ಎಷ್ಟೇ ತಯಾರಿ ನಡೆಸಿದ್ರೂ ಸಂದರ್ಶನದಲ್ಲಿ ಪಾಸ್ ಆಗೋದು ಕಷ್ಟ ಎನ್ನುವವರಿದ್ದಾರೆ. ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ರೂ ಕಾನ್ಫಿಡೆನ್ಸ್ ಇಲ್ಲದ ಕಾರಣ ಅಥವಾ ಏನೇನೋ ಮರುಪ್ರಶ್ನೆ ಕೇಳುವ ಕಾರಣ ಕೆಲಸ ಸಿಗೋದಿಲ್ಲ. ಅಂಥವರು ನೀವೂ ಆಗಿದ್ರೆ ಈಕೆ ಟಿಪ್ಸ್ ಫಾಲೋ ಮಾಡಿ ನೋಡಿ.
ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಹಾಗಂತ ಉದ್ಯೋಗ ಕಡಿಮೆ ಆಗಿದೆ ಎಂದಲ್ಲ. ಭಾರತದಲ್ಲಿ ಸಾಕಷ್ಟು ಕ್ಷೇತ್ರದಲ್ಲಿ ಉದ್ಯೋಗವಕಾಶವಿದೆ. ಆದ್ರೆ ಯುವಜನರು ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದೆ ಬರ್ತಿಲ್ಲ. ಹೆಚ್ಚು ಸಂಬಳದ, ಒಳ್ಳೆ ಉದ್ಯೋಗವನ್ನೇ ಜನರು ಬಯಸ್ತಿದ್ದಾರೆ. ಎಲ್ಲರಿಗೂ ಇಂಥ ಕೆಲಸ ಸಿಗಲು ಸಾಧ್ಯವಿಲ್ಲ. ಕೆಲಸಕ್ಕೆ ಅರ್ಜಿ ಆಹ್ವಾನಿಸಿದಾಗ ನೂರಾರು ಜನರು ಸಿವಿ ಕಳಿಸ್ತಾರೆ. ಸಿವಿ ಕಳಿಸಿದ ಕಡೆಯಲ್ಲೆಲ್ಲ ಸಂದರ್ಶನಕ್ಕೆ ಕರೆಯೋದಿಲ್ಲ. ಸಂದರ್ಶನಕ್ಕೆ ಕರೆ ಬಂದ್ರೂ ಎಲ್ಲರೂ ಅದ್ರಲ್ಲಿ ಪಾಸ್ ಆಗಿ ಕೆಲಸ ಗಿಟ್ಟಿಸಿಕೊಳ್ಳೋದಿಲ್ಲ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಅವರನ್ನು ತಲೆಕೆಳಗು ಮಾಡುತ್ತದೆ. ಏನು ಹೇಳ್ಬೇಕು ಎಂಬುದು ಗೊತ್ತಾಗದೆ ಗೊಂದಲಕ್ಕೊಳಗಾದಾಗ ಸಂದರ್ಶನದಲ್ಲಿ ಫೇಲ್ ಆಗ್ತಾರೆ. ಕೆಲವೊಬ್ಬರು ಸಂದರ್ಶನದಲ್ಲಿ ಏನು ಮಾತಾಡಬೇಕು ಎಂಬುದನ್ನು ತಿಳಿದಿರುತ್ತಾರೆ. ಅಂಥವರು ಎಷ್ಟೇ ಇಂಟರ್ವ್ಯೂ ಬಂದ್ರೂ ಎಲ್ಲವನ್ನು ಪಾಸ್ ಆಗ್ತಾರೆ. ಅದ್ರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ಯಾವುದೇ ಇಂಟರ್ವ್ಯೂಗೆ ಹೋದ್ರೂ ಆಕೆ ಪಾಸ್ ಆಗಿ ಬರ್ತಾಳೆ. ಎಲ್ಲ ಕಡೆ ಆಕೆಗೆ ಕೆಲಸ ಸಿಗುತ್ತೆ. ಅದಕ್ಕೆ ಕಾರಣವೇನು, ಏನು ಮಾಡ್ಬೇಕು ಎಂಬುದನ್ನು ಆಕೆ ಹೇಳಿದ್ದಾಳೆ.
ಎಲ್ಲ ಸಂದರ್ಶನ (Interview) ದಲ್ಲಿ ಪಾಸ್ ಆಗುವ ಮಹಿಳೆ ಹೆಸರು ಕ್ಯಾಥರೀನ್ ಲಾಕ್ಹಾರ್ಟ್ (Catherine Lockhart) . ಟೆಕ್ಸಾಸ್ ನಿವಾಸಿ. 28 ವರ್ಷದ ಈಕೆ ಸಂದರ್ಶನದ ಕೊನೆಯಲ್ಲಿ ಕೆಲ ಪ್ರಶ್ನೆ ಕೇಳ್ತಾಳೆ. ಇಂಟರ್ವ್ಯೂಗೆ ಹೋದ ಮಹಿಳೆ, ಸಂದರ್ಶನ ಮಾಡ್ತಿರುವವರು ಕೇಳುವ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ ನಂತ್ರ ತಾನೊಂದು ಪ್ರಶ್ನೆ ಕೇಳ್ತಾಳೆ. ನೀವು ಕೂಡ ಇಂಥ ಪ್ರಶ್ನೆ ಕೇಳಬಹುದು. ಇದು ಅಗತ್ಯ ಕೂಡ. ಈ ಪ್ರಶ್ನೆ ಮುಂದಿರುವವರನ್ನು ಸೆಳೆಯುವುದಲ್ಲದೆ, ನಿಮಗೆ ಕೆಲಸ ನೀಡಲು ಪ್ರೋತ್ಸಾಹಿಸುತ್ತದೆ ಎಂದು ಮಹಿಳೆ ಹೇಳಿದ್ದಾಳೆ.
undefined
ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ, 40 ಲಕ್ಷದಷ್ಟು ಭಾರೀ ಏರಿಕೆ!
