
ಕನ್ನಡ ಚಿತ್ರರಂಗದ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಈ ಹಿಂದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು, ನಂತರ ಕೃಷಿ ಗೆಳೆಯ ಅವರದೇ ಫ್ಲಾಟಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಯವು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಕುರಿತು ಹಲವಾರು ಚರ್ಚೆ, ಟೀಕೆಗಳು ಕೇಳಿ ಬಂದಿದ್ದವು. ಇದೀಗ ಕೃಷಿ ಟ್ರೋಲ್ ಗಳ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ನಟಿ ಹೇಳಿದ್ದೇನು? ನೋಡಿ…
ಒಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮತ್ತೆ ಮತ್ತೆ ಬರುತ್ತದೆ, ಯಾರದ್ದೋ ನೋವನ್ನು ನೋಡಿ ಅದನ್ನೇ ಮನರಂಜನೆ ಮಾಡಿಕೊಳ್ಳುವಷ್ಟು ನಾವು ಯಾವಾಗ ಇಷ್ಟು ಬದಲಾಗಿಬಿಟ್ಟೆವು? ಯಾರಾದರೂ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅವರನ್ನು ಹಾಗೆಯೇ ಬಿಡುವುದು ಯಾಕೆ ಇಷ್ಟು ಕಷ್ಟ? ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಉತ್ತರ ಕೊಡಬೇಕೆಂಬ ಹಕ್ಕು ಎಲ್ಲಿಂದ ಬಂತು? ಮೌನವಾಗಿದ್ದರೆ ಅದು ದೌರ್ಬಲ್ಯ ಅಲ್ಲ, ಕೈಂಡ್ ನೆಸ್ ಅಂದ್ರೆ ವೀಕ್ನೆಸ್ ಅಲ್ಲ.
ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಕೈಂಡ್ ನೆಸ್ ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ. ನನ್ನನ್ನು ಎಷ್ಟು ತಳ್ಳಿದರು, ಎಷ್ಟು ಪ್ರಶ್ನೆಸಿದರೂ ಎಷ್ಟು ಜಡ್ಜ್ ಮಾಡಿದರು, ಎಷ್ಟು ಕಥೆಗಳನ್ನು ಕಟ್ಟಿದರೂ ನಾನು ಪ್ರತಿ ಬಾರಿ ಮತ್ತೆ ಎದ್ದಿದ್ದೇನೆ. ಇನ್ನೂ ಎದ್ದೆ ನಿಲ್ಲುತ್ತೇನೆ.
ನನ್ನನ್ನು ಇನ್ನು ತಳ್ಳಬೇಕು ಅನಿಸಿದರೆ ತಳ್ಳಿ . ನೆಲದೊಳಗೆ ಇನ್ನೂ ಆಳಕ್ಕೆ ಹೂಳಬೇಕು ಅನಿಸಿದರೆ ಹೂಳಿ. ಬೇರುಗಳು ಎಷ್ಟು ಆಳವಾಗುತ್ತವೋ, ಮರ ಅಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ನಾನು ಈಗ ನಿಂತಿರುವುದು ದ್ವೇಷದ ಮೇಲಲ್ಲ, ನನ್ನ ಅಪ್ಪ ಅಮ್ಮನ ಪ್ರೀತಿ ಮೇಲೆ. ನನ್ನ ಕುಟುಂಬದ ಆಶೀರ್ವಾದದ ಮೇಲೆ. ನನ್ನ ಸ್ನೇಹಿತರ ಬೆಂಬಲದ ಮೇಲೆ. ನನ್ನನ್ನು ನಿಜವಾಗಿ ಅರಿತಿರುವ ಜನರ ವಿಶ್ವಾಸದ ಮೇಲೆ ಮತ್ತು ಪ್ರೀತಿ, ಕರುಣೆ, ಎಂಪತಿ ಇಂದ ಕಟ್ಟಿದ ನನ್ನ ಕಮ್ಯುನಿಟಿ ಮೇಲೆ.
ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ
ನಾನು ಯಾರಿಗಾದರೂ ಉತ್ತರ ಕೊಡಬೇಕಾದರೆ ಅದು ಅವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ. ನಿಮ್ಮ ರೂಮರ್ಸ್ ನನ್ನನ್ನು ನಿರ್ಧರಿಸಲಾರವು. ನಿಮ್ಮ ಸ್ಟೋರೀಸ್ ನನ್ನನ್ನು ಬದಲಾಯಿಸಲಾರವು. ನಿಮ್ಮ ಪ್ರಯತ್ನಗಳು ನನ್ನ ಆತ್ಮವನ್ನು ಮುರಿಯಲಾರವು. ಯಾಕೆಂದರೆ ನನ್ನನ್ನು ದೇವರು ಕಾಪಾಡುತ್ತಿದ್ದಾನೆ. ನನ್ನ ಜನ ಕಾಪಾಡುತ್ತಿದ್ದಾರೆ. ನಿಮ್ಮ ಮೇಲೆ ನನಗೆ ಕೋಪ ಇಲ್ಲ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಹೃದಯ ನಿಮ್ಮ ಅಭಿಪ್ರಾಯಕ್ಕಿಂತ ದೊಡ್ಡದಾಗಲಿ ಎಂದು. ಒಂದು ದಿನ ಬೇರೆಯವರ ನೋವು, ನಿಮಗೆ ಎಂಟಟೈನ್ಮೆಂಟ್ ಆಗದೆ ನಿಜವಾದ ನೋವಾಗಿ ಕಾಣಲಿ ಎಂದು. ಒಂದು ದಿನ ನಿಮ್ಮ ಜೀವನದಲ್ಲಿ ಅಷ್ಟೊಂದು ಪ್ರೀತಿ ತುಂಬಿರಲಿ, ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ ಎಂದು.
ನಿಮ್ಮೆಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೇ ನನ್ನ ಶಕ್ತಿ, ನೀವೇ ನನ್ನ ಧೈರ್ಯ, ನೀವೇ ನನ್ನ ಸುರಕ್ಷಿತ ಜಾಗ. ನೀವು ಇರುವವರೆಗೂ, ದೇವರ ಆಶೀರ್ವಾದ ನನ್ನ ಜೊತೆ ಇರುವವರೆಗೂ, ಯಾವ ವದಂತಿಯು ನನ್ನನ್ನು ಏನು ಮಾಡಲಾರದು. ನಾನು ಮತ್ತೆ ಮತ್ತೆ ಏಳುತ್ತೇನೆ. ತಪ್ಪು ಎಂದು ಯಾರನ್ನು ಸಾಬೀತುಪಡಿಸಲು ಅಲ್ಲ, ನಾನು ಯಾರು ಎನ್ನುವುದನ್ನು ಮರೆಯದಿರಲು. ಯಾಕೆಂದರೆ ದಯೆ ಯಾವಾಗಲೂ ದ್ವೇಷಕ್ಕಿಂತ ದೊಡ್ಡದು. ಪ್ರೀತಿ ಯಾವಾಗಲೂ ಗದ್ದಲಕ್ಕಿಂತ ದೊಡ್ಡದು. ಮತ್ತು ಗೌರವದಿಂದ ಬದುಕುವುದು ಯಾವಾಗಲೂ ಗೆಲುವೇ.
ಕೃಷಿ
ಟ್ರಸ್ಟ್ ಅಂಡ್ ಲಿಟಲ್ ಬಿಟ್ ಆಫ್ ಮ್ಯಾಜಿಕ್ ಎಂದು ನಟಿ ಬರೆದುಕೊಂಡಿದ್ದಾರೆ. ಕನ್ನಡ ಕಿರುತೆರೆಯ ನಟ-ನಟಿಯರು ಅಭಿಮಾನಿಗಳು ನಟಿಗೆ ಧೈರ್ಯ ತುಂಬುವ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.