ಆತ್ಮಸ್ಥೈರ್ಯ ಇದ್ರೆ ಏನ್‌ ಬೇಕಿದ್ರೂ ಮಾಡಬಹುದು; ‌ʼ131ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಶಿವರಾಜ್‌ಕುಮಾರ್

Published : Mar 04, 2025, 12:39 PM ISTUpdated : Mar 04, 2025, 12:51 PM IST
ಆತ್ಮಸ್ಥೈರ್ಯ ಇದ್ರೆ ಏನ್‌ ಬೇಕಿದ್ರೂ ಮಾಡಬಹುದು; ‌ʼ131ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಶಿವರಾಜ್‌ಕುಮಾರ್

ಸಾರಾಂಶ

ನಟ ಶಿವರಾಜ್‌ಕುಮಾರ್‌ ಅವರು ಅನಾರೋಗ್ಯದ ಬಳಿಕ ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಚಿಕಿತ್ಸೆ ಪಡೆದು ಇಷ್ಟುದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಈ ಮಧ್ಯೆ ಆತ್ಮೀಯರ ಮದುವೆ ಕಾರ್ಯಗಳಲ್ಲಿ ಭಾಗಿಯಾಗಿದ್ದ ಶಿವರಾಜ್‌ಕುಮಾರ್‌ ಈಗ ಸಿನಿಮಾ ಸೆಟ್‌ಗೆ ಕಾಲಿಟ್ಟಿದ್ದಾರೆ. ಶಿವರಾಜ್‌ಕುಮಾರ್‌ ಅವರು 131 ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. 

ಅನಾರೋಗ್ಯವನ್ನು ಜಯಿಸಿ ʼಹ್ಯಾಟ್ರಿಕ್‌ ಹೀರೋʼ ನಟ ಶಿವರಾಜ್‌ಕುಮಾರ್‌ ಅವರು ಸಿನಿಮಾ ಶೂಟಿಂಗ್‌ ಆರಂಭಿಸಿದ್ದಾರೆ. ಶಿವರಾಜ್‌ಕುಮಾರ್‌ ನಟನೆಯ 131ನೇ ಸಿನಿಮಾ ಶೂಟಿಂಗ್‌ ಶುರುವಾಗಿದೆ. Age Is Just A Number ಎಂದು ಸಾಬೀತುಪಡಿಸುತ್ತ ಬಂದಿರೋ ಶಿವರಾಜ್‌ಕುಮಾರ್‌ ಈ ಬಾರಿ ಕೂಡ ಆತ್ಮಸ್ಥೈರ್ಯ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಎರಡು ತಿಂಗಳುಗಳ ಬಳಿಕ ಅವರು ಸಿನಿಮಾ ಸೆಟ್‌ಗೆ ಕಾಲಿಟ್ಟಿದ್ದಾರೆ.

ಆರತಿ ಬೆಳಗಿ ಶುಭ ಹಾರೈಸಿದ್ರು 
ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾದ ( 131 ) ಮೊದಲ ಹಂತದ ಶೂಟಿಂಗ್‌ ಈಗಾಗಲೇ ಬೆಂಗಳೂರಿನಲ್ಲಿ ನಡೆದಿತ್ತು. ಈಗ ಎರಡನೇ ಹಂತದ ಶೂಟಿಂಗ್‌ ಶುರುವಾಗಿದೆ. ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ವಿಗ್ ಧರಿಸಿ, ವಿಭಿನ್ನವಾದ ಗೆಟಪ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಗೆಟಪ್‌ ಹಾಕಿದ ಶಿವರಾಜ್‌ಕುಮಾರ್‌ ಕ್ಯಾರ್‌ವ್ಯಾನ್‌ನಿಂದ ಇಳಿಯುತ್ತಿದ್ದಂತೆ, ಮಹಿಳೆಯರು ಶಿವರಾಜ್‌ಕುಮಾರ್‌ಗೆ ಆರತಿ ಬೆಳಗಿದ್ದಾರೆ. ಪತ್ನಿ ಗೀತಾರಿಂದಲೇ  ಶಿವರಾಜ್‌ಕುಮಾರ್‌ ಅವರು ಇಷ್ಟು ಬೇಗ ಹುಷಾರಾಗಿದ್ದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

4 ವರ್ಷದಿಂದ ಸಿನೆಮಾಗಳಿಂದ ದೂರವಿರುವ 700 ಕೋಟಿ ಆಸ್ತಿ ಒಡತಿ, 72 ಕೋಟಿ ಮೌಲ್ಯದ ಗೌನ್! ಯಾರೀಕೆ?

