ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಓಡಿದ ಪತ್ನಿ: ವರ್ಕ್‌ ಫ್ರಂ ಹೋಂನ ಫಜೀತಿ!

By Suvarna News  |  First Published Aug 4, 2020, 4:07 PM IST

ಕೊರೊನಾದಿಂದಾಗಿ ಅನೇಕ ಸಂಸ್ಥೆಗಳ ಉದ್ಯೋಗಿಗಳು ವರ್ಕ್‌ ಫ್ರಂ ಹೋಮ್‌ ಮಾಡುತ್ತಿದ್ದಾರೆ. ಆದರೆ ಆನ್‌ಲೈನ್‌ ವಿಡಿಯೋ ಮೀಟಿಂಗ್‌ ಮಾಡುವಾಗ, ಲೈವ್‌ ಮೀಟಿಂಗ್‌ನಲ್ಲಿ ಭಾಗವಹಿಸುವಾಗ ಉಂಟಾಗುವ ಹಲವು ಫಜೀತಿಗಳು ನಗೆ ಉಕ್ಕಿಸುತ್ತವೆ.


ಆತ ಕಂಪನಿಯೊಂದರ ಉದ್ಯೋಗಿ. ಮನೆಯಿಂದಲೇ ಲೈವ್‌ ಕಾನ್ಫರೆನ್ಸ್ ಕಾಲ್‌ ಅಟೆಂಡ್‌ ಮಾಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಆತನ ಬ್ಯಾಕ್‌ಗ್ರೌಂಡ್‌ನಲ್ಲಿ ಅವನ ಗರ್ಲ್‌ಫ್ರೆಂಡ್‌ ಆಲ್ಮೋಸ್ಟ್‌ ಬೆತ್ತಲೆಯಾಗಿ ಟ್ರೇ ಹಿಡಿದುಕೊಂಡು ಹೋಗುತ್ತಿದ್ದಾಳೆ. ಇದನ್ನು ಮೀಟಿಂಗ್‌ನಲ್ಲಿ ಇದ್ದವರೆಲ್ಲ ನೋಡುತ್ತಾರೆ. ನಗುತ್ತಾರೆ. ಉದ್ಯೋಗಿ ಪೆಚ್ಚಾಗಿದ್ದಾನೆ. ಇನ್ನೂ ಮುಜುಗರದ ಸಂಗತಿಯೆಂದರೆ, ತಾನೂ ಅವಳೂ ಬ್ರೇಕಪ್‌ ಆಗಿದ್ದೇವೆ ಎಂದು ಆತ ಹೇಳಿಕೊಂಡಿದ್ದ. ಅವನ ಸುಳ್ಳು ಎಕ್ಸ್‌ಪೋಸ್‌ ಆಗಿದೆ.
ಈ ಘಟನೆಯ ವಿಡಿಯೋ ಇಲ್ಲಿದೆ ನೋಡಿ:


ಇದೇ ವಿಡಿಯೋದಲ್ಲೇ ಮಿಯಾಮಿ ಪ್ರೊಫೆಸರ್‌ ಒಬ್ಬನ ಅವಾಂತರವನ್ನೂ ನೋಡಬಹುದು. ಆತನೂ ಲೈವ್‌ ಮೀಟಿಂಗ್‌ ಅಟೆಂಡ್‌ ಮಾಡುತ್ತಿದ್ದ. ಆದರೆ ಅವನು ಡೆಸ್ಕ್‌ಟಾಪ್‌ನಲ್ಲಿ ಗೂಗಲ್‌ನಲ್ಲಿ ಏನು ಸರ್ಚ್‌ ಮಾಡುತ್ತಿದ್ದ ಎಂಬುದು ಜೂಮ್ ಮಾಡಿ ನೋಡಿದಾಗ ಕಾಣಿಸಿತು- ಅವನು ಪೋರ್ನ್‌ ಸರ್ಚ್ ಮಾಡುತ್ತಿದ್ದ!

Tap to resize

Latest Videos

undefined

ವರ್ಕ್ ಫ್ರಂ ಹೋಂ ಆಯ್ತು, ಈಗಿನ ಟ್ರೆಂಡ್ ವರ್ಕ್ ಫ್ರಂ ಹಿಲ್ಸ್ 


ಕೊರೊನಾದಿಂದಾಗಿ ಎಲ್ಲೆಡೆ ಈಗ ವರ್ಕ್‌ ಫ್ರಮ್ ಹೋಮ್‌ ನಡೆಯುತ್ತಿದೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಆದರೆ ಈಗಿನ ಕಾಲದಲ್ಲಿ ಟೆಕಿಗಳಿಗೂ ಇತರ ಕೆಲಸದಲ್ಲಿ ಇರುವವರಿಗೂ ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮುಂತಾದವು ಅನಿವಾರ್ಯ. ಅಂಥ ಹೊತ್ತಿನಲ್ಲಿ ಎಷ್ಟೇ ಜಾಗರೂಕತೆ ಮಾಡಿದರೂ ಕೆಲವು ಎಡವಟ್ಟುಗಳು ಆಗಿಯೇ ಆಗುತ್ತವೆ. ಕ್ಯಾಮೆರಾ ಆನ್‌ ಆಗಿದೆ ಎಂದೇ ಗೊತ್ತಿಲ್ಲದೆ ವಕ್ರ ವಕ್ರವಾಗಿ ವರ್ತಿಸುವುದು, ಸೀರಿಯಸ್‌ ಆಗಿ ಕೆಲಸದಲ್ಲಿ ತೊಡಗಿರುವಾಗ ಮಕ್ಕಳು ಬಂದು ಪೀಡಿಸುವುದು- ಇವು ಮುಂತಾದವೆಲ್ಲ ಇದ್ದದ್ದೇ. ಅಂಥ ಎಡವಟ್ಟುಗಳೆಲ್ಲ ಈಗ ಯೂಟ್ಯೂಬ್ ಮತ್ತಿತರ ಕಡೆ ನಿಮಗೆ ಸಾಕಷ್ಟು ನೋಡಲು ಸಿಗುತ್ತವೆ. 


