ವಿಷ್ಣುವರ್ಧನ್‌-ಭಾರತಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ; ಎರಡೂ ಹೆಣ್ಣು ಮಕ್ಕಳೇ ಯಾಕೆ..!?

By Shriram Bhat  |  First Published Feb 9, 2024, 2:52 PM IST

ನಟ ವಿಷ್ಣುವರ್ಧನ್ ಹಾಗು ಭಾರತಿ ದಂಪತಿಗಳು ತಾವು ದತ್ತು ತೆಗೆದುಕೊಂಡಿರುವ ಇಬ್ಬರೂ ಪುತ್ರಿಯರನ್ನು ಚೆನ್ನಾಗಿ ಸಾಕಿ, ಅವರಿಗೆ ಒಳ್ಳೆಯ ಶಿಕ್ಷಣವನ್ನೂ ಸಹ ಕೊಟ್ಟು ಅವರ ಮದುವೆ ಕೂಡ ಮಾಡಿ ಜವಾಬ್ದಾರಿ ಮೆರೆದಿದ್ದಾರೆ.


ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ ಅವರು ಕೀರ್ತಿ ಹಾಗೂ ಚಂದ್ರು ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿದ್ದು ಗೊತ್ತೇ ಇದೆ. ಕೀರ್ತಿ ವಿಷ್ಣುವರ್ಧನ್ ಹಾಗೂ ಚಂದನಾ ವಿಷ್ಣುವರ್ಧನ್ ಎಂಬ ಇಬ್ಬರು ಹೆಣ್ಣುಮಕ್ಕಳಿಗೂ ಈಗ ಮದುವೆಯಾಗಿದೆ. ಆದರೆ, ಅವರನ್ನು ದತ್ತು ತೆಗೆದುಕೊಂಡಿದ್ದು ಯಾಕೆ? ಹೆಣ್ಣು ಮಕ್ಕಳನ್ನೇ ದತ್ತು ತೆಗೆದುಕೊಂಡಿದ್ದು ಯಾಕೆ? ಇಬ್ಬರೂ ಹೆಣ್ಣುಮಕ್ಕಳನ್ನೇ ತೆಗೆದುಕೊಂಡಿದ್ದು ಯಾಕೆ? ವಿಷ್ಣುವರ್ಧನ್ ಅವರಿಗೆ ಮಕ್ಕಳಾಗಲು ಸಾಧ್ಯವಿಲ್ಲವೇ ಮುಂತಾದ ಪ್ರಶ್ನೆಗಳು ಹಲವರಲ್ಲಿ ಇದ್ದಿರಬಹುದು. 

ಅವೆಲ್ಲಕ್ಕೂ ನಟ ವಿಷ್ಣುವರ್ಧನ್ ಅವರು ತಾವು ಬದುಕಿದ್ದಾಗಲೇ ಕೂಲಾಗಿ ಉತ್ತರ ಕೊಟ್ಟಿದ್ದಾರೆ. 'ನನಗೆ ಮಕ್ಕಳಾಗುವ ಸಾಮರ್ಥ್ಯವಿಲ್ಲ ಎಂದು ನೀವು ಅಂದುಕೊಂಡಿದ್ದರೆ ಐ ಡೋಂಟ್ ಕೇರ್. ಹೆಣ್ಣುಮಕ್ಕಳ ಶೋಷಣೆ ದಿನಂಪ್ರತಿ ನಡೆಯುತ್ತಿದೆ. ಅದಕ್ಕೆ ನಮಗೆ (ವಿಷ್ಣುವರ್ಧನ್-ಭಾರತಿ) ಪ್ರೀತಿ-ಗೌರವ ಕೊಟ್ಟು ಚೆನ್ನಾಗಿ ಸಾಕಲು ಹೆಣ್ಣುಮಕ್ಕಳೇ ಆಗಬೇಕು. ಆದರೆ ನಮಗೆ ಮಕ್ಕಳಾದರೆ ಹೆಣ್ಣು ಮಕ್ಕಳೇ ಆಗುತ್ತವೆ ಅಂತ ಏನು ಗ್ಯಾರಂಟಿ? ಅದಕ್ಕೇ ಈಗಾಗಲೆ ಹೆಣ್ಣಾಗಿ ಹುಟ್ಟಿರುವ ಮಕ್ಕಳನ್ನು ಸಾಕುತ್ತಿದ್ದೇವೆ, ಒಳ್ಳೆಯ ಶಿಕ್ಷಣ ಕೊಟ್ಟು ಬೆಳೆಸಲಿದ್ದೇವೆ.