131 ಸಿನಿಮಾದಲ್ಲಿ ಯಾರಿದ್ದಾರೆ?
ಈ ಚಿತ್ರಕ್ಕೆ ತಮಿಳು ನಿರ್ದೇಶಕ ಕಾರ್ತಿಕ್‌ಅದ್ವೈತ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೇವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ʼಗುಳ್ಟುʼ, ʼಹೊಂದಿಸಿ ಬರೆಯಿರಿʼ ಸಿನಿಮಾ ಖ್ಯಾತಿಯ ನವೀನ್‌ ಶಂಕರ್‌ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ಅಂದಹಾಗೆ ಸ್ಯಾಮ್‌ಸಿ ಅವರು ಮೊದಲ ಬಾರಿಗೆ ಈ ಚಿತ್ರದ ಮೂಲಕ ಕನ್ನಡ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಲಿದ್ದಾರೆ. ತಮಿಳಿನ ʼವಿಕ್ರಂ ವೇದʼ, ʼಖೈದಿʼ, ʼಆಡಿಎಕ್ಸ್‌ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಹೆಸರು ಮಾಡಿದ್ದರು. ಇನ್ನು ಮಹೇನ್ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ. ʼಟಗರುʼ, ʼಘೋಸ್ಟ್‌  ಸಿನಿಮಾದಲ್ಲಿಯೂ ಇವರೇ ಛಾಯಾಗ್ರಹಣ ಮಾಡಿದ್ದರು. ಅಂದಹಾಗೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾದಲ್ಲಿ ಇನ್ನು ಯಾರು, ಯಾರು ನಟಿಸುತ್ತಿದ್ದಾರೆ? ಹೀರೋಯಿನ್‌ ಯಾರು ಎಂಬ ಬಗ್ಗೆ ಕೂಡ ಮಾಹಿತಿ ರಿವೀಲ್‌ ಆಗಿಲ್ಲ. 

ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

ಮುಂಬರುವ ಸಿನಿಮಾಗಳು
ಪ್ರತಿ ವರ್ಷ ಶಿವರಾಜ್‌ಕುಮಾರ್‌ ನಾಲ್ಕು- ಐದು ಸಿನಿಮಾಗಳನ್ನು ಮಾಡುತ್ತಿರುತ್ತಾರೆ. ಶಿವರಾಜ್‌ಕುಮಾರ್‌ ಬ್ಯಾನರ್‌ನಲ್ಲಿ ʼಎ ಫಾರ್‌ ಆನಂದʼ ಸಿನಿಮಾ ಕೆಲಸ ಶುರು ಆಗಲಿದೆ. ಈಗ ಅವರು ತೆಲುಗಿನ ಬುಚ್ಚಿ ಬಾಬಾ ಸನಾ ನಿರ್ದೇಶನ ಮಾಡುತ್ತಿರುವ ರಾಮ್‌ ಚರಣ್‌ ತೇಜ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಧನುಷ್‌ ಜೊತೆಗೆ ʼಕ್ಯಾಪ್ಟನ್‌ ಮಿಲ್ಲರ್ʼ‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ನಟಿಸಿದ್ದು, ಇವರ ಅಭಿನಯಕ್ಕೆ ಸಖತ್‌ ಶಿಳ್ಳೆ, ಚಪ್ಪಾಳೆ ಸಿಕ್ಕಿತ್ತು. ಈಗ ನಟ ರಜನೀಕಾಂತ್‌ ಅಭಿನಯದ ʼಜೈಲರ್‌ 2ʼ ಸಿನಿಮಾದಲ್ಲಿಯೂ ಅವರು ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕಾಗಿ ಶಿವರಾಜ್‌ಕುಮಾರ್‌ ಅವರು ಹದಿನೈದು ದಿನದ ಕಾಲ್‌ಶೀಟ್‌ ಕೊಟ್ಟಿದ್ದಾರಂತೆ. ಅರ್ಜುನ್‌ ಜನ್ಯ ನಿರ್ದೇಶನದ ʼ45ʼ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ನಟಿಸಿದ್ದು, ಈ ಸಿನಿಮಾ ರಿಲೀಸ್‌ ಆಗಬೇಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!