
ಬೆಂಗಳೂರು (ಮಾ. 18): ದರ್ಶನ್ ವೈಲ್ಡ್ ಲೈಫ್ ಫೋಟೋವೊಂದನ್ನು ಶ್ರೀಮುರಳಿ ಉಡುಗೊರೆಯಾಗಿ ಪಡೆದಿದ್ದಾರೆ.
ಮದಗಜ ನಿರ್ಮಾಪಕ ಉಮಾಪತಿ ಶ್ರೀ ಮುರಳಿಗೆ ದರ್ಶನ್ ತೆಗೆದ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಲದಿನಗಳ ಹಿಂದೆ ಮೈಸೂರಿನಲ್ಲಿ 3 ದಿನಗಳ ಕಾಲ ನಡೆದ ಎಕ್ಸಿಬಿಷನ್ ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಅದರಿಂದ ಬಂದ ಲಾಭವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ಹೇಳಿದ್ದರು.
ಈ ಫೋಟೋ ಬೆಲೆ 10 ಸಾವಿರವಾಗಿದ್ದು ಶ್ರೀಮುರಳಿಗೆ ಬಹಳ ಇಷ್ಟವಾಗಿದೆಯಂತೆ. ಶ್ರೀಮುರಳಿ ಸದ್ಯ ’ಭರಾಟೆ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ’ಮದಗಜ’ ಶೂಟಿಂಗ್ ಆರಂಭವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.