ಶಾರ್ಟ್ಸ್ ಇಲ್ಲದ ಫೋಟೋದಲ್ಲಿ ರಮ್ಯಾ ಹಾಟ್, ತಮ್ಮೆದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆಂದ ಫ್ಯಾನ್ಸ್

By Suvarna News  |  First Published Jul 7, 2023, 4:54 PM IST

ರಮ್ಯಾ ಫಾರಿನ್ ಟೂರ್‌ನಲ್ಲಿದ್ದಾರೆ. ಅವರ ಶಾರ್ಟ್‌ಲೆಸ್‌ ಲಾಂಗ್‌ ಶರ್ಟ್‌ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಹಾಗೆ ನೋಡ್ತಿದ್ರೆ ಒಂದು ವಯಸ್ಸು ದಾಟಿದ ಮೇಲೆ ನಟಿಯರು ಹೆಚ್ಚು ಬೋಲ್ಡ್‌ ಆಗಿ ಕಾಣಿಸುತ್ತಾರೆ ಅಂತಾರೆ ಜನ. ಇದು ನಿಜನಾ?


-ನಿತ್ತಿಲೆ

ರಮ್ಯಾ ಫಾರಿನ್ ಟೂರ್‌ನಲ್ಲಿದ್ದಾರೆ. ಅವರ ಶಾರ್ಟ್‌ಲೆಸ್‌ ಲಾಂಗ್‌ ಶರ್ಟ್‌ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಹಾಗೆ ನೋಡ್ತಿದ್ರೆ ಒಂದು ವಯಸ್ಸು ದಾಟಿದ ಮೇಲೆ ನಟಿಯರು ಹೆಚ್ಚು ಬೋಲ್ಡ್‌ ಆಗಿ ಕಾಣಿಸುತ್ತಾರೆ ಅಂತಾರೆ ಜನ. ಇದು ನಿಜನಾ?

ನಟಿಯರ ವಯಸ್ಸಿಗೂ ಅವರ ಬೋಲ್ಡ್‌ನೆಸ್‌ಗೂ ಸಂಬಂಧ ಇದೆಯಾ ಅನ್ನೋ ಚರ್ಚೆ ಜೋರಾಗ್ತಿದೆ. ಸದ್ಯ ಈ ಮಾತು ಕೇಳಿ ಬರೋದಕ್ಕೆ ಕಾರಣ ನಿನ್ನೆ ರಮ್ಯಾ ಹಾಕಿರೋ ಲಾಂಗ್‌ ಶರ್ಟ್‌. ಇವತ್ತು ಅದೇ ಥರದ ಡ್ರೆಸ್‌ ಮಾಡ್ಕೊಂಡಿರೋ ಫೋಟೋನ ಕಿರುತೆರೆ ನಟಿ ಸಾರಾ ಅಣ್ಣಯ್ಯ ಪೋಸ್ಟ್ ಮಾಡಿದ್ದಾರೆ. ರಮ್ಯಾ ಲಾಂಗ್‌ ಶರ್ಟ್ ಫೋಟೋ ನೋಡಿದ ತಕ್ಷಣ ಇದು ಇನ್ಯಾವ ಲೆವೆಲ್‌ಗೆ ಟ್ರೋಲ್‌ ಆಗುತ್ತೋ ಅನ್ನೋ ಅಂದುಕೊಂಡರೆ ಹಾಗೇನೋ ಆದ ಹಾಗಿಲ್ಲ. ಜನ ಬೆಂಕಿ, ಹಾಟ್‌ನೆಸ್ ಅಂತೆಲ್ಲ ಕಮೆಂಟ್‌ ಮಾಡಿದರೇ ಹೊರತು ಟ್ರೋಲ್‌ ಮಾಡೋದು, ಕೆಟ್ಟ ಕಮೆಂಟ್‌ ಕೊಡೋದು ಇಂಥದ್ದನ್ನೆಲ್ಲ ಮಾಡಿಲ್ಲ. ಕೆಲವು ಕಿಲಾಡಿಗಳು ಮಾತ್ರ, ರಮ್ಯಾ ಚೆಡ್ಡಿ ಹಾಕೋಕೆ ಮರೆತಿದ್ದಾರೆ ಅಂತ ಕಮೆಂಟ್ ಪಾಸ್‌ ಮಾಡಿದರು. 

