ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್‌

Kannadaprabha News   | Asianet News
Published : Apr 06, 2020, 04:24 PM ISTUpdated : Apr 06, 2020, 05:05 PM IST
ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್‌

ಸಾರಾಂಶ

ಕೊರೋನಾ ಪರಿಣಾಮ ಸಂಕಷ್ಟದಲ್ಲಿರುವ ಜನರ ನೆರವಿಗೆ ಈಗಾಗಲೇ ಹಲವು ಸೆಲಿಬ್ರಿಟಿಗಳು ಸಹಾಯದ ಹಸ್ತ ನೀಡಿರುವ ಹಾಗೆಯೇ ನಟ ಡಾಲಿ ಧನಂಜಯ್‌ ಕೂಡ ಅಸಹಾಯಕ ಜನರ ನೆರವಿಗೆ ನಿಂತಿದ್ದಾರೆ.

ಕಳೆದ ಮೂರ್ನಾಲ್ಕುದಿನಗಳಿಂದ ಬೆಂಗಳೂರಿನ ನಾಗರಭಾವಿ, ಕಮಲಾನಗರ, ಉಲ್ಲಾಳ ಸೇರಿದಂತೆ ವಿವಿಧೆಡೆಗಳಲ್ಲಿ ಕೊರೋನಾ ಸಂಕಷ್ಟದಲ್ಲಿದ್ದ ಬಡ ಜನರಿಗೆ ‘ಪೀಪಲ್‌ ಫಾರ್‌ ಪೀಪಲ್‌’ ಮತ್ತು ‘ಜನರಾಸಿಟಿ ಛಾಲೆಂಜರ್ಸ್‌’ ಸಂಸ್ಥೆಯ ಸದಸ್ಯರೊಂದಿಗೆ ಆಹಾರ ಸಾಮಾಗ್ರಿ ವಿತರಿಸಿದರು.

FaceApp ಕೊಡ್ತು ಡಾಲಿ ಧನಂಜಯ್‌ಗೆ ರಗಡ್‌ ಲುಕ್!

ಸಕಲ ವೈದ್ಯಕೀಯ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ನಾಲ್ಕೈದು ವಾಹನಗಳಲ್ಲಿ ಊಟದ ಪದಾರ್ಥಗಳು, ಔಷಧ ಸಾಮಾಗ್ರಿಗಳನ್ನು ತೆಗೆದುಕೊಂಡು ಬಡ ಜನರ ಬಳಿಗೆ ತೆರಳುತ್ತಿದ್ದರು.ನಟ ಧನಂಜಯ್‌ ಜತೆಗೆ ಜನರಾಸಿಟಿ ಛಾಲೆಂಜರ್ಸ್‌ನ ಸೂರ್ಯ ಮುಕುಂದ ರಾಜ್‌, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ ಮತ್ತಿತರು ಪಾಲ್ಗೊಂಡಿದ್ದರು. ಸುಮಾರು 500 ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟುಆಹಾರ ಪದಾರ್ಥಗಳನ್ನು ಡಾಲಿ ಧನಂಜಯ್‌ ತಮ್ಮದೇ ಹಣದಲ್ಲಿ ಖರೀದಿಸಿ ವಿತರಿಸಿದ್ದಾರೆ. ಸುಮಾರು ಒಂದು ಸಾವಿರ ಎಪ್ಪತೈದು ಕುಟುಂಬಗಳಿಗೆ ಆಹಾರ ಪದಾರ್ಥ ವಿತರಿಸಲು ಈ ತಂಡ ಮುಂದಾಗಿದೆ.

 

ಮೈಸೂರಿನಲ್ಲೂ ಡಾಲಿ:

ಒಂದೊಂದು ದಿನ ಒಂದೊಂದು ಕಡೆ ಎನ್ನುವಂತೆ ತಮ್ಮ ಗೆಳೆಯರ ಜತೆ ಸೇರಿ ಹೀಗೆ ಹಸಿವಿಗೆ ಮಿಡಿಯುತ್ತಿರುವ ಡಾಲಿ, ಈಗ ಮೈಸೂರು ಜಿಲ್ಲೆಯ ಕೆಆರ್‌ ನಗರ ತಾಲೂಕಿನ ಮೇಲೂರು ಗ್ರಾಮದ ಸುತ್ತಮುತ್ತ ಇರುವ ಕೂಲಿ ಜನರ ಬಳಿಗೇ ತೆರಳಿ ತಕ್ಷಣಕ್ಕೆ ಬಳಸಬಹುದಾದ ಆಹಾರ ಸಾಮಾಗ್ರಿಗಳ ಜತೆಗೆ ಊಟದ ಪೊಟ್ಟಣಗಳನ್ನು ವಿತರಿಸಿದ್ದಾರೆ. ಆ ಮೂಲಕ ಕೊರೋನಾ ಎಫೆಕ್ಟ್ ನಿಂದ ದುಡಿಯಲು ಆಗದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡವರ ಹಸಿವಿಗೆ ಧನಂಜಯ್‌ ತಂಡ ಸ್ಪಂದಿಸಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