
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಎಲ್ಲ ವಿಚಾರದಲ್ಲಿಯೂ ಪಾಕ್‌ಗೆ ಸರಿಯಾಗಿ ಬಿಸಿ ಮುಟ್ಟಿಸುತ್ತಲಿದೆ. ಪಾಕಿಸ್ತಾನದ ನಟ ಫವಾದ್ ಖಾನ್ ಅಭಿನಯದ 'ಅಬೀರ್ ಗುಲಾಲ್' ಸಿನಿಮಾವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಅನೇಕರಿಗೆ ಆಕ್ಷೇಪವಿದೆ. 'ಸಿಂಘಮ್' ಮತ್ತು 'ದಬಂಗ್ 2' ನಂತಹ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿರುವ ಪ್ರಕಾಶ್ ರೈ ಕೂಡ ಇದಕ್ಕೆ ವಿರುದ್ಧವಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ 'ಅಬೀರ್ ಗುಲಾಲ್' ನಿಷೇಧ ಮಾಡಿದ್ದು ತಪ್ಪು ಎಂದು ಅವರು ಹೇಳಿದ್ದಾರೆ. ಸರ್ಕಾರಕ್ಕೆ ಸಿನಿಮಾ ನಿಷೇಧಿಸುವ ಅಧಿಕಾರವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
'ಅಬೀರ್ ಗುಲಾಲ್' ನಿಷೇಧದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು?
ನಟ ಪ್ರಕಾಶ್ ರೈ ಅವರು ಸಂದರ್ಶನದಲ್ಲಿ 'ಅಬೀರ್ ಗುಲಾಲ್' ನಿಷೇಧದ ಬಗ್ಗೆ ಮಾತನಾಡುತ್ತ, "ಯಾವುದೇ ಸಿನಿಮಾವನ್ನು ನಿಷೇಧಿಸುವುದನ್ನು ನಾನು ವಿರೋಧಿಸುತ್ತೇನೆ. ಅದು ಒಳ್ಳೆಯ ಸಿನಿಮಾವಾಗಿರಲಿ ಅಥವಾ ಪ್ರಚಾರದ ಸಿನಿಮಾವಾಗಿರಲಿ. ಅದನ್ನು ಜನರು ನಿರ್ಧರಿಸಲಿ, ಜನರಿಗೆ ಹಕ್ಕಿದೆ. ನೀಲಿಚಿತ್ರ ಅಥವಾ ಮಕ್ಕಳ ದೌರ್ಜನ್ಯದ ಬಗ್ಗೆ ಸಿನಿಮಾ ಇಲ್ಲ ಅಂದ್ರೆ ನೀವು ಯಾವುದೇ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಕಾನೂನು ಪ್ರಕ್ರಿಯೆಯ ಪ್ರಕಾರ...ಏನಾಯಿತು? ಅವರನ್ನು ಬರಲು ಬಿಡಿ" ಎಂದಿದ್ದಾರೆ.
'ಬೇಷರಮ್ ರಂಗ್' ವಿವಾದದ ಬಗ್ಗೆಯೂ ಪ್ರಕಾಶ್ ರೈ ಕಿಡಿ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡಿನ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಲವು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಪ್ರಕಾಶ್ ರೈ, "ಇತ್ತೀಚೆಗೆ ಎಲ್ಲರೂ ಸುಲಭವಾಗಿ ಕೋಪಗೊಳ್ಳುತ್ತಾರೆ...ನಾನು ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇನೆ...ಅವಳ ತಲೆ ಕತ್ತರಿಸುತ್ತೇನೆ. ಇದರ ಅರ್ಥವೇನು? ಶಾರುಖ್ ಖಾನ್...ಬಣ್ಣದ ಕಾರಣಕ್ಕೆ ಅವರು ಗಲಾಟೆ ಮಾಡುತ್ತಾರೆ, ಎಲ್ಲದಕ್ಕೂ ಅಳುತ್ತಾರೆ. 'ದಿ ಕಾಶ್ಮೀರ್ ಫೈಲ್ಸ್' ನಂತಹ ಸಿನಿಮಾಗಳಿಗೆ ಹಸಿರು ನಿಶಾನೆ ಸಿಗುತ್ತದೆ, ಆದರೆ ಇತರರಿಗೆ ಸಿಗುವುದಿಲ್ಲ" ಎಂದಿದ್ದಾರೆ.
ಫವಾದ್ ಖಾನ್ ಅವರ 'ಅಬೀರ್ ಗುಲಾಲ್' ಚಿತ್ರದ ಬಗ್ಗೆ
'ಅಬೀರ್ ಗುಲಾಲ್' ಆರ್ತಿ ಎಸ್. ಬಾಗ್ರಿ ನಿರ್ದೇಶನದ ಚಿತ್ರ. ಈ ಚಿತ್ರದ ಮೂಲಕ ಫವಾದ್ ಖಾನ್ ಸುಮಾರು 9 ವರ್ಷಗಳ ನಂತರ ಬಾಲಿವುಡ್‌ಗೆ ಮರಳಿದ್ದರು. ಮೇ 9 ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಅಬೀರ್ ಗುಲಾಲ್' ಸಿನಿಮಾದ ಬಿಡುಗಡೆಯನ್ನು ನಿಷೇಧಿಸಿತು. ಈ ಚಿತ್ರದಲ್ಲಿ ವಾಣಿ ಕಪೂರ್ ಮೊದಲ ಬಾರಿಗೆ ಫವಾದ್ ಖಾನ್ ಜೊತೆ ನಟಿಸಿದ್ದಾರೆ.
ಅಂದಹಾಗೆ ಪಾಕಿಸ್ತಾನದ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಯು ಭಾರತದಲ್ಲಿ ಒಪನ್ ಆಗೋದಿಲ್ಲ. ಅಂದಹಾಗೆ ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ದೇಶ ಬಿಟ್ಟು ಹೋಗಿ ಎಂದು ಹೇಳಲಾಗಿದೆ. ಒಟ್ಟನಲ್ಲಿ ಪಹಲ್ಗಾಮ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ರಾಜತಾಂತ್ರಿಕ ನಡೆಯತ್ತ ಸಾಗಿದೆ. ಪಾಕಿಸ್ತಾನ ಹಾಗೂ ಭಾರತ ಯುದ್ಧ ಆಗಲಿದೆಯಾ ಎಂಬ ಪ್ರಶ್ನೆ ಕೂಡ ಇದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.