ಅಕ್ಕ ಸಮ್ಮೇಳನ 2026ರಲ್ಲಿ ‘ಸಿನಿಗನ್ನಡ ಚಲನಚಿತ್ರೋತ್ಸವ’: ಅತ್ಯುತ್ತಮ ಕನ್ನಡ ಚಿತ್ರಕ್ಕೆ ₹1 ಲಕ್ಷ ಬಹುಮಾನ

Published : Jul 17, 2026, 05:06 PM IST
AKKA Convention 2026

ಸಾರಾಂಶ

Cinegannada Film Festival: ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 25ನೇ ವರ್ಷದ ‘ಅಕ್ಕ’ ಸಮ್ಮೇಳನದಲ್ಲಿ ಈ ಬಾರಿ ‘ಸಿನಿಗನ್ನಡ ಚಲನಚಿತ್ರೋತ್ಸವ 2026’ ವನ್ನು ಆಯೋಜಿಸಲಾಗಿದೆ.

ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 25ನೇ ವರ್ಷದ ‘ಅಕ್ಕ’ ಸಮ್ಮೇಳನದಲ್ಲಿ ಈ ಬಾರಿ ‘ಸಿನಿಗನ್ನಡ ಚಲನಚಿತ್ರೋತ್ಸವ 2026’ ವನ್ನು ಆಯೋಜಿಸಲಾಗಿದೆ. ಇದಕ್ಕೋಸ್ಕರ ಸಿನಿಮಾ ಸ್ಪರ್ಧೆಯನ್ನೂ ನಡೆಸಲಾಗುತ್ತಿದೆ. ಈ ಬಗ್ಗೆ ವಿವರ ನೀಡಿದ ಈ ಉತ್ಸವದ ನಿರ್ದೇಶಕ ಪಿ. ಶೇಷಾದ್ರಿ, ‘ಜನವರಿ 1,‌ 2025ರಿಂದ ಡಿಸೆಂಬರ್ 31, 2025ರ ಒಳಗೆ ತಯಾರಾದ, ಸೆನ್ಸಾರ್‌ ಪ್ರಕ್ರಿಯೆ ಮುಗಿಸಿದ ಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸುಮಾರು 150 ಸಿನಿಮಾ ಸ್ಪರ್ಧೆಗೆ ಬರುವ ನಿರೀಕ್ಷೆ ಇದೆ.

ಅವುಗಳಲ್ಲಿ 10 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇವುಗಳಲ್ಲಿ ಅತ್ಯುತ್ತಮ ಎನಿಸುವ ಮೂರು ಚಿತ್ರಗಳನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಿ, ಕ್ರಮವಾಗಿ 1 ಲಕ್ಷ, 50 ಸಾವಿರ ಹಾಗೂ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲೇ ನಡೆಯುತ್ತದೆ. ಆಸಕ್ತರು https://cinegannadafilmfest.org/ ನಲ್ಲಿ ಅರ್ಜಿ ತುಂಬಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು’ ಎಂದರು.

ಕನ್ನಡ ಚಿತ್ರಗಳಿಗೆ ಮಾನ್ಯತೆ ಸಿಗುತ್ತಿಲ್ಲ

‘ಅಮೆರಿಕಾದಲ್ಲಿ ತಮಿಳು, ತೆಲುಗು ಸಿನಿಮಾಗಳಿಗೆ ಸಿಗುವ ಮಾನ್ಯತೆ ಕನ್ನಡ ಚಿತ್ರಗಳಿಗೆ ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಅಮೆರಿ ಕನ್ನಡಿಗರೆಲ್ಲ ಒಟ್ಟಾಗುವ ಅಕ್ಕ ಸಮ್ಮೇಳನದಲ್ಲಿ ಈ ಸಿನಿಮೋತ್ಸವ ಆಯೋಜಿಸಲಾಗಿದ್ದು, ಕನ್ನಡ ಚಿತ್ರಗಳಿಗೆ ವಿಶ್ವಮಟ್ಟದ ಮಾನ್ಯತೆ ದೊರೆಕಿಸಿಕೊಡುವುದು ಇದರ ಉದ್ದೇಶ’ ಎಂದು ಈ ಸಿನಿಮೋತ್ಸವದ ರೂವಾರಿ ಗೌರೀಶ್‌ ಅಕ್ಕಿ ಹೇಳಿದರು.

ಇನ್ನೊಬ್ಬ ಆಯೋಜಕರಾದ ವನ್ಯ ಸಿನಿಮಾ ನಿರ್ದೇಶಕ ದೇವೇಂದ್ರ ಬಡಿಗೇರ್‌, ‘ಆಗಸ್ಟ್ ಮೊದಲ ವಾರದಿಂದ ಚಿತ್ರಗಳನ್ನು ನೋಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲೇ ಸಮಾರಂಭ ಆಯೋಜಿಸಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಘೋಷಿಸಲಾಗುವುದು’ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಂಭಾವನೆಗಳು ಭಾರವಾಗುತ್ತಿವೆ, ಕಷ್ಟಗಳು ಹೆಚ್ಚಾಗಿವೆ: ನಿರ್ದೇಶಕ ಕೆ.ಎಂ. ಚೈತನ್ಯ ಹೇಳಿದ್ರು ಕಹಿ ಸತ್ಯ
Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