗಿ ಮಾನಸಿಕವಾಗಿ ನಾನು ಕುಗ್ಗುವೆ ಅದೇ ಸಮಯಕ್ಕೆ ನನ್ನ ಕರ್ತವ್ಯವೂ ಮಾಡಬೇಕು. ಈ ಎರಡು ವಿಚಾರಗಳನ್ನು ನಿಭಾಯಿಸುವುದೇ ದೊಡ್ಡ ಸವಾಲು. ಕ್ಲೈಮ್ಯಾಕ್ಸ್‌ನಲ್ಲಿ ನನ್ನ ಪಾತ್ರದಿಂದ ಒಂದು ಟ್ವಿಸ್ಟ್ ಸಿಗಲಿದೆ' ಎಂದು ಪ್ರಶಾಂತ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳಾದ ಅಶೋಕ್ ಕುಮಾರ್ ಮತ್ತು ಎಸ್ ಕೆ ಉಮೇಶ್ ಅವರನ್ನು ಸ್ಫೂರ್ತಿಯಾಗಿ ಈ ಪಾತ್ರವನ್ನು ಒಪ್ಪಿಕೊಂಡಿರುವುದು ಪ್ರಶಾಂತ್ ಹಂಚಿಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಬಗ್ಗೆ ಹೇಳುವುದಾದರೆ ' ಬಿಗ್ ಬಾಸ್ ಹಿಸ್ಟರಿಯಲ್ಲಿ ಎರಡು ಸಲ ಅಂದ್ರೆ ಬ್ಯಾಕ್ ಟು ಬ್ಯಾಕ್ ಬಿಗ್ ಬಾಸ್ ಪ್ರವೇಶಿಸಿರುವ ಮೊದಲ ವ್ಯಕ್ತಿ ನಾನು' ಎಂದಿದ್ದಾರೆ.
BBK9 ಬಿಬಿ ಮನೆಯ ವಾಯ್ಸ್ ಬಾಕ್ಸ್ ಪ್ರಶಾಂತ್ ಸಂಬರಗಿ ಔಟ್
ತಾತ್ಕಾಲಿಕ ರಿಲೀಫ್?
ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶ್ರುತಿ ಹರಿಹರನ್ ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಮಿ ಟೂ ವಿವಾದದ ವೇಳೆ ಪ್ರಶಾಂತ್ ಸಂಬರಗಿ ವಿರುದ್ಧ ಅವಹೇಳನಕಾರಿ ಹೇಳಿಕೆ, ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಶ್ರುತಿ ಹರಿಹರನ್ ದೂರು ನೀಡಿದ್ದರು. ಈ ಪ್ರಕರಣವನ್ನು ಪ್ರಶ್ನಿಸಿ ಪ್ರಶಾಂತ್ ಸಂಬರಗಿ ಅವರು ಹೈಕೋರ್ಟ್ ಅರ್ಜಿ ಅಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ವಿಚಾರಣೆಯನ್ನು 2023ರ ಫೆಬ್ರುವರಿ 1ಕ್ಕೆ ಹೈಕೋರ್ಟ್ ಮುಂದೂಡಿದೆ.
'ವಿಸ್ಮಯ' ಸಿನಿಮಾ ಶೂಟಿಂಗ್ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಲಾಗಿದೆ ಎಂದು ಖ್ಯಾತ ನಟ ಅರ್ಜನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಪರವಾಗಿ ಅವರ ಆಪ್ತ ಪ್ರಶಾಂತ್ ಸಂಬರಗಿ ನಾನಾ ಹೇಳಿಕೆಗಳನ್ನು ನೀಡಿದ್ದರು. ಮಾಧ್ಯಮಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡುವಾಗ ಪ್ರಶಾಂತ್ ಸಂಬರಗಿ ತಮ್ಮ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಪ್ರಶಾಂತ್ ಸಂಬರಗಿಗೆ ಸಮನ್ಸ್ ನೀಡಿತ್ತು.ಈ ಪ್ರಕರಣವನ್ನು ರದ್ದು ಕೋರಿ ಪ್ರಶಾಂತ್ ಸಂಬರಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸಂಬರಗಿ ವಿರುದ್ಧ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿದೆ. ಅಲ್ಲದೇ ಈ ಬಗ್ಗೆ ಹೈಕೋರ್ಟ್, ನಟಿ ಶ್ರುತಿ ಹರಿಹರನ್ಗೂ ನೋಟಿಸ್ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.