
ಒಂದು ಕಾಲದ ಸ್ಟಾರ್ ನಟಿ, ಇಂದಿಗೂ ಗ್ಲಾಮರ್ ಉಳಿಸಿಕೊಂಡಿರುವ ಸುಮನ್ ರಂಗನಾಥ್ (Suman Ranganath) ಅವರು ಸಂದರ್ಶನವೊಂದರಲ್ಲಿ ದಿವಂಗತ ನಟ-ನಿರ್ದೇಶಕ ಶಂಕರ್‌ನಾಗ್ (Shankar Nag) ಬಗ್ಗೆ ಮಾತನ್ನಾಡಿದ್ದಾರೆ. ಬಹುಭಾಷಾ ನಟಿ ಸುಮನ್ ರಂಗನಾಥ್ ಅವರು ಶಂಖರ್‌ನಾಗ್ ಜೊತೆ 'ಸಿಬಿಐ ಶಂಕರ್' ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನೆಮಾತಾದವರು. ಕನ್ನಡದಲ್ಲಿ ಮಾತ್ರವಲ್ಲದೇ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಬೋಜ್‌ಪುರಿ ಭಾಷೆಗಳ ಚಿತ್ರದಲ್ಲಿ ಸುಮನ್ ನಟಿಸಿದ್ದಾರೆ.
ಶಂಕರ್ ನಾಗ್ ಬಗ್ಗೆ ಮಾತನ್ನಾಡುತ್ತ ನಟಿ ಸುಮನ್ ರಂಗನಾಥ್ 'ನಾನು ಆವಾಗ ತುಂಬಾ ಯಂಗ್.. ನನಗೆ ಹೇಳಿಕೊಟ್ಟಷ್ಟು ಮಾತ್ರವೇ ಮಾಡುವ ವಯಸ್ಸು ಅದಾಗಿತ್ತು. ಸಿಬಿಐ ಶಂಖರ್ ಚಿತ್ರಕ್ಕಿಂತ ಮೊದಲು ನಾನು ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ, ಸಿಬಿಐ ಶಂಕರ್ ಚಿತ್ರ ನನಗೆ ತುಂಬಾ ಹೆಸರು ತಂದು ಕೊಟ್ಟಿದೆ. ಕನ್ನಡದ ಸಿನಿಪ್ರೇಕ್ಷಕರು ಈಗಲೂ ನನ್ನನ್ನು ಸಿಬಿಐ ಶಂಕರ್ ಚಿತ್ರದ ಮೂಲಕವೇ ಗುರುತಿಸುತ್ತಾರೆ.
ಶಂಕರ್ ನಾಗ್ ಸಾವು ಪೂರ್ವ ನಿರ್ಧಾರಿತ, ಅವ್ರು ಮುನ್ಸೂಚನೆ ಕೊಟ್ಟಿದ್ದರು: ಅನಂತ್ ನಾಗ್!
ಶಂಕರ್ ನಾಗ್ ಸರ್ ಯಾವತ್ತೂ ಏನಾದ್ರೂ ಕೆಲಸ ಮಾಡ್ತಾನೇ ಇರ್ತಾ ಇದ್ರು. ನನಗಿನ್ನೂ ನೆನಪಿದೆ, ಅವರು ಶೂಟಿಂಗ್ ಸ್ಥಳದಲ್ಲಿ ಇದ್ದಾಗ ಸಿಕ್ಕ ಒಂದು ನಿಮಿಷವನ್ನೂ ವೇಸ್ಟ್ ಮಾಡುತ್ತಿರಲಿಲ್ಲ. ಶಾಟ್‌ಗೆ ಎಲ್ಲವೂ ಸಿದ್ಧವಾಗಿಲ್ಲ ಅನ್ನೋವಾಗ ಯಾವುದೋ ಒಂದು ಪುಸ್ತಕವನ್ನು ಅವರು ಓದುತ್ತಿದ್ದರು. ಅಷ್ಟೇ ಅಲ್ಲ, ಶೂಟಿಂಗ್ ಸೆಟ್‌ನಲ್ಲಿ ಎಲ್ಲರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಮಹಿಳೆಯರಿಗೆ ಸರಿಯಾಗಿ ಗೌರವ ಕೊಡುತ್ತಿದ್ದರು. ಅವರ ಕ್ರಿಯಾಶೀಲತೆ ಈಗ ನನಗೆ ಅಚ್ಚರಿ ಹುಟ್ಟಿಸುತ್ತದೆ.
ಮಾನವೀಯತೆ ಕೂಡ ಶಂಕರ್ ನಾಗ್ ಅವರಲ್ಲಿ ಇತ್ತು. ಎಲ್ಲರನ್ನೂ ಮಾತನಾಡಿಸುತ್ತಿದ್ದರೂ ಕೂಡ ಕೆಲಸದ ವಿಷಯದಲ್ಲಿ ಅವರು ತುಂಬಾ ಇನ್‌ವಾಲ್ವ್‌ಮೆಂಟ್ ಇಟ್ಟುಕೊಂಡಿದ್ದರು. ಆದ್ರೆ, ಅವರ ಬಗ್ಗೆ ಹೆಚ್ಚು ನಂಗೆ ಗೊತ್ತಿಲ್ಲ. ಕಾರಣ, ನಾನು ಅವರೊಟ್ಟಿಗೆ ಕೆಲಸ ಮಾಡಿದಾಗ ನನಗಿನ್ನೂ ಹದಿಹರೆಯ. ಒಬ್ಬರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಾಗಲೀ ಮೆಚ್ಯುರಿಟಿಯಾಗಲೀ ನನಗೆ ಇರಲೇ ಇಲ್ಲ. ಹೀಗಾಗಿ ಶಂಕರ್ ನಾಗ್ ಅವರ ವ್ಯಕ್ತಿತ್ವದ ಪರಿಪೂರ್ಣ ಅರಿವು ನನಗೆ ಆಗಲೇ ಇಲ್ಲ.
ಶ್ರೀಲಂಕಾದ ಕ್ಯಾಸಿನೋದಲ್ಲಿ ಡಾನ್ಸ್, ನಿವೇದಿತಾ ಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್: ಯಾಕೆ ಹೀಗೆಲ್ಲಾ..?!
ನಾನು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದೇನೆ. ನನಗೆ ನಾನು ಭಾಷೆಯ ಗಡಿ ಹಾಕಿಕೊಂಡಿಲ್ಲ. ಕರೆದಾಗ ಎಲ್ಲಾ ಕಡೆ ಕೆಲಸ ಮಾಡಿದ್ದೇನೆ. ಆದರೆ, ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಹೀಗಾಗಿ ನನಗೆ ಬೆಂಗಳೂರು ತುಂಬಾ ಇಷ್ಟ. ಇದು ನನ್ನ ಮನೆ, ಆದರೆ ಕೆಲಸ ಎಲ್ಲಾದ್ರೂ ಒಕೆ, ಮಾಡೋದಕ್ಕೆ ನಾನು ರೆಡಿ' ಎಂದಿದ್ದಾರೆ ನಟಿ ಸುಮನ್ ರಂಗನಾಥ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.