Bhavana Ramanna Interview: ನಾನು 100% ಮಹಿಳೆನೇ ಡೌಟೇ ಬೇಡ ಎನ್ನುತ್ತಲೇ ಮದ್ವೆ ಬಗ್ಗೆ ಭಾವನಾ ಹೇಳಿದ್ದೇನು?

Published : Jul 14, 2025, 05:38 PM ISTUpdated : Jul 15, 2025, 06:31 PM IST
Bhavana about marriage

ಸಾರಾಂಶ

ಮಕ್ಕಳಾದ ಮೇಲೆ ಮುಂದೆ ಅವಕಾಶ ಸಿಕ್ಕರೆ ನಟಿ ಭಾವನಾ ಮದ್ವೆಯಾಗ್ತಾರಾ? ಈ ಬಗ್ಗೆ ಸುವರ್ಣ ನ್ಯೂಸ್​ ಸಂದರ್ಶನದಲದ್ಲಿ ನಟಿ ಓಪನ್​ ಆಗಿಯೇ ಹೇಳಿದ್ದೇನು? 

ಸದ್ಯ ಎಲ್ಲೆಲ್ಲೂ ನಟಿ ಭಾವನಾರದ್ದೇ ಚರ್ಚೆ. ಅವಿವಾಹಿತೆಯಾಗಿರೋ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ. ಹಾಗೆಂದು ಈ ರೀತಿ ಮಗುವನ್ನು ಪಡೆದುಕೊಳ್ಳುತ್ತಿರುವವರು ಭಾವನಾ ಮೊದಲೇನಲ್ಲ. ಇದಾಗಲೇ ಕೆಲವು ನಟಿಯರು ಸೇರಿದಂತೆ ಹಲವು ಸಾಮಾನ್ಯ ಜನರೂ ಇದೇ ರೀತಿ ಮಗುವನ್ನು ಪಡೆದುಕೊಂಡಿದ್ದಾರೆ. ಆದರೆ ಭಾವನಾ ಸುದ್ದಿ ಮಾತ್ರ ಸಕತ್​ ಸದ್ದು ಮಾಡುತ್ತಿದೆ. ಈ ಬಗ್ಗೆ ಇದಾಗಲೇ ನಟಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಮಾಡಿದ್ಯಾಕೆ ಎನ್ನುವ ಬಗ್ಗೆಯೂ ಹೇಳಿದ್ದಾರೆ.

40 ವರ್ಷ ವಯಸ್ಸಿನ ಭಾವನಾ ಮದುವೆಯ ಬಗ್ಗೆ ತಾತ್ಸಾರ ಏಕೆ ಹೊಂದಿದ್ದಾರೆ ಎನ್ನುವ ಪ್ರಶ್ನೆಯೂ ಎದುರಾಗಿದ್ದು, ಅದಕ್ಕೂ ನಟಿ ಇದಾಗಲೇ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೆ ಮುಂದೊಮ್ಮೆ ಮಕ್ಕಳಾದ ಮೇಲೆ ಮದುವೆಯಾಗುವ ಅವಕಾಶ ಸಿಕ್ಕರೆ ನಟಿ ಮದ್ವೆ ಆಗ್ತಾರಾ? ಈ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಸುವರ್ಣ ಪಾಡ್​ಕಾಸ್ಟ್​ನಲ್ಲಿ ಕೇಳಿದ ಪ್ರಶ್ನೆಗೆ ನಟಿ ಈ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ. ನಟಿ ಭಾವನಾ ಹೇಳಿದ್ದೇನು ನೋಡಿ.

ಸಂಗಾತಿಯಾಗಿ ಯಾರಾದ್ರೂ ಬರ್ತಾರೆ ಎಂದರೆ ನಿಮ್ಮ ಆಯ್ಕೆ ಏನಿರುತ್ತೆ ಎನ್ನುವ ಪ್ರಶ್ನೆಗೆ ನಟಿ, ಅದು ಪುರುಷರೇ ಮತ್ತೆ ಎಂದು ನಕ್ಕಿದ್ದಾರೆ. ಕೆಲವರಿಗೆ ನನ್ನ ಈ ರೀತಿಯ ಗರ್ಭಧಾರಣೆ ನೋಡಿ ಇವಳು ಯಾಕೆ ಹೀಗೆ ಎಂದು ಎನ್ನಿಸಿರಬಹುದು. ಅವರಿಗೆಲ್ಲರಿಗೂ ನಾನು ಹೇಳೋದು ಇಷ್ಟೇ. ನಾನು 100 ಪರ್ಸೆಂಟ್​ ಮಹಿಳೆಯನೇ. ಇದರಲ್ಲಿ ಸಂದೇಹ ಬೇಡ ಎಂದು ಜೋಕ್​ ಮಾಡಿದ್ದಾರೆ. ನನಗೆ ಇಲ್ಲಿಯವರೆಗೂ ನಾನು ಅದನ್ನು ಮಿಸ್​ ಮಾಡಿಕೊಂಡಿದ್ದೇನೆ ಎಂದು ಅನ್ನಿಸ್ತಾ ಇಲ್ಲ. ನಾನು ನನ್ನ ಅಮ್ಮನನ್ನು ಕಳೆದುಕೊಂಡಾಗ, ನನ್ನ ಅಪ್ಪನೇ ನನಗೆ ಅಮ್ಮನೂ ಆಗಿದ್ದರು, ಅಣ್ಣನೂ ಆದರು. ಅವರೇ ನನಗೆ ಎಲ್ಲಾ ಪ್ರೀತಿ ಕೊಟ್ಟಿದ್ದಾರೆ. ಆದ್ದರಿಂದ ನನಗೆ ಏನೂ ಬೇಕು ಎಂದು ಎನ್ನಿಸುತ್ತಿಲ್ಲ ಎಂದು ನಟಿ ಹೇಳಿದ್ದಾರೆ.

ಇದೇ ವೇಳೆ, ಅವಳಿ ಮಕ್ಕಳು ಬಂದ ಮೇಲೆ ನನ್ನ ಜೀವನ ಸಂಪೂರ್ಣ ಆಗುತ್ತದೆ ಎಂದು ನನಗೆ ಅನ್ನಿಸುತ್ತದೆ. ನನಗೆ ಸಂಗಾತಿ ಬೇಕೇ ಬೇಕು ಎನ್ನುವ ಮನಸ್ಥಿತಿ ಕೂಡ ಇಲ್ಲ. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳಲು ಒಳ್ಳೆಯ ಸ್ನೇಹಿತರು ಇದ್ದಾರೆ. ಅದಕ್ಕಾಗಿ ಇವೆಲ್ಲಾ ಬೇಕು ಎನ್ನಿಸುವುದಿಲ್ಲ ಎನ್ನುತ್ತಲೇ ಒಂದು ವೇಳೆ ಏನಾದರೂ ಮುಂದಿನ ದಿನಗಳಲ್ಲಿ ಹಾಗೆ ಆದರೆ ಆಗಲೂಬಹುದು ಎನ್ನುವ ಮೂಲಕ ಮದುವೆಯೇ ಆಗಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಮದುವೆ ಆಗುತ್ತೇನೆ ಎಂದಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