ಬ್ಯಾಂಗ್ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಗ್ಯಾಂಗ್‌ಸ್ಟರ್ | ಮಲಯಾಳಂ ಚಿತ್ರರಂಗಕ್ಕೂ ಶಾನ್ವಿ ಪ್ರವೇಶ
ಶಾನ್ವಿ ಶ್ರೀವಾಸ್ತವ ಗ್ಯಾಂಗ್‌ಸ್ಟರ್ ಆಗಲು ಹೊರಟಿದ್ದಾರೆ. ಅವರನ್ನು ಹೀಗೆ ಲೇಡಿ ಗ್ಯಾಂಗ್‌ಸ್ಟರ್ ರೂಪದಲ್ಲಿ ತೋರಿಸಲು ಹೊರಟಿರುವುದು ‘ಬ್ಯಾಂಗ್’ ಹೆಸರಿನ ಸಿನಿಮಾ. ಗಣೇಶ್ ಪರುಶುರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಮೂವರು ಹೊಸ ಹುಡುಗರು ನಟಿಸುತ್ತಿದ್ದಾರೆ.
ಇಲ್ಲಿ ಸಂಗೀತ ನಿರ್ದೇಶಕ ರಘುದೀಕ್ಷಿತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂವರು ಹುಡುಗರು, ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮಧ್ಯೆ ಸಾಗುವ ಕತೆಯನ್ನು ಈ ಸಿನಿಮಾ ಹೊಂದಿದೆ.
ಶಾನ್ವಿಗೆ ರಕ್ಷಿತ್ ಶುಭಾಶಯ.. 'ಸೂಪರ್ ಜೋಡಿ ಮದುವೆ ಆಗು ಗುರು'!
ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನಟಿ ಶಾನ್ವಿ ಶ್ರೀವಾಸ್ತವ ಸಿಕ್ಕಾಪಟ್ಟೆಥ್ರಿಲ್ಲಾಗಿದ್ದಾರೆ. ‘ನಾನು ಇಲ್ಲಿಯವರೆಗೂ ಗ್ಲಾಮರ್, ರೆಗ್ಯುಲರ್ ನಾಯಕಿ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೇನೆ.
ಆದರೆ, ‘ಬ್ಯಾಂಗ್’ ಚಿತ್ರದ ಮೂಲಕ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದೇನೆ. ನಟಿಯರು ಗ್ಯಾಂಗ್‌ಸ್ಟರ್‌ಗಳಾದರೆ ನೋಡಲು ತುಂಬಾ ಚೆನ್ನಾಗಿರುತ್ತದೆ. ಅದೇ ಕುತೂಹಲದಲ್ಲಿ ಒಪ್ಪಿಕೊಂಡಿರುವ ಸಿನಿಮಾ ಇದು. ಫೆಬ್ರವರಿ ಮೊದಲ ವಾರದಿಂದ ನನ್ನ ಪಾತ್ರದ ಚಿತ್ರೀಕರಣ ಶುರುವಾಗಲಿದೆ’ ಎನ್ನುತ್ತಾರೆ ನಟಿ ಶಾನ್ವಿ ಶ್ರೀವಾಸ್ತವ.
ಶಾನ್ವಿಯ ಮತ್ತೊಂದು 'ಬೋಲ್ಡ್' ಅವತಾರ ಕಂಡು ಬೆಚ್ಚಿಬೀಳಬೇಡಿ! ಪೋಟೋ ಒಳಗಿದೆ
ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಶೂಟಿಂಗ್ ಮುಗಿಸಿರುವ ಶಾನ್ವಿ, ‘ಬ್ಯಾಂಗ್’ ಚಿತ್ರದ ಜತೆಗೆ ಒಂದು ಮಲಯಾಳಂ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ 18 ವರ್ಷದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿನ ಪಾತ್ರ ಹಾಗೂ ಹೆಸರು ಬಿಟ್ಟು ಕೊಡದ ಶಾನ್ವಿ, ‘ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಹೋಗುತ್ತಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.