ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಹಾಕಲು ಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ.
ಬೆಂಗಳೂರು, (ಜುಲೈ.26): ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ನಲ್ಲಿ ವಿವಿಧ 510 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಯೋಜನಾ ಸಮನ್ವಯಕಾರರು 10, ಯಂಗ್ ಫೆಲೋ 250, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
undefined
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
1. ರಾಜ್ಯ ಯೋಜನಾ ಸಮನ್ವಯಕಾರ ಹುದ್ದೆ
* ರಾಜ್ಯ ಯೋಜನಾ ಸಮನ್ವಯಕಾರ ಹುದ್ದೆಗೆ ಅರ್ಥಶಾಸ್ತ್ರ / ಗ್ರಾಮೀಣ ಅಭಿವೃದ್ಧಿ/ ಗ್ರಾಮೀಣ ನಿರ್ವಹಣೆ/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ /ಸಾಮಾಜಿಕ ಕಾರ್ಯ/ ಅಭಿವೃದ್ದಿ ಅಧ್ಯಯನ ವಿಷಯದಲ್ಲಿ ಸ್ನಾತಕೊತ್ತರ ಪದವಿ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: ಗುತ್ತಿಗೆ ವೇತನ ಮಾಸಿಕ 55,000 ರೂ. ಇರುತ್ತದೆ.
2. ಯಂಗ್ ಫೆಲೋ ಹುದ್ದೆ
* ಯಂಗ್ ಫೆಲೋ ಹುದ್ದೆಗೆ ಮೇಲೆ ತಿಳಿಸಿದ ವಿದ್ಯಾರ್ಹತೆಯೇ ಇದಕ್ಕೂ ಅನ್ವಯಿಸುತ್ತದೆ.
* ಮಾಸಿಕ ವೇತನ 35ಸಾವಿರ ರೂ. ಇರುತ್ತದೆ.
3 ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹುದ್ದೆ
* ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು.
* ಮಾಸಿಕ ವೇತನ 12,500/- ರೂ. ಇರುತ್ತದೆ.
ಆಗಸ್ಟ್ 10ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಎನ್ಐಆರ್ಡಿಪಿ ವೆಬ್ಸೈಟ್ http://nirdpr.org.in ನೊಡಬಹುದು.