
ಫೆಬ್ರವರಿ 20ರಂದು ನಟಿ ಭೂಮಿ ಶೆಟ್ಟಿಯ ಹುಟ್ಟುಹಬ್ಬ. ಈ ದಿನ ಬಿಳಿ ವರ್ಲಿ ಡಿಸೈನ್ ಹೊಂದಿರುವ ಕಪ್ಪು ಸೀರೆ ಉಟ್ಟಿರುವ ಭೂಮಿ ಅದಕ್ಕೆ ಕೆಂಪು ಸ್ಲೀವ್‌ಲೆಸ್ ಬ್ಲೌಸ್ ಮ್ಯಾಚ್ ಮಾಡಿದ್ದಾರೆ. ತಲೆಗೆ ಕಿರೀಟ ಧರಿಸಿ ಕೇಕ್ ಕಟ್ ಮಾಡುತ್ತಿರುವ ಕುಂದಾಪುರ ಬೆಡಗಿಯ ಬರ್ತ್‌ಡೇಯನ್ನು ಆಕೆಯ ಫ್ಯಾನ್‌ಗಳೇ ಆಚರಿಸಿದ್ದು, ಭೂಮಿಯ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇದೇ ಉತ್ಸಾಹದಲ್ಲಿ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡಿರುವ ಭೂಮಿ, ಅಭಿಮಾನಿಗಳಿಗಾಗಿ ಕೆಲ ಸಾಲುಗಳನ್ನು ಬರೆದು ತಮ್ಮ ಕೃತಜ್ಞತೆ ಹೇಳಿದ್ದಾರೆ.
'ಜನ್ಮದಿನದ ವೈಬ್ಸ್ ಜೋರಾಗಿದೆ. ನನ್ನ ಅದ್ಭುತ ಫ್ಯಾನ್ಸ್‌ಗೆ ಧನ್ಯವಾದಗಳು! ಅವರ ಉತ್ಸಾಹದ ಮಟ್ಟ ಎಷ್ಟು ಹೆಚ್ಚಿತ್ತೆಂದರೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವಿಶೇಷವಾಗಿ ಆಚರಿಸಲಾಯಿತು. ನಿಜವಾದ ಪ್ರೀತಿಯನ್ನು ತೋರಿಸುವ ಜನರ ಗುಂಪೇ ಇರುವಾಗ ನಮ್ಮನ್ನು ಗೌರವಿಸದವರಿಂದ ಏಕೆ ಅನುಮೋದನೆ ಪಡೆಯಬೇಕು? ಎಂಬ ಯೋಚನೆ ನನ್ನನ್ನು ತಟ್ಟಿತು. ನನ್ನ ಹುಟ್ಟುಹಬ್ಬವನ್ನು ನಾನು ಎಂದೆಂದಿಗೂ ನೆನಪಿಡುವ ಆಚರಣೆಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದ. ಚೀರ್ಸ್ ಮತ್ತು ಕೇಕ್ ಜೊತೆಗೆ ಯಾವುದೇ ನಿರೀಕ್ಷೆ ಇಲ್ಲದೆ ನಮ್ಮನ್ನು ಬೆಂಬಲಿಸುವ ಮತ್ತು ಗೌರವಿಸುವವರಲ್ಲಿ ನಿಜವಾದ ಮೌಲ್ಯವಿದೆ ಎಂದು ನಾನು ಅರಿತುಕೊಂಡೆ. ಈ ಅಭಿಮಾನಿಗಳು ನನ್ನನ್ನು ರಾಕ್‌ಸ್ಟಾರ್ ಭಾವನೆ ಬರಿಸುವಂತೆ ಪಾರ್ಟಿ ನೀಡಿದರು. ನಿಮ್ಮೆಲ್ಲ ಪ್ರೀತಿಗಾಗಿ ಕೃತಜ್ಞತೆ. 🌟🎈Iloveyousso much' ಎಂದು ಭೂಮಿ ಬರೆದಿದ್ದಾರೆ.
ಅಭಿನಯದ ವಿಷಯಕ್ಕೆ ಬಂದರೆ, ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರ ಸಿದ್ಧವಾಗಿದೆ. ಇದರಲ್ಲಿ ಕುಸ್ತಿಪಟು ಪಾತ್ರವನ್ನ ನಿರ್ವಹಿಸಿದ್ದು, ಇದಕ್ಕಾಗಿ ಆಕೆ ನಿಜವಾಗಿ ಕುಸ್ತಿ ಕಲಿತಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಭೂಮಿ, 'ಶರತಲು ವರ್ತಿಸ್ತಾಯಿ' ಅನ್ನೋ ಚಿತ್ರದಲ್ಲಿ ನಟಿಸಿದ್ದು, ಇದು ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.