ಇನ್ನೊಬ್ಬಳು ಅಡುಗೆ ಮನೆಯಿಂದ ಲೈವ್‌ ಡೆಮೋ ಕೊಡುತ್ತಾ ಇರುವಾಗ ಆಕೆಯ ಗಂಡ ಬೆತ್ತಲೆ ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಒಳನುಗ್ಗುತ್ತಾನೆ. ಮತ್ತೊಬ್ಬಾಕೆಯ ಗಂಡ ಬರೀ ಕಾಚ ಹಾಕಿಕೊಂಡು ಪ್ಯಾಂಟೇನೂ ಧರಿಸದೆ ಕ್ಯಾಮೆರಾ ಮುಂದೆ ಪ್ರತ್ಯಕ್ಷನಾಗುತ್ತಾನೆ. ಇನ್ನೊಬ್ಬ ಕಾನ್ಫರೆನ್ಸ್‌ ಮುಗಿಯಿತೆಂದು ಎದ್ದು ಕ್ಯಾಮೆರಾ ಆಫ್‌ ಮಾಡದೆ ಪೃಷ್ಠ ನೀವಿಕೊಳ್ಳುತ್ತಾ ಓಡಾಡುತ್ತಾನೆ. ಉಳಿದವರೆಲ್ಲ ಅವನನ್ನು ನೋಡುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಮತ್ತೊಂದು ಕಡೆ ಒಬ್ಬಾಕೆ ಸೀರಿಯಸ್ಸಾಗಿ ಏನೋ ಹೇಳುತ್ತಿರುವಾಗ ಆಕೆಯ ಮಗಳು ಹಿಂದಿನಿಂದ ಬಂದು ಸ್ಟೂಲು ಇಟ್ಟು ಅದರ ಮೇಲೆ ಹತ್ತಿ ಡ್ಯಾನ್ಸ್ ಮಾಡುತ್ತಾಳೆ. 
ಈ ದೃಶ್ಯಗಳನ್ನು ಇಲ್ಲಿ ನೋಡಬಹುದು:


ಬಿಬಿಸಿ ಚಾನೆಲ್‌ನಲ್ಲಿ ರಾಬರ್ಟ್ ಕೆಲ್ಲಿ ಎಂಬ ಪ್ರೊಫೆಸರ್‌ ಒಬ್ಬ ಸೀರಿಯಸ್ಸಾಗಿ ಏನೋ ಭಾಷಣ ಕೊಡುತ್ತಾ ಇದ್ದ. ಅಷ್ಟರಲ್ಲಿ ಅವನ ಇಬ್ಬರು ಮಕ್ಕಳು ಏಕಾಏಕಿ ಕೋಣೆಗೆ ನುಗ್ಗಿಬಿಟ್ಟರು. ಅಯ್ಯೋ ಮಕ್ಕಳು ಅನಾಹುತ ಮಾಡಿಬಿಟ್ಟವು ಅಂತ ಅವನ ಪತ್ನಿಯೂ ಒಳಗೆ ನುಗ್ಗಿ ಅವರನ್ನು ಎತ್ತಾಕಿಕೊಂಡು ಹೋದಳು. ಇದೆಲ್ಲವೂ ಲೈವ್‌ನಲ್ಲಿ ದಾಖಲಾಯಿತು. 
ವಿಡಿಯೋ: 

ಇನ್ನು ಬೆಕ್ಕು, ನಾಯಿ ಮುಂತಾದ ಸಾಕುಪ್ರಾಣಿಗಳು ತಮ್ಮ ಒಡೆಯನ ಮಡಿಲಿಗೆ ಜಿಗಿಯುವುದು, ಮಕ್ಕಳು ಬಂದು ಅಂಗಿ ಹಿಡಿದು ಎಳೆಯುವುದು- ಇವೆಲ್ಲ ಮಾಮೂಲಿ. 

ಆ ಮನುಷ್ಯ ತೋಳಿನ ಮೇಲೇ ಶಿಶ್ನ ಬೆಳೆಸಿಕೊಂಡ!

ಏನೇ ಆಗಲಿ. ಇಂಥ ಪೇಚಿನ ಕ್ಷಣಗಳು ಪ್ರಮಾದದಿಂದ ಆಗುವಂಥದು. ಎಷ್ಟೇ ಸೀರಿಯಸ್‌ ಆದ ಡಿಸ್ಕಶನ್‌ ನಡೆಯುತ್ತಿದ್ದರೂ ಇಂಥ ಕ್ಷಣಗಳು ಒಂದು ನಗುವನ್ನು ಅಲ್ಲಿದ್ದವರ ಮುಖದ ಮೇಲೆ ಹಾಯಿಸುತ್ತವೆ ಎಂಬುದು ನಿಜ.

ಇದನ್ನೂ ನೋಡಿ | ಬೆಂಗ್ಳೂರಿನಲ್ಲೂ ನಗ್ನವಾಗಿ ರಸ್ತೆಗಿಳಿದಿದ್ದ ಸೈಕ್ಲಿಸ್ಟ್!

"

click me!