Tap to resize

Latest Videos

ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್ ಮರೆತ ರಮ್ಯಾ:
ರಾಜಕಾರಣಕ್ಕೆ ಬಂದಮೇಲೆ ರಮ್ಯಾ ಬೋಲ್ಡ್‌ ಡ್ರೆಸಿಂಗ್‌ ಸ್ಟೈಲ್ ಮರೆತೇ ಬಿಟ್ಟಿದ್ದರು. ಹೆಚ್ಚಾಗಿ ಸಾರ್ವಜನಿಕ ಜಾಗಗಳಲ್ಲಿ ಸೀರೆ, ಚೂಡಿದಾರ್‌ ಅಥವಾ ಡೀಸೆಂಟ್‌ ಕ್ಯಾಶ್ಯುಯಲ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ತಿದ್ರು. ರಮ್ಯಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ನಟಿಸೋದಾಗಿ ಶುರುವಲ್ಲಿ ಹೇಳಿಕೊಂಡಿದ್ದರೂ, ಆ ಸಿನಿಮಾದಿಂದ ಆಮೇಲೆ ಹೊರಬಂದರು. ಇದಾಗಿ 'ಉತ್ತರಕಾಂಡ' ಸಿನಿಮಾದಲ್ಲಿಯೂ ಮುಖ್ಯಪಾತ್ರದಲ್ಲಿ ನಟಿಸೋದಾಗಿ ಘೋಷಿಸಿದರು. ಆ ಸಿನಿಮಾದ ಮುಹೂರ್ತವಷ್ಟೇ ನಡೆದಂತಿದೆ. ಆ ಟೈಮಲ್ಲಿ ರಮ್ಯಾ ಸಾಂಪ್ರದಾಯಿಕವಾಗಿ ಸೀರೆಯುಟ್ಟು ಬಂದಿದ್ದರು. ರಮ್ಯಾ ರೀಸೆಂಟಾಗಿ ಸೀರೆಯನ್ನೂ ಮಾದಕವಾಗಿ ಉಟ್ಟಿದ್ದು ಅಭಿಷೇಕ್‌ ರಿಸೆಪ್ಶನ್‌ಗೆ. ಪರ್ವಾಗಿಲ್ವೇ, ನಮ್ ಸ್ಯಾಂಡಲ್‌ವುಡ್‌ ಕ್ವೀನ್‌ ಭಾಳ ಅಪರೂಪಕ್ಕೆ ಬೇರೆಯೆ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ ಅಂತ ಒಂದಿಷ್ಟು ಜನ ಓರೆಯಾಗಿ ಮಾತಾಡಿಕೊಂಡರು.

ಗುಲಾಬಿ ಹೂವನ್ನು ಮುತ್ತಿಕ್ಕುತಾ ದೇವರಲ್ಲಿ ನಟಿ ರಮ್ಯಾ ಇದನ್ನ ಕೇಳಿಕೊಂಡ್ರು!

ಸದ್ಯ ಎಲೆಕ್ಷನ್‌ ಪ್ರಚಾರ, ಸರ್ಕಾರ ಫಾರ್ಮೇಶನ್‌ ಅಂತೆಲ್ಲ ಆದ ಮೇಲೆ ಮೋಹಕ ತಾರೆ ವಿದೇಶಕ್ಕೆ ಹೋಗಿದ್ದಾರೆ. ಅಲ್ಲಿನ ಸ್ಟ್ರೀಟ್‌ಗಳು, ಬಂದರು, ಪ್ರವಾಸಿ ತಾಣಗಳ ಫೋಟೋ ಹಾಕೋದರ ಜೊತೆಗೆ ಟ್ರಯಲ್‌ ರೂಮಿನ ಒಂದು ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಲಾಂಗ್‌ ಶರ್ಟ್ ಇದೆ. ಆದರೆ ಶಾರ್ಟ್ಸ್ ಇಲ್ಲ. ಇದನ್ನವರು ಮಿಸ್ ಆಗಿ ಹಾಕಿದ್ದಾರೋ, ಬೇಕು ಅಂತಲೇ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಅವರ ಫ್ಯಾನ್ಸ್‌ ಈ ಫೋಟೋಗೆ ಹತ್ತಿ ಉರಿಯೋ ಬೆಂಕಿಯ ಫೋಟೋ ಮೂಲಕ ರಮ್ಯಾ ತಮ್ಮೆದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ ಅನ್ನೋದನ್ನು ಹೇಳಿದ್ದಾರೆ. 

