ಟೆಂಪಲ್‌ ಸ್ಟೋನ್‌ ಅಷ್ಟಮಾಂಗಲ್ಯದಲ್ಲಿ ಕಂಗೊಳಿಸ್ತಿರೋ ಮಾಳವಿಕಾ: ಡಿಸೈನ್‌ಗೆ ಆಭರಣಪ್ರಿಯರು ಫಿದಾ

By Suvarna News  |  First Published Sep 25, 2023, 2:02 PM IST

ನಟಿ ಮಾಳವಿಕಾ ಅವಿನಾಶ್‌ ಅವರು ಟೆಂಪಲ್‌ ಸ್ಟೋನ್‌ನಿಂದ ತಯಾರಿಸಿದ ಅಷ್ಟಮಾಂಗಲ್ಯ ಆಭರಣವನ್ನು ಧರಿಸಿದ್ದು, ಇದರ ಸೊಬಗಿಗೆ ಆಭರಣ ಪ್ರಿಯರು ಫಿದಾ ಆಗಿದ್ದಾರೆ. 
 


ಮಾನವನ ಹುಟ್ಟಿನಿಂದಲೇ ಆಭರಣಕ್ಕೂ ಮಹತ್ವ ದೊರೆತಿದೆ. ಕಾಲ ಬದಲಾದಂತೆ ಆಭರಣಗಳ ಕಲಾಕೃತಿಯಲ್ಲಿ ಭಿನ್ನತೆ ಕಂಡುಬರುತ್ತಿದ್ದರೂ, ಸಹಸ್ರಾರು ವರ್ಷಗಳ ಹಿಂದೆಯೇ ಆಗಿನ ಕಾಲಕ್ಕೆ ತಕ್ಕಂತ ಆಭರಣಗಳು ಚಾಲ್ತಿಯಲ್ಲಿ ಇರುವುದು ಕಂಡುಬರುತ್ತದೆ. ದೇಗುಲಗಳಲ್ಲಿರುವ ಶಿಲ್ಪಗಳನ್ನು  ನೋಡಿದರೆ ಆಭರಣ ಎಷ್ಟು ಪುರಾತನವಾದದ್ದು ಎನ್ನುವುದನ್ನು ತಿಳಿಯಬಹುದು. ದೇವಾಲಯದ ವಾಸ್ತು ಶಿಲ್ಪ ಮತ್ತು ದೇವರ ಮೂರ್ತಿಗಳಿಂದ ಕೂಡಿರುವ ಆಭರಣಗಳು ಭಾರತದ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಕರಕುಶಲತೆಯನ್ನು ಬಿಂಬಿಸುತ್ತದೆ. ದಕ್ಷಿಣ ಭಾರತದ ಮೂಲ ಕಲಾಕೃತಿಯಿಂದ ಕೂಡಿರುವ ಈ ಶೈಲಿಯ ಆಭರಣಗಳು ಅಲಂಕಾರಕ್ಕೆ ಅತ್ಯಂತ ಆಕರ್ಷಣೆ ಹಾಗೂ ವಿಶೇಷತೆಯನ್ನು ನೀಡುತ್ತದೆ. 

ಆಭರಣ ಎಂದಾಕ್ಷಣ ಇದು ಮಹಿಳೆಯರಿಗೆ ಪ್ರಿಯ ಎನ್ನುವ ಭಾವನೆ ಇದೆ. ಆದರೆ ನಮ್ಮ ಹಿಂದಿನ ಜನಾಂಗವನ್ನು ಇಲ್ಲವೇ ಕೆಲವೊಂದು ಬುಡಕಟ್ಟು ಜನತೆಯನ್ನು ನೋಡಿದರೆ ಆಭರಣ ಕೇವಲ ಸ್ತ್ರೀಯರಿಗೆ ಅಲ್ಲ, ಪುರುಷರಿಗೂ ಹಿಂದೆ ಆಭರಣಗಳು ಎಷ್ಟು ಪ್ರಾಮುಖ್ಯವಾಗಿದ್ದವು ಎನ್ನುವುದನ್ನು ತೋರಿಸುತ್ತದೆ. ಇದೀಗ ಫ್ಯಾಷನ್‌ ಹೆಸರಿನಲ್ಲಿ ಆಭರಣಗಳು ತಮ್ಮದೇ ಆದ ವಿಶೇಷತೆಯನ್ನು ಪಡೆಯುತ್ತಿವೆ. ವಿಭಿನ್ನ ಡಿಸೈನ್‌ಗಳೂ ಲಭ್ಯವಿವೆ. ಹೊಸ ಹೊಸ ಹೆಸರುಗಳಲ್ಲಿ ವಿಭಿನ್ನ ಕಲಾಕೃತಿಗಳ ಆಭರಗಳನ್ನು ನಾವು ನೋಡಬಹುದು. ಇವುಗಳಲ್ಲಿ ಒಂದು ಟೆಂಪಲ್‌ ಆಭರಣಗಳು. 

