
ಕೊರೋನಾ ವೈರಸ್ ರಂಪಾಟ ಹೆಚ್ಚಾದ ಕಾರಣ ಸಿನಿಮಾ ತಾರೆಯರು ಮನೆಯಲ್ಲೇ ಕುಟುಂಬಸ್ಥರ ಜೊತೆ ಸಮಯ ಕಳೆಯುವುದು ಅನಿವಾರ್ಯವಾಗಿದೆ.
ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಪತ್ನಿ ಜೊತೆ Table Tennis ಆಟವಾಡಿದ್ದಾರೆ. ಈ ವಿಡಿಯೋವನ್ನು ಪತ್ನಿ ಶಿಲ್ಪಾ ಗಣೇಶ್ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗಣೇಶ್ ಲೈಫಿನ 'ಗೋಲ್ಡನ್' ಕ್ವೀನ್; ಶಿಲ್ಪಾ ಗಣೇಶ್ ಎಷ್ಟು ಸ್ಟೈಲಿಶ್ ನೋಡಿ!
ಕನ್ನಡ ಚಿತ್ರರಂಗದ ಜಾಲಿ ಕಪಲ್ ಎಂದೇ ಹೆಸರು ಗಳಿಸಿರುವ ಶಿಲ್ಪಾ- ಗಣೇಶ್ ಬಿಡುವಿನ ಸಮಯದಲ್ಲಿ ಅಥವಾ ಯಾರದ್ದೇ ಬರ್ತಡೇ ಪಾರ್ಟಿ, ಗೆಟ್- ಟುಗೆದರ್ ಇರಲಿ ತಮ್ಮ ಮನೆಯಲ್ಲೇ ಹೆಚ್ಚಾಗಿ ಆಚರಿಸುತ್ತಾರೆ. ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ -2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಗಣೇಶ್ ಈಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಇಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶಾದ್ಯಂತ ಜನತಾ ಕರ್ಫ್ಯೂ ಇದ್ದು, ಯಾರೂ ಮನೆಯಿಂದ ಹೊರ ಬಾರದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ಹಾಗೇ ಸಂಜೆ 5 ಗಂಟೆಗೆ, ಜನರು ತಾವಿದ್ದಲ್ಲೇ ಚಪ್ಪಾಳೆ ತಟ್ಟುವ ಮೂಲಕ ಅಥವಾ ಜಾಗಟೆ ಬಾರಿಸಿ ಅಥವಾ ಶಂಖ ಊದುವ ಮೂಲಕ ಕರೋನಾ ವೈರಸ್ ಹೊಡೆದೋಡಿಸಲು ಹೋರಾಡುತ್ತಿರುವ ವರ್ಗದ ಜನರಿಗೆ ಸಲಾಂ ಹೇಳಲೂ ಕೋರಿದ್ದಾರೆ. ಇದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವೂ ಹೌದು, ರೋಗ ಹಬ್ಬದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.