ಸಮಂತಾ, ದೀಪಿಕಾನೂ ಟೂ ಪೀಸಲ್ಲಿ:
ಹಾಗೆ ನೋಡಿದರೆ ಒಂದು ವಯಸ್ಸಿನ ನಂತರು ನಟಿಯರು ಬಿಂದಾಸ್‌ ಆಗಿ ಕಾಣಿಸಿಕೊಳ್ಳೋದಕ್ಕೆ ಹಿಂಜರಿಯಲ್ಲ. ರೀಸೆಂಟಾಗಿ ದೀಪಿಕಾ ಪಡುಕೋಣೆ 'ಪಠಾಣ್‌' ಸಿನಿಮಾದಲ್ಲಿ ಕಾಣಿಸಿಕೊಂಡ ರೀತಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಸಮಂತಾನೂ ಬೋಲ್ಡ್‌ನೆಸ್‌ಗೆ ಮತ್ತೊಂದು ಹೆಸರು ಅನ್ನೋ ಹಾಗಿದ್ದಾರೆ. ಬಾಲಿವುಡ್‌ನಲ್ಲಂತೂ ಈ ಥರ ಒಂದು ಏಜ್‌ ದಾಟಿದ ಬಳಿಕ ಸಖತ್ ಬೋಲ್ಡ್‌ ಆಗಿ ಕಾಣಿಸಿಕೊಂಡ ಅನೇಕ ನಟಿಯರು ಕಾಣ ಸಿಗ್ತಾರೆ. ಇನ್ನೊಂದು ರೀತಿ ಹೇಳೋದಾದ್ರೆ ಚಿಕ್ಕ ವಯಸ್ಸಿನಲ್ಲಿ ಇಂಥಾ ಫೋಟೋಗಳನ್ನು ಹಾಕಿದರೆ ಜನರೂ ಕ್ಯಾಶ್ಯುಯಲ್‌ ಆಗಿ ತಗೊಳ್ತಾರೆ. ಆದರೆ ಒಂದು ವಯಸ್ಸಾದ ಮೇಲೆ ನಟಿಯರು ಹೀಗೇ ಇರ್ತಾರೆ ಅಂತ ಫಿಕ್ಸ್ ಆಗಿರ್ತಾರೆ. ಅವರು ಅದಕ್ಕಿಂತ ಡಿಫರೆಂಟಾಗಿ ಕಾಣಿಸಿಕೊಂಡರೆ ಆಶ್ಚರ್ಯವಾಗುತ್ತಾರೆ. ಒಂದು ವಯಸ್ಸಿನ ನಂತರ ನಟಿಯರು ಹೀಗಿದ್ದರೇ ಉತ್ತಮ ಅನ್ನೋ ಪೂರ್ವಾಗ್ರಹ ಇಟ್ಟುಕೊಂಡವರೂ ಬಹಳ ಮಂದಿ ಇದ್ದಾರೆ.

ಫಾರಿನ್ ಪ್ರಯಾಣದಲ್ಲಿ ಮೋಹಕ ತಾರೆ : ಸೌಂದರ್ಯ ಚಿಕಿತ್ಸೆಗಾಗಿ ಕ್ವೀನ್ ರಮ್ಯಾ ಲಂಡನ್ ಪ್ರಯಾಣ!
 
ಇರಲಿ, ಸದ್ಯಕ್ಕೀಗ ನಮ್ ರಮ್ಯಾ ಹಾಕ್ಕೊಂಡಿರೋ ಫೋಟೋದಲ್ಲಿ ಅವರು ಹಾಟ್ ಆಗಿ ಕಾಣ್ತಾರೆಯೇ ವಿನಃ ಅಶ್ಲೀಲವಾಗಿಲ್ಲ ಅನ್ನೋದು ಬಹು ಮಂದಿಯ ಅಭಿಪ್ರಾಯ. ಇದರಲ್ಲಿ ರಮ್ಯಾ ಸ್ಲಿಮ್‌ ಆಗಿರೋದನ್ನೂ ಅವರ ಫ್ಯಾನ್ಸ್ ಗುರುತಿಸಿದ್ದಾರೆ. ಆ ಡ್ರೆಸ್‌ನಲ್ಲಿ ಹಾಗೆ ಕಾಣೋದಾ ಅಥವಾ ನಿಜವಾಗಿಯೂ ಸ್ಲಿಮ್ ಆಗಿದ್ದಾರಾ ಅನ್ನೋದನ್ನು ಪತ್ತೆ ಮಾಡ್ಬೇಕು ಅಂದರೆ ಅವರು ಮತ್ತೊಂದಿಷ್ಟು ಫೋಟೋಸ್ ಹಾಕದೇ ವಿಧಿಯಿಲ್ಲ.

 

 

click me!