
ಬೆಂಗಳೂರು (ಡಿ.25) ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಾಡಿರುವ ಕೆಟ್ಟ, ಅಶ್ಲೀಲ ಕಾಮೆಂಟ್‌ಗಳ ವಿರುದ್ದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಭಿಮಾನದ ಹುಚ್ಚಾಟದಲ್ಲಿ ಅಶ್ಲೀಳ ಕಮೆಂಟ್ ಮಾಡಿ ಕಿರುಕುಳ ನೀಡಿರುವ ಕುರಿತು ವಿಜಯಲಕ್ಷ್ಮಿ ಸಿಸಿಬಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಇದೀಗ ಮೂರು ತಂಡಗಳಾಗಿ ತನಿಖೆ ಆರಂಭಿಸಿದ್ದಾರೆ. ಪ್ರಮುಖವಾಗಿ ನಕಲಿ ಖಾತೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಲು ಸಿಸಿಬಿ ಮುಂದಾಗಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು 3 ತಂಡಗಳಾಗಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಈಗಾಗಲೇ ಮೆಟಾ ಸಂಸ್ಥೆಯಿಂದ ಕೆಟ್ಟ ಕಮೆಂಟ್ ಮಾಡಿರುವ ಖಾತೆಗಳ ಕುರಿತು ಮಾಹಿತಿ ಕೇಳಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ 18 ಖಾತೆಗಳ ವಿರುದ್ಧ ದೂರು ನೀಡಿದ್ದರು. ಈ 18 ಖಾತೆ ಸೇರಿದಂತೆ ಕೆಟ್ಟ, ನಿಯಮ ಮೀರಿ ಕಮೆಂಟ್ ಮಾಡುತ್ತಿರುವ ನಕಲಿ ಖಾತೆಗಳ ಕುರಿತೂ ಪೊಲೀಸರು ಮೆಟಾದಿಂದ ಮಾಹಿತಿ ಕೇಳಿದ್ದಾರೆ. ಡಿಸೆಂಬರ್ 26ರೊಳಗೆ ಖಾತೆಗಳ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಈಗಾಗಲೇ ಬಳಕೆದಾರರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಕಲಿ ಖಾತೆಗಳು ಯಾವ ಐಪಿ ಅಡ್ರೆಸ್ ಬಳಸಿ ಕಮೆಂಟ್ ಮಾಡಿದ್ದಾರೆ ಅನ್ನೋ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಐಪಿ ಅಡ್ರೆಸ್ ನಲ್ಲಿ ಯಾವ ನಂಬರ್ ಆಕ್ಟೀವ್ ಅಗಿದೆ ಅನ್ನೋ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಫೇಕ್ ಅಕೌಂಟ್ ನಲ್ಲೇ ಕಾಮೆಂಟ್ ಮಾಡುವವರಿಗೂ ಬಿಸಿ ಮುಟ್ಟಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ನೀಡಿರುವ ದೂರಿನಲ್ಲಿ 18 ಸೋಶಿಯಲ್ ಮೀಡಿಯಾ ಖಾತೆಗಳನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲಾ ಖಾತೆಗಳ ವಿವರವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿಜಯಲಕ್ಷ್ಮಿ ಬಗ್ಗೆ ನಿಂದನೆ, ಬೆದರಿಕೆ ಹಾಕಿದ್ದವರಿಗೆ ಸಿಸಿಬಿ ತಲಾಶ್ ಮಾಡಲಾಗುತ್ತಿದೆ. ಡಿ.21ರಿಂದ ಸೋಷಿಯಲ್ ಮೀಡಿಯಾದಲ್ಲಿ ಹುಚ್ಚಾಟ ಮೆರೆದವರಿಗೆ ಹುಡುಕಾಟ ನಡೆಸಲಾಗುತ್ತಿದೆ. ಅಸಲಿ ಖಾತೆ, ನಕಲಿ ಖಾತೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.