
ಬೆಂಗಳೂರು (ಜು.7): ಕನ್ನಡ ಸ್ಟಾರ್ ನಟ ರಿಷಬ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ರಿಷಬ್ ಶೆಟ್ಟಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಚಿತ್ರರಂಗದ ಆಪ್ತರ ಜೊತೆಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದರು. ಇದೇ ವೇಳೆ ಪತ್ನಿ ಪ್ರಗತಿ ಶೆಟ್ಟಿ ಅವರು ಹುಟ್ಟುಹಬ್ಬಕ್ಕೆ ಸಫ್ರೈಸ್ ನೀಡಿದ್ದು, ರಿಷಬ್ ಶೆಟ್ಟಿ ಫೌಂಡೇಶನ್ ಅನೌನ್ಸ್ ಮಾಡಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ಫೌಂಡೇಶನ್ ಲೋಗೋ ಕೂಡ ಪ್ರಗತಿ ಶೆಟ್ಟಿ ಲಾಂಚ್ ಮಾಡಿದ್ದಾರೆ. ಈ ಫೌಂಡೇಶನ್ ನಿಂದ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತೆ.
ಈ ಬಗ್ಗೆ ಮಾತನಾಡಿದ ನಟ ಪ್ರಮೋದ್ ಶೆಟ್ಟಿ , ರಿಷಬ್ ಶೆಟ್ಟಿ ಯಾರಿಗೂ ಹೇಳಿಕೊಳ್ಳದೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ. ಶಾಲೆಗಳಿಗೆ ಶಿಕ್ಷಕರನ್ನ ಕೊಟ್ಟಿದ್ದಾರೆ. ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಈಗ ಅದಕ್ಕೆ ಒಂದು ವೇದಿಕೆ ಮಾಡಿ, ಹೊರ ರೂಪದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಕೆಲಸ ಮಾಡುತ್ತೆ ಎಂದಿದ್ದಾರೆ.
Happy Birthday Rishab Shetty: ಕಾಂತಾರ ಸ್ಟಾರ್ ಹುಟ್ಟುಹಬ್ಬಕ್ಕೆ ನಾಯಕಿ ಸಪ್ತಮಿಯ ಪ್ರೀತಿಯ ವಿ
ನನಗೂ ಸಿನಿಮಾ ಜಗತ್ತಲ್ಲಿ ಪ್ರೇಕ್ಷಕರು ಜಾಗ ಕೊಡ್ತಾರೆ ಅಂತ ನೀವು ಪ್ರ್ಯೂ ಮಾಡಿದ್ರಿ ಎಂದು ಅಭಿಮಾನಿಗಳ ಬಳಿ ನಟ ರಿಷಭ್ ಶೆಟ್ಟಿ ಹೇಳಿದ್ದಾರೆ. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಅಂತ ಕರೆದ್ರು. ಆ ದೇವರುಗಳ ಆಶೀರ್ವಾದ ಸಿಕ್ಕಿದೆ. ನನ್ನ ಹುಟ್ಟುಹಬ್ಬ ಕ್ಕೆ ನೀವೆ ನನಗೆ ದೊಡ್ಡ ಗಿಫ್ಟ್. ಕಾಂತಾರ ಬಿಡುಗಡೆ ಆಗೋ ಮೊದಲು ಅಭಿಮಾನಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಅಂತ ನನಗೆ ಗೊತ್ತಾಗಿರಲಿಲ್ಲ. ಕಾಂತಾರ ಸಿನಿಮಾದಿಂದ ನೀವು ನನ್ನನ್ನೂ ಗೆಲ್ಲಿಸಿದ್ರಿ. ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ತಲೆ ಬಾಗುತ್ತೇನೆ. ನಿಮ್ಮ ಋಣ ತೀರಿಸೋ ಕೆಲಸ ಮಾಡುತ್ತೇನೆ. ನಾನು ಜನರಿಗೆ ಸಿಗಬೇಕು ಅನ್ನೋ ಆಸೆ ನನ್ನ ಹೆಂಡತಿಯದ್ದು. ಅಭಿಮಾನಿಗಳ ಜೊತೆ ಬೆರೆಯೋಕೆ ಉಗ್ರ ಹೋರಾಟ ಮಾಡಿದವರು ಪ್ರಮೋದ್ ಶೆಟ್ಟಿ ಎಂದ ರಿಷಬ್ ಬಳಿಕ ಅಭಿಮಾನಿಗಳಿಗಾಗಿ ಕಾಂತಾರ ಸಿನಿಮಾ ಡೈಲಾಗ್ ಹೊಡೆದರು. ಎಲ್ಲಾ ನಾಯಕ ಅಭಿಮಾನಿಗಳೂ ಇಲ್ಲು ಇದ್ದಾರೆ. ಅವರಿಗೆಲ್ಲ ಧನ್ಯವಾದ ಎಂದರು.
Rishab Shetty Birthday: ಕಾಂತಾರ ಸ್ಟಾರ್‌ಗೆ ಹೊಂಬಾಳೆ ಫಿಲ್ಮ್ಸ್ ವಿಶ್: ಅಭಿಮಾನಿಗಳಿಗೆ
ಮಳೆಯ ನಡುವೆಯೂ ರಿಷಬ್ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ಮಾಡಲಾಗಿತ್ತು. ಗಣಪತಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೊಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ರಿಷಬ್ ಶೆಟ್ಟಿಗೆ ಸರ್ಪೈಸ್ ಕೊಡಲು ಸ್ನೇಹಿತರು ಹಲವು ಕಾರ್ಯಕ್ರಮಗಳ ಪ್ಲಾನ್ ಮಾಡಿದ್ದರು. ಹುಲಿ ಕುಣಿತ, ಚೆಂಡೆ ಸದ್ದು ಮತ್ತು ಪಟಾಕಿ ಸಿಡಿಸುವ ಮೂಲಕ ರಿಷಬ್ ಗೆ ಸ್ವಾಗತ ಕೋರಲಾಯ್ತು. ಇನ್ನು ಉಡುಪಿಯಿಂದ ಬಂದ ಹುಲಿ ವೇಷಧಾರಿಗಳ ಜೊತೆ ರಿಷಬ್ ಹುಲಿ ಡಾನ್ಸ್ ಮಾಡಿ ಸಂಭ್ರಮಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.