ಸಂದರ್ಶನಕ್ಕೆ ಹೋದಾಗ ಏನು ಪ್ರಶ್ನೆ ಕೇಳಬೇಕು? : ಮಹಿಳೆ ಪ್ರಕಾರ, ಸಂದರ್ಶನಕ್ಕೆ ಹೋದ ನೀವು ಕೊನೆಯಲ್ಲಿ ಕೆಲಸದ ಬಗ್ಗೆ ಮಾಹಿತಿ ಪಡೆಯಬೇಕು. ಅಂದ್ರೆ ದಿನದ ಕೆಲಸ ಹೇಗಿರುತ್ತದೆ, ಏನೆಲ್ಲ ಕೆಲಸವಿರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ನೀವು ಕೇಳಬೇಕು. ಆಗ ನಿಮಗೆ ಕೆಲಸದ ಮೇಲೆ ಆಸಕ್ತಿ ಇದೆ. ನೀವು ಕೆಲಸವನ್ನು ಖುಷಿಯಿಂದ ಮಾಡಲು ಬಯಸುತ್ತೀರಿ ಎಂದು ಅವರು ಭಾವಿಸ್ತಾರೆ. ಅಲ್ಲದೆ ನಿಮಗೆ ಕೆಲಸ ನೀಡಲು ಆಸಕ್ತಿ ತೋರುತ್ತಾರೆ ಎನ್ನುತ್ತಾಳೆ ಕ್ಯಾಥರೀನ್ ಲಾಕ್ಹಾರ್ಟ್.
ಕೆಲಸದ ಬಗ್ಗೆ ನೀವು ಏನಾದ್ರೂ ತಿಳಿಯಲು ಬಯಸಿದ್ದೀರಾ ಎಂದು ಸಂದರ್ಶನಕಾರರು ನಿಮ್ಮನ್ನು ಕೇಳಿದ್ರೆ ಅದಕ್ಕೆ ಹೌದು ಎನ್ನಬೇಕು. ಅಲ್ಲದೆ ಕೆಲಸದ ಬಗ್ಗೆ ನೀವು ಪ್ರಶ್ನೆ ಕೇಳಬೇಕು. ಆಗ ಅವರ ಬಾಯಿಂದ ವಾಹ್ ಎನ್ನುವ ಶಬ್ಧ ಬಂದೇ ಬರುತ್ತದೆ ಎನ್ನುತ್ತಾಳೆ ಕ್ಯಾಥರೀನ್ ಲಾಕ್ಹಾರ್ಟ್.
ಮ್ಯಾಗಝಿನ್ ಮಾಡೆಲ್‌ಗಳಂತೆ ಇರಬೇಕಿಲ್ಲ, ನಾನೂ ಹಾಗೆ ಇಲ್ಲ; ಪ್ರಿಯಾಂಕಾ ಮಾತಿಗೆ ಬಾಲಿವುಡ್ ಶೇಕ್!
ಸಂದರ್ಶನದಲ್ಲಿ ಯಾವ ಪ್ರಶ್ನೆ ಕೇಳಬಾರದು? : ಸಂದರ್ಶನದಲ್ಲಿ ಏನು ಮಾತನಾಡಬಾರದು ಎಂಬುದನ್ನು ಕೂಡ ಕ್ಯಾಥರೀನ್ ಲಾಕ್ಹಾರ್ಟ್ ಹೇಳಿದ್ದಾಳೆ. ಆಕೆ ಪ್ರಕಾರ, ಸಂದರ್ಶನಕ್ಕೆ ಹೋದ ವ್ಯಕ್ತಿಗಳು ಪಾವತಿಸಿದ ಸಮಯ ಅಥವಾ ರಜೆಗಳ ಬಗ್ಗೆ ಎಂದಿಗೂ ಕೇಳಬಾರದು. ಅಲ್ಲದೆ ಏನೆಲ್ಲ ಆಫರ್ ಗಳು ನಮಗೆ ಸಿಗ್ತಿವೆ ಎಂಬುದನ್ನು ಕೂಡ ಕೇಳಬಾರದು ಎನ್ನುತ್ತಾಳೆ ಕ್ಯಾಥರೀನ್ ಲಾಕ್ಹಾರ್ಟ್. ಈಕೆ ಮಾತಿಗೆ ಅನೇಕರು ಒಪ್ಪಿಗೆ ನೀಡಿದ್ದಾರೆ. ಆದ್ರೆ ಮತ್ತೆ ಕೆಲವರು, ಈ ಎಲ್ಲ ಪ್ರಶ್ನೆ ಕೇಳಿದ್ರೆ ಸಂದರ್ಶನಕಾರ ನಿಮ್ಮನ್ನು ಹೊರಗೂ ಹಾಕಬಹುದು ಎಂದಿದ್ದಾರೆ. ಮತ್ತೆ ಕೆಲವರು, ರಜೆ ಬಗ್ಗೆ ತಿಳಿಯಬಹುದು. ಯಾಕೆಂದ್ರೆ ಸಂದರ್ಶನ ಮಾಡುವ ವ್ಯಕ್ತಿ ಕೂಡ ಕಂಪನಿ ಉದ್ಯೋಗಿ ಆಗಿರುವ ಕಾರಣ, ಆತ ಇದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.