Tap to resize

Latest Videos

ಶ್ರುತಿ ಹರಿಹರನ್ ಹೇಳ್ತಿದಾರೆ 'ತೀರದಾಚೆಗೆ ಹಾರಿ ಹೋಗುವಾಸೆ'; ಯಾಕೆ ಹಾಗೆ ಹೇಳ್ತಿದಾರೋ ಏನೋ.!

ಮೊದಲು ಒಂದೇ ಹೆಣ್ಣು ಮಗುವನ್ನು ತಂದು ಸಾಕಿದೆವು. ಆದರೆ, ಇಬ್ಬರು ಮಕ್ಕಳಿದ್ದರೆ ಅವರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ, ಪರಸ್ಪರ ಸಹಕಾರದಿಂದ ಇರುವುದಕ್ಕೆ ಅನುಕೂಲವಾಗುತ್ತೆ. ಅಷ್ಟೇ ಅಲ್ಲ, ನಮ್ಮಿಂದ ಇನ್ನೂ ಒಂದು ಹೆಣ್ಣು ಮಗುವಿನ ಶೋಷಣೆ ಅವಕಾಶ ತಪ್ಪಿದಂತೆ ಆಗುತ್ತದೆ ಎಂಬ ಭಾವನೆಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಸಾಕುತ್ತಿದ್ದೇವೆ' ಎಂದಿದ್ದರಂತೆ ನಟ ಡಾ ವಿಷ್ಣುವರ್ಧನ್. ಎಂತಹ ಮಾನವೀಯತೆಯ ಮೂರ್ತಿ, ಅದೆಂತಹ ವಿಶಾಲ ಮನೋಭಾವನೆ ಎನ್ನದೇ ಇರಲಾಗದು ಅಲ್ಲವೇ?

ಒತ್ತಾಯಕ್ಕೆ ಮಣಿದು ಮದುವೆ, ದಿನಂಪ್ರತಿ ಜಗಳ; ಡಿವೋರ್ಸ್ ಬಳಿಕ ಏನ್ ಮಾಡ್ತಿದಾರೆ ನಟಿ ರೂಪಿಣಿ..?!

ನಟ ವಿಷ್ಣುವರ್ಧನ್ ಹಾಗು ಭಾರತಿ ದಂಪತಿಗಳು ತಾವು ದತ್ತು ತೆಗೆದುಕೊಂಡಿರುವ ಇಬ್ಬರೂ ಪುತ್ರಿಯರನ್ನು ಚೆನ್ನಾಗಿ ಸಾಕಿ, ಅವರಿಗೆ ಒಳ್ಳೆಯ ಶಿಕ್ಷಣವನ್ನೂ ಸಹ ಕೊಟ್ಟು ಅವರ ಮದುವೆ ಕೂಡ ಮಾಡಿ ಜವಾಬ್ದಾರಿ ಮೆರೆದಿದ್ದಾರೆ. ಕೀರ್ತಿ ವಿಷ್ಣುವರ್ಧನ್ ಅವರನ್ನು ನಟ ಅನಿರುದ್ಧ್ ಜತ್ಕರ್ ಮದುವೆಯಾಗಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆದರೆ, ಚಂದನಾ ಅವರು ಹೊರಗಡೆ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತಿದೆ. ತುಂಬಾ ನಾಚಿಕೆ ಸ್ವಭಾವದ ಚಂದನಾ ವಿಷ್ಣುವರ್ಧನ್ ಸುಖ ಸಂಸಾರ ನಡೆಸುತ್ತಿದ್ದು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಾರೆ ಎನ್ನಲಾಗಿದೆ.

'ಬುದ್ದಿವಂತ'ನ ತಲೆಗೆ ಹುಳ ಬಿಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ 'ಒಳ್ಳೇ ಹುಡುಗ' ಪ್ರಥಮ್

click me!