Latest Videos

undefined

ಸೋಪ್ ಪ್ಯಾಕ್ ಮೇಲೆ ಮಹಿಳೆ ಫೋಟೋ: ಹೆಣ್ಣು ಮಕ್ಕಳು ಮಾತ್ರ ಸ್ನಾನ ಮಾಡೋದಾ?

ಹೌದು. ಹೆಸರೇ ಸೂಚಿಸುವಂತೆ ಇದು ದೇವಾಲಯದ ಆಭರಣ (Temple Ornaments). ಶ್ರೀಮಂತ ಹಾಗೂ ಸಾಂಪ್ರದಾಯಿಕ ಇತಿಹಾಸವನ್ನು ಬಿಂಬಿಸುವ ಆಭರಣ ಇದಾಗಿದೆ.  ದೇವರ ಮೂರ್ತಿ ಹಾಗೂ ಧಾರ್ಮಿಕ ಚಿಹ್ನೆಗಳಿಂದ ಕೂಡಿರುವ ಅಪೂರ್ವ ಆಭರಣ ಇದಾಗಿದ್ದು, ನಮ್ಮ ಸನಾತನ ಸಂಸ್ಕೃತಿಯನ್ನೂ ಇದು ಬಿಂಬಿಸುತ್ತದೆ. ಇದರಲ್ಲಿ ದೇವಾಲಯದ ಕೆತ್ತನೆ ಕೂಡ ಇರುವುದು ಬಹು ವಿಶೇಷ. ಸಂಕೀರ್ಣವಾದ ಕರಕುಶಲ ವಿನ್ಯಾಸಗಳು, ಪುನರಾವರ್ತಿತ ಚಿಹ್ನೆಗಳು, ನವಿಲು, ಹೂವು ಸೇರಿದಂತೆ ಇನ್ನಿತರ ಪ್ರಕೃತಿ ಆಧಾರಿತ ಚಿತ್ರಣಗಳನ್ನು ಇವು ಒಳೊಂಡಿರುತ್ತವೆ. ಆದ್ದರಿಂದ ಇವುಗಳ ಸೊಬಗೇ ಬೇರೆ. 

ಭವ್ಯವಾದ ಕಲೆ ಹಾಗೂ ದೇವಾಲಯದ ಕಲಾಕೃತಿಯನ್ನು ಹೊಂದಿರುವ ಆಭರಣಗಳು ತಲೆ ತಲಾಂತರಗಳಿಂದ ವಿಶೇಷ ಸ್ಥಾನ ಹಾಗೂ ಆಕರ್ಷಣೆಯನ್ನು ಪಡೆದುಕೊಂಡಿವೆ. ಇಂತಹ ಶ್ರೀಮಂತ ನೋಟದಿಂದ ಕೂಡಿರುವ ಆಭರಣಗಳನ್ನು ಮಧುಮಗಳ ಅಲಂಕಾರಕ್ಕೆ ಹಾಗೂ ವಿಶೇಷ ಕಾರ್ಯಕ್ರಮದ ಸಮಯದಲ್ಲಿ ಮಹಿಳೆಯರು ತೊಡುತ್ತಾರೆ. ಇಂಥದ್ದೇ ಒಂದು ಟೆಂಪಲ್‌ ಸ್ಟೋನ್‌ ಆಭರಣವನ್ನು ನಟಿ ಮಾಳವಿಕಾ ಅವಿನಾಶ್‌ ಶೇರ್‌ ಮಾಡಿಕೊಂಡಿದ್ದಾರೆ. ಸ್ತ್ರೀ ಕ್ರಿಯೇಟಿವ್‌ ಸಂಸ್ಥೆಯವರು ತಯಾರಿಸಿರುವ ಈ ಆಭರಣವನ್ನು ಪ್ರದರ್ಶಿಸಿರುವ ಮಾಳವಿಕಾ ಅವರು, ಇದರ ವೈಶಿಷ್ಟ್ಯವನ್ನು ಪರಿಚಯಿಸಿದ್ದಾರೆ. ಅಷ್ಟಮಾಂಗಲ್ಯಂ ಎಂದು ಕರೆಯುವ ಈ ಆಭರಣವನ್ನು ತಮಿಳುನಾಡಿನ ರಾಮನಾಡಿನಲ್ಲಿ ತಯಾರಿಸಲಾಗಿದೆ.  ಈ ಕೆಂಪು ಟೆಂಪಲ್‌ ಆಭರಣದಲ್ಲಿ ಶಂಕ, ಚಂದ್ರ, ಲಕ್ಷ್ಮಿ, ಗದೆ ಸೇರಿದಂತೆ ಕೆಲವೊಂದು ವಿನ್ಯಾಸಗಳನ್ನು ನೋಡಬಹುದು. ಸನಾತನ ಸಾಂಪ್ರದಾಯಿಕತೆಯನ್ನು ಇದು ಬಿಂಬಿಸುತ್ತಿರುವುದಾಗಿ ನಟಿ ಹೇಳಿದ್ದಾರೆ. 

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

 

